LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೌಡ ಕಾರ್ಯಕ್ರಮ ಪೂರ್ವಭಾವಿ ಸಭೆ 



ಮುದ್ದೇಬಿಹಾಳ:  ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಲಿರುವ ದುರ್ಗಾದೌಡ ಕಾರ್ಯಕ್ರಮದ ಪೂರ್ವಭಾವಿ ಸಭೆ ಮಂಗಳವಾರರಂದು ಸ್ಥಳೀಯ ಶ್ರೀ ರಾಘವೇಂದ್ರ ಮಠದಲ್ಲಿ ಜರುಗಿತು. .
    ಈ ಸಭೆಯಲ್ಲಿ ದುರ್ಗಾದೌಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಸುವ ಕುರಿತು ಚರ್ಚೆ ನಡೆಯಿತು. ಕಾರ್ಯಕ್ರಮದ ದಿನಾಂಕ, ಮಾರ್ಗ, ಭಕ್ತರ ಭಾಗವಹಿಸುವಿಕೆ, ಅಗತ್ಯ ಸಿದ್ಧತೆಗಳು, ಶಿಸ್ತು ಮತ್ತು ಸುರಕ್ಷತಾ ಕ್ರಮಗಳ ಕುರಿತು ಮುಖಂಡರು ಹಾಗೂ ಭಕ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
    ಈ ದುರ್ಗಾದೌಡ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಮಹಿಳೆಯರು, ಹಿಂದೂಬಾಂಧವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. 
    ನವರಾತ್ರಿ ಉತ್ಸವದ ಸಂದರ್ಭದಲ್ಲಿ ಮಾತೆ ದುರ್ಗಾದೇವಿಯ ಆರಾಧನೆಯೊಂದಿಗೆ ಪಟ್ಟಣದ ವಿವಿಧ ದೇವಸ್ಥಾನಗಳಿಗೆ ತೆರಳಿ ಉಡಿತುಂಬುವ ಕಾರ್ಯಕ್ರಮದ ಜೊತೆಗೆ ಧಾರ್ಮಿಕ ಭಾವೈಕ್ಯತೆ ಹಾಗೂ ಭಕ್ತಿಭಾವವನ್ನು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲು ನಿರ್ಧರಿಸಲಾಯಿತು.
    ಈ ಸಭೆಯಲ್ಲಿ ಮುಖಂಡರಾದ ನೇತಾಜಿ ನಲವಡೆ, ಪುಟ್ಟು ಕುಲಕರ್ಣಿ, ವಿಜಯಕುಮಾರ ಬಡಿಗೇರ, ಉದಯ ರಾಯಚೂರ, ಚಂದ್ರಶೇಖರ ಕಲಾಲ, ಸುಭಾಸ ಕುಲಕರ್ಣಿ, ಬಾಳು ಬಾಡಗಿಂಡಿ, ಕೃಷ್ಣಾಜಿ ಪವಾರ, ದೊಂಡಿಬಾ ಕಾಳೆ, ಪ್ರಕಾಶ ದೇಶಪಾಂಡೆ, ಪ್ರಕಾಶ ಸರಾಫ, ವ್ಹಿ.ಜಿ. ಪಾಟೀಲ, ಸಹನಾ ಬಡಿಗೇರ, ಸೀಮಾ ದಂಡಾವತಿ, ವಿದ್ಯಾ ನಲವಡೆ, ಶೋಭಾ ಘಾಟಗೆ, ಜ್ಯೋತಿ ಮಾಯಾಚಾರಿ, ಶುಷ್ಮಾ ಲೋಕರೆ, ನೀಲಾ ತೆಲಂಗಿ, ಲಕ್ಷ್ಮೀ ಕಲಾಲ, ಪುಷ್ಪಾವತಿ ಪತ್ತಾರ, ಅನಿತಾಬಾಯಿ ದೇಶಪಾಂಡೆ, ಸುಜಾತಾ ಭೋಸಲೆ, ಪ್ರೀತಿ ದಂಡಾವತಿ, ಜಯಶ್ರೀ ಥೋರಾಥ, ಗೀತಾ ಜಹಾಂಗೀರದಾರ, ಸುನಿತಾ ಘಾಟಗೆ, ಲಕ್ಷ್ಮೀ ನಲವಡೆ, ಉಮಾ ಕುಲಕರ್ಣಿ, ಅಶ್ವಿನಿ ನಲವಡೆ, ರಾಣಿ ಜಾಧವ, ಸೇರಿದಂತೆ ದುರ್ಗಾದೌಡ ಸಮೀತಿಯ ಸದಸ್ಯರು ಪಾಲ್ಗೊಂಡಿದ್ದರು.
    

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೌಡ ಕಾರ್ಯಕ್ರಮ ಪೂರ್ವಭಾವಿ ಸಭೆ ಶಿಕ್ಷಣದ ಜೊತೆ ಸಂಸ್ಕಾರಮುಖ್ಯ - ವೇ|| ರಾಚಯ್ಯ ಶಾಸ್ತ್ರಿಡಿಜಿಟಲ್‌ ಬೋಧನೆಯಿಂದ ಗುರು-ಶಿಷ್ಯರ ನಡುವೆ ಭೌತಿಕ ಅಂತರ ಕಡಿಮೆರಾಜ್ಯ ಸರ್ಕಾರದ ವಿರುದ್ಧ ಅಖಂಡ ಕರ್ನಾಟಕ ರೈತ ಸಂಘದಿಂದ ವಿನೂತನ ಭಿಕ್ಷಾಟನೆ ಚಳವಳಿ ೧೫೦ ಹಾಸಿಗೆಗಳ ನೂತನ ಆಸ್ಪತ್ರೆ ಮಂಜೂರು - ಮಾಜಿ ಶಾಸಕ ಆನಂದ ನ್ಯಾಮಗೌಡಮೌಲ್ಯಗಳ ಅರಿವು ಮೂಡಿಸಲು ಸ್ಪರ್ಧೆರಾಜ್ಯ ಸರ್ಕಾರದ ಪ್ರತಿ ಕೆಲಸದಲ್ಲಿ ಕೇಂದ್ರದ ಅನುಧಾನ ಇದೆ :ಸಂಸದ ವಿಶ್ವೇಶ್ವರ ಕಾಗೇರಿ ಪಾರಂಪರಿಕ ನಿಯಮಗಳ ಪಾಲನೆಯೊಂದಿಗೆ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ: ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್ಜಿಲ್ಲೆಯ ರೈತ ಉತ್ಪಾದಕ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮ: ಆನ್‌ಲೈನ್ ವಹಿವಾಟಿಗೆ ತಾಂತ್ರಿಕ ಪ್ರೋತ್ಸಾಹಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕ್ರಮ