ಯರಗಟ್ಟಿ: ಮಹಿಳೆಯರು ಸಾಹಿತ್ಯ, ಸಂಗೀತ ಉದ್ಯಮ ಹಾಗೂ ಪೊಲೀಸ ಇಲಾಖೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮನಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ತಾಲೂಕ ಬಿಜೆಪಿ ಮಹಿಳಾ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಮೈತ್ರಾ ಹೊಂಗಲ ಹೇಳಿದರು.
ತಲ್ಲೂರ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಣ್ಣು ಹಂಪಲ ವಿತರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವ ಮತ್ತು ಜನಪರ ಯೋಜನೆಗಳಿಂದಾಗಿ ಭಾತರವು ಜಾಗತಿಕ ಮಟ್ಟದಲ್ಲಿ ಸದೃಢವಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಮುಖಂಡೆ ಜಯಶ್ರೀ ಗಾಣಿಗೇರ, ಸಂಘದ ಮಾಜಿ ಅಧ್ಯಕ್ಷೆ ಕಸ್ತೂರಿ ಹೊಸೂರ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿದರು.
ಸಂಜೀವಿನಿ ಮಹೀಳಾ ಸಂಘದ ಅದ್ಯಕ್ಷೆ ಗಿರಿಜಾ ಕಾಸಪ್ಪನವರ, ಉಪಾಧ್ಯಕ್ಷೆ ಅಣ್ಣಪೂರ್ಣ ಸರದಾರ, ಲಕ್ಷ್ಮಿ ಪೂಜೇರ, ಲಕ್ಷ್ಮಿ ಪಾಟೀಲ, ಹುಸೇನಬಿ ಕುದರಿ, ಪವಿತ್ರಾ ಈಟಿ, ಸುಜಾತಾ ಸರದಾರ, ಯಶೋಧಾ ಕಾಶಪ್ಪನವರ, ಚನ್ನಮ್ಮ ಲಕ್ಕನ್ನವರ, ದೀಪಾ ಸಾಲಿ, ಗೀತಾ ಸಕ್ರಿ, ಅಕ್ಷತಾ ಸಾಲಿ, ಅಕ್ಷತಾ ಕಟಗಿ, ಮಲ್ಲಮ್ಮ ಮಡಿವಾಳರ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸಂಘದ ಸದಸ್ಯರು ಮಕ್ಕಳು ಇದ್ದರು.