ಹಸಿರು ಕ್ರಾಂತಿ ವರದಿ ಬೆಳಗಾವಿ
ಕೃಷಿಕಾಯಕದ ಅಭಿವೃದ್ಧಿಗೋಸ್ಕರ 4 ಗ್ರಾಮದ ರೈತರಿಗಾಗಿ ಸ್ಥಾಪಿತವಾದ ಮಾರಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ ₹119 ಕೋಟಿ ವ್ಯವಹಾರ ನಡೆಸಿ, ಸುಮಾರು ₹71.60 ಲಕ್ಷ ಲಾಭಗಳಿಸುವುದರೊಂದಿಗೆ ಗ್ರಾಮಿಣ ಪ್ರದೇಶದದ ರೈತರಿಗೆ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಬಲೀಕರಣದ ಜೊತೆಗೆ ಅತ್ಯುತ್ತಮ ಸೇವೆ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.
ಸಮೀಪದ ಮಾರಿಹಾಳ ಗ್ರಾಮದ ಸಭಾ ಭವನದಲ್ಲಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 83ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಸಂಘ ₹101 ಕೋಟಿ ವಹಿವಾಟು ನಡೆಸಿದರೆ, 25-26ನೇ ಸಾಲಿನಲ್ಲಿ ವರ್ಷ ₹119 ಕೋಟಿ ವಹಿವಾಟ ಮಾಡಿದ್ದು ಮತ್ತು ರೈತ ಸದಸ್ಯರ ಪತ್ತಿನ ಸಾಲ ₹5.80 ಕೋಟಿ ಇದ್ದ ಸಾಲ, ಪ್ರಸಕ್ತಸಾಲಿನಲ್ಲಿ ₹7.28 ಕೊಟಿ ಸಾಲದ ಜೊತೆಗೆ ಸ್ವಂತ ಬಂಡವಾಳದಲ್ಲಿ ಸಂಘದ ಸದಸ್ಯರಿಗೆ ಈ ವರ್ಷ ₹35.67 ಕೋಟಿ ಸಾಲ ವಿತರಿಸಲಾಗಿದೆ. ಹೊಸದಾಗಿ 226 ರೈತ ಸದಸ್ಯರನ್ನಾಗಿ ಮಾಡಲಾಗಿದೆ ಎಂದರು.
ಪ್ರಸಕ್ತ ಸಾಲಿನಿಂದ ಸಂಘದ ಸದಸ್ಯರು ಅಕಾಲಿಕ ಅಥವಾ ವಯೋಜಹಜ ಮರಣ ಹೊಂದಿದಲ್ಲಿ ಅವರ ಮನೆಯವರಿಗೆ ₹5 ಸಾವಿರ ಅಂತ್ಯಸಂಸ್ಕಾರ ನಿಧಿ ನೀಡಲಾಗುವುದು. ಸಂಘದ ಸದಸ್ಯರ ಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚಿಗೆ ಮಾರ್ಕ್ಸ್‌ನ್ನು ತೆಗೆದುಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಸತ್ಕಾರ ನಡೆಸಲಾಗುವುದು. ಪ್ರತಿ ಸದಸ್ಯರು ₹360 ಇನ್ಸೂರೆನ್ಸ್ ಪಾಲಿಸಿ ಮಾಡಿಸಿದಲ್ಲಿ ₹4 ರಿಂದ 6 ಲಕ್ಷದವರೆಗೆ ಆಕ್ಸಿಡೆಂಟಲ್ ಪರಿಹಾರ ಸಿಗಲಿದೆ. ಸಂಘದಿಂದ ಪ್ರತಿವರ್ಷದಂತೆ ಕಣ್ಣಿನ ಉಚಿತ ತಪಾಸಣೆಯನ್ನು ಸಂಘದ ಕಾರ್ಯಲಯದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಘದ ಉಪಾಧ್ಯಕ್ಷ ಮಹದೇವ ಧನಾಯಿ, ಈಶ್ವರಪ್ಪ ವಾಲಿಶೆಟ್ಟಿ, ಬಾಳೇಶ ಹುಂಕ್ರಿ ಪಾಟೀಲ್, ರಾಮನಗೌಡ ಪಾಟೀಲ್, ಬಸಪ್ಪ ಕೆಂಚನವರ್ ಆಗಮಿಸಿದ್ದರು. ವೇದಿಕೆಯ ಮೇಲೆ ಸಂಘದ ನಿರ್ದೇಶಕರಾದ ಶಂಕರಗೌಡ ನಿರ್ವಾಣಿ, ಸಮೀರ ಮುಲ್ಲಾ, ಕಲಗೌಡ ಅಗಸಗಿ, ರಾಮಪ್ಪ ಹಣ್ಣೂರು, ಗುರುರಾಜ ಅಕ್ಕತಂಗಿಯರಹಾಳ, ಸವಿತಾ ಧರ್ಮೋಜಿ, ಗಿರಿಜಾ ಪಾಟೀಲ, ವಿನೋದ ಚವ್ಹಾಣ, ಸುನಂದಾ ಪೂಜಾರಿ ಉಪಸ್ಥಿತಿರಿದ್ದರು. ಸಂಘದ ಸಿಇಒ ರುದ್ರಪ್ಪ ಚನ್ನನವರ ವಾರ್ಷಿಕ ವರದಿ ಮಂಡಿಸಿದರು. ಸ್ವಾಗತವನ್ನು ಸಂಘದ ನಿರ್ದೇಶಕ ಸಂಜಯ್ ಚಾಟೆ ಸ್ವಾಗತಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಅಪ್ಪಣ್ಣ ಹಿತ್ತಲಮನಿ, ವಿಠಲ ಮಲ್ಲಾರಿ, ಚನಬಸಪ್ಪ ರಾಚನ್ನವರ, ವಿಠಲ ಬಂಗೆಣ್ಣವರ, ದಸ್ತಗೀರ ನದಾಫ್, ವಿನೋದ ಪಾಶ್ಚಾಪೂರ, ಅಜ್ಜಪ್ಪ ಕೋಟಿ, ಸಿದ್ದಪ್ಪ ಬುರ್ಲಿ ಸೇರಿದಂತೆ ಮಾರಿಹಾಳ, ಕರಡಿಗುದ್ದಿ, ಯದ್ದಲಭಾವಿಹಟ್ಟಿ ಹಾಗೂ ಸುಳೆಭಾವಿ ಗ್ರಾಮದ ನೂರಾರು ಸಂಘದ ಸದಸ್ಯರು ಇದ್ದರು.
ಸಂಘದ ದುಡಿಯೋ ಬಂಡವಾಳ ₹51 ಕೋಟಿ ಇದ್ದು, ಇದಕ್ಕೆ ಸಹಕಾರ ನೀಡುತ್ತಿರುವ ಸಂಘದ ಸದಸ್ಯರ ಸಹಕಾರ ಮತ್ತು ಸಂಘದ ಸಿಬ್ಬಂದಿ ವರ್ಗ ಹಾಗೂ ಸಂಘದ ಆಡಳಿತ ಮಂಡಳಿಯ ಸಹಕಾರದಿಂದ ₹71.60 ಲಕ್ಷ ಲಾಭಂಶದಲ್ಲಿ ಶೇ.10ರಷ್ಟು ಶೇರುದಾರರಿಗೆ ಡಿವಿಡೆಂಟ್ ನೀಡಲಾಗುವುದು.
-ಮಲ್ಲಿಕಾರ್ಜುನ ಮಾದಮ್ಮನವರ, ಸಂಘದ ಅಧ್ಯಕ್ಷರು.