LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಶಿಕ್ಷಣದ ಜೊತೆ ಸಂಸ್ಕಾರಮುಖ್ಯ - ವೇ|| ರಾಚಯ್ಯ ಶಾಸ್ತ್ರಿ




ತಾಳಿಕೋಟೆ: ತಂದೆ ತಾಯಿ ಅವರು ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರ ಕೊಡುವದು ಮುಖ್ಯವಾಗಿದೆ ಒಂದು ವೇಳೆ ಒಳ್ಳೆಯ ಸಂಸ್ಕಾರ ನಿಡದಿದ್ದರೆ ಅದೇ ತಂದೆ ತಾಯಿಗಳೇ ವೃದ್ದಾಶ್ರಯ ಸೇರಬೇಕಾಗುತ್ತದೆ ಎಂದು ಯಾತಗಿರಿ ಜಿಲ್ಲೆಯ ರೊಟ್ನೊಟಗಿಯ ಖ್ಯಾತ ಪುರಾಣ ಪ್ರವಚನಕಾರರಾದ ವೇ|| ರಾಚಯ್ಯಶಾಸ್ತ್ರಿಗಳು ನುಡಿದರು. 
       ಮಂಗಳವಾರರಂದು ಶ್ರೀ ಖಾಸ್ಗತೇಶ್ವರರ ೧೩೦ ನೇಯ ಹಾಗೂ ವಿರಕ್ತಮಹಾಸ್ವಾಮಿಗಳವರ ೧೨ ನೇ ಪುಣ್ಯ ಸ್ಮರಣೋತ್ಸವ ಕುರಿತು ಶ್ರೀ ಖಾಸ್ಗತೇಶ್ವರ ಮಠದಲ್ಲಿ ಏರ್ಪಡಿಸಲಾದ ೪ ದಿನಗಳ ಪ್ರವಚನದಲ್ಲಿ ಮಾತನಾಡುತ್ತಿದ್ದ ಶ್ರೀಗಳು ತಂದೆ ತಾಯಿಗಳಿಗೆ ತುತ್ತು ಅನ್ನ ಹಾಕಲಾರದಂತಹ ಕೆಲವು ಮಕ್ಕಳನ್ನು ಕಾಣುತ್ತಲಿದ್ದೇವೆ ಇದು ತಂದೆ ತಾಯಿಯವರ ಚಿಕ್ಕಂದಿನಿಂದ ಸಂಸ್ಕಾರ ಕಲಿಸಲಾರದ್ದೇ ಕಾರಣವೆಂದರು. ೯ ತಿಂಗಳು ಹೊಟ್ಟೆಯಲ್ಲಿ ಹೊತ್ತುಕೊಂಡು ಸಾವಿನ ಸಮಿಪಕ್ಕೆ ಹೋಗಿ ಜನ್ಮ ನೀಡಿದ ತಾಯಿ ತಂದೆಗೆ ಸಾವಿನ ಸಮಯ ಬಂದಾಗಲು ತಮಗೆ ಸಮಯವೇ ಇಲ್ಲಾವೆನ್ನುವಂತಹ ಮಕ್ಕಳು ಸಹ ಇದ್ದಾರೆ ಇಂತಹ ಮಕ್ಕಳಿಗೆ ಜನ್ಮ ಕೊಡುವದಕ್ಕಿಂತ ಆ ತಾಯಿಯಾದವಳು ಬಂಜೆಯಾಗಿರುವದೇ ಶ್ರೇಷ್ಠವೆಂದಳು ಇಂತಹ ಮಕ್ಕಳು ಸಮಾಜವನ್ನು ಹಾಳು ಮಾಡುತ್ತಾರೆಂದು ಹೇಳಿದ ಅವರು ಮೊದಲು ಸಂಸ್ಕಾರ ನೀತಿ ಪಾಠಗಳನ್ನು ಹೇಳಿಕೊಡಬೇಕಾಗಿತ್ತು ತಂದೆ ತಾಯಿ ಮಾಡುವಂತಹ ಕಾರ್ಯವನ್ನೇ ಮಕ್ಕಳು ಅನುಸರಿಸುತ್ತಾರೆಂದರು. ತಂದೆ ತಾಯಿ ಗುರು ಕಲಿಸುವಂತಹ ನೀತಿ ಪಾಠ ಯಾವ ವಿಶ್ವ ವಿದ್ಯಾಲಯದಲ್ಲಿಯೂ ಕಲಿಸುವದಿಲ್ಲಾ ತಂದೆ ತಾಯಿ ತಪ್ಪು ದಾರಿಯಲ್ಲಿ ಸಾಗಿದರೆ ಮಕ್ಕಳು ತಪ್ಪುದಾರಿಯಲ್ಲಿ ಸಾಗುತ್ತಾರೆಂದರು. ಇಂದಿನ ದಿನಮಾನದಲ್ಲಿ ನಡೆದಂತಹ ಶಿಕ್ಷಣ ಕುರಿತು ತಿಳಿ ಹೇಳಿದ ಶ್ರೀಗಳು ಇಂಗ್ಲೀಷ ವ್ಯಾಮೋಹಕ್ಕೆ ಒಳಪಟ್ಟು ಕನ್ನಡ ಭಾಷೆಯನ್ನೇ ದೂರಿಕರಿಸುತ್ತಾರೆನ್ನುವಂತಿದೆ ಮಕ್ಕಳಿಗೆ ಹಂಚಿಕೊಂಡು ತಿನ್ನುವಂತಹ ಪದ್ದತಿಯನ್ನು ಮಕ್ಕಳಿಗೆ ಕಲಿಸುವಂತಹ ಮೂಲ ಶಿಕ್ಷಣದಲ್ಲಿಯೇ ಪಾಲಕರು ಕಲಿಸಿದರೆ ಆತನೂ ಸಹ ಹಂಚಿಕೊಂಡು ತಿನ್ನುವಂತಹ ಸ್ವಭಾವ ಆ ಮಗನಲ್ಲಿ ಬರುತ್ತದೆ ಎಂದರು. ಭಾರತೀಯ ಸಂಸ್ಕಾರ ಮಗು ಪ್ರಪಂಚಕ್ಕೆ ಬಂದ ಮೇಲೆ ಕಲಿಸುವದಲ್ಲದೇ ತಾಯಿ ಗರ್ಭದಲ್ಲಿ ಮಗು ವಿದ್ದಾಗಲೇ ತಾಯಿಯ ಹೊರನೋಟದ ಸಂಸ್ಕಾರ ಪಾರದರ್ಶಕವಾಗಿರಬೇಕು ಒಳ್ಳೆಯ ವಿಚಾರ ಭಕ್ತಿಭಾವ ಹೊಂದಿರಬೇಕೆಂದರು. ಆತ್ಮಕ್ಕೆ ಸಾವಿಲ್ಲಾ ದೇಹಕ್ಕೆ ಸಾವಿದೆ ಎಂಬುದನ್ನು ಅರ್ಥೈಸಿಕೊಂಡು ಸಾಗಬೇಕಿದೆ ತಾಯಿ ಒಳ್ಳೆಯದನ್ನು ಸಂಕಲ್ಪ ಮಾಡಿಕೊಂಡರೆ ದೇವರ ಸ್ವರೂಪವಾದ ಮಗು ಅಂತಹ ಸಂಕಲ್ಪದಂತೆಯೇ ಮಗು ಜನ್ಮ ತಾಳುತ್ತದೆ ಎಂದರು. ತಾಯಿ ಗರ್ಭದಲ್ಲಿದ್ದಾಗ ಸಂಸ್ಕಾರಯುತ ಮಾತನ್ನು ಒಳ್ಳೆಯದನ್ನು ಭಕ್ತಿಭಾವದಂತಹ ಮಾತನ್ನು ಆಡಬೇಕೆಂದ ಶಾಸ್ತ್ರೀಗಳು ಬರ್ಮಪ್ಪ ಕೆಂಚಪ್ಪ ಈ ಬಡ ದಂಪತಿಗಳ ಒಳ್ಳೆಯ ಸಂಸ್ಕಾರಯುತ ಬಧುಕಿನಲ್ಲಿ ಜನ್ಮ ತಾಳಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತಹ ಕ್ರಾಂತಿವೀರ ಸಂಗೋಳಿ ರಾಯಣ್ಣನ ಹಾಗೂ ಭಗತ್‌ಸಿಂಗ್ ಅವರಂತಹ ಶೂರ ದೀರರ ವಿಷಯವನ್ನು ಪ್ರಸ್ಥಾಪಿಸಿದ ಶ್ರೀಗಳು ನಮ್ಮ ದೇಶ ಉಳಿಯಲು ಇಂತಹ ಮಹಾನುಭಾವರು ಕಾರಣವಾಗಿದ್ದಾರೆಂದರು.
    ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ವೇ.ವಿಶ್ವನಾಥ ವಿರಕ್ತಮಠ, ವೇ. ಚಂದ್ರಶೇಖರಯ್ಯ ಶಾಸ್ತ್ರೀಗಳು, ಬಸಯ್ಯ ಶಾಸ್ತ್ರೀಗಳು ಉಪಸ್ಥಿತರಿದ್ದರು.
         ಗವಾಯಿಗಳಾದ ದೀಪಕಸಿಂಗ್ ಹಜೇರಿ, ಶಶಿಕುಮಾರ ಬಳಗಾನೂರ, ಬಸನಗೌಡ ಬಿರಾದಾರ, ವಾಯ್‌ಲೈನ್ ವಾದನೆಯನ್ನು ಯಲ್ಲಪ್ಪ ಗುಂಡಳ್ಳಿ, ಉಮಾಪತಿ ಹಿರೇಮಠ, ಕುಮಾರ ಕುದರಗೊಂಡ, ಸಂಗೀತಸೇವೆ ಸಲ್ಲಿಸಿದರು.    ಈ ಆಧ್ಯಾತ್ಮಿಕ ಪ್ರವಚನದ ದಿನದಂದು ಅಪಾರ ಭಕ್ತ ಸಮೂಹ ಉಪಸ್ತಿತರಿದ್ದ್ದರು. 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೌಡ ಕಾರ್ಯಕ್ರಮ ಪೂರ್ವಭಾವಿ ಸಭೆ ಶಿಕ್ಷಣದ ಜೊತೆ ಸಂಸ್ಕಾರಮುಖ್ಯ - ವೇ|| ರಾಚಯ್ಯ ಶಾಸ್ತ್ರಿಡಿಜಿಟಲ್‌ ಬೋಧನೆಯಿಂದ ಗುರು-ಶಿಷ್ಯರ ನಡುವೆ ಭೌತಿಕ ಅಂತರ ಕಡಿಮೆರಾಜ್ಯ ಸರ್ಕಾರದ ವಿರುದ್ಧ ಅಖಂಡ ಕರ್ನಾಟಕ ರೈತ ಸಂಘದಿಂದ ವಿನೂತನ ಭಿಕ್ಷಾಟನೆ ಚಳವಳಿ ೧೫೦ ಹಾಸಿಗೆಗಳ ನೂತನ ಆಸ್ಪತ್ರೆ ಮಂಜೂರು - ಮಾಜಿ ಶಾಸಕ ಆನಂದ ನ್ಯಾಮಗೌಡಮೌಲ್ಯಗಳ ಅರಿವು ಮೂಡಿಸಲು ಸ್ಪರ್ಧೆರಾಜ್ಯ ಸರ್ಕಾರದ ಪ್ರತಿ ಕೆಲಸದಲ್ಲಿ ಕೇಂದ್ರದ ಅನುಧಾನ ಇದೆ :ಸಂಸದ ವಿಶ್ವೇಶ್ವರ ಕಾಗೇರಿ ಪಾರಂಪರಿಕ ನಿಯಮಗಳ ಪಾಲನೆಯೊಂದಿಗೆ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ: ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್ಜಿಲ್ಲೆಯ ರೈತ ಉತ್ಪಾದಕ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮ: ಆನ್‌ಲೈನ್ ವಹಿವಾಟಿಗೆ ತಾಂತ್ರಿಕ ಪ್ರೋತ್ಸಾಹಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕ್ರಮ