ಕಾಗವಾಡ:ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸಿದಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಕಾಗವಾಡ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಕರು ಎಸ್ ಆರ್ ನೂರಾಜೆ ಹೇಳಿದರು.
ಅವರು ಗುರುವಾರದಂದು ಕಾಗವಾಡ ಪಟ್ಟಣದ ಆಚಾರ್ಯ ಶ್ರೀ 108 ವಿದ್ಯಾಸಾಗರ ಜರುಗಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲ್ಲೂಕಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.ಅವರು ಮುಂದೆ ಮಾತನಾಡುತ್ತಾ,ವಿದ್ಯಾರ್ಥಿ/ವಿದ್ಯಾರ್ಥಿನಿಯರಲ್ಲಿ ಕ್ರೀಡಾ ಮನೋಭಾವನೆ ಬೆಳೆಸಲು ಕ್ರೀಡಾಕೂಟಗಳ ಅವಶ್ಯಕತೆ ಇದೆ.ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗಿಯಾಗಿರುವದರಿಂದ ದೈಹಿಕವಾಗಿ ಸದೃಢರಾಗಿರುತ್ತಾರೆ.ಹಾಗೆಯೇ ಸದೃಡ ಶರೀರವಿದ್ದಾಗ ಮಾನಸಿಕವಾಗಿಯೂ ಸದೃಢರಾಗಿರುತ್ತಾರೆ.ಕ್ರೀಡೆಯಲ್ಲಿ ನಮ್ಮ ದೇಶ ಉನ್ನತಮಟ್ಟಕ್ಕೆ ಏರಬೇಕಾದರೆ ಕೆಳಹಂತದಲ್ಲಿ ನಾವು ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನ ಮಾಡುವದು ಅತ್ಯವಶ್ಯವಾಗಿದೆ ಹೀಗಾಗಿ ವಿದ್ಯಾರ್ಥಿಗಳನ್ನು ಕ್ರೀಡೆಗಳಲ್ಲಿ ತೊಡಗಲು ಶಿಕ್ಷಕರು ಪ್ರೇರೆಪಿಸಬೇಕೆಂದು ಹೇಳಿದರು.
ಈ ವೇಳೆ ದೈಹಿಕ ಶಿಕ್ಷಕ ಪರಿವೀಕ್ಷಕ ಎಸ್ ಆರ್ ನೊರಜೆ,ವಿದ್ಯಾಸಾಗರ ಸಂಸ್ಥೆ ಉಪಾಧ್ಯಕ್ಷ ಅಜೀತ ಮಗದುಮ್,ಪ್ರೌಢಶಾಲಾ ಶಿಕ್ಷಕರ ಮಘದ ಅಧ್ಯಕ್ಷ ಸಿ.ಎಂ.ಸಂತೋಷ,ಪ್ರಾಥಮಿಕ ದೈಹಿಕ ಶಾಲಾ ಶಿಕ್ಷಕರಾದ ಎಲ್ ಕೆ ಅರವಾಡೆ,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಎಸ್ ಭಾವಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ ಗಾಣಿಗೇರ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಸ್ ಪಾಟೀಲ್, ಎಸ್ಸಿ ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಕೆ ವಿ ಕಾಂಬಳೆ,ಎ ಎಚ್ ಮದಾಳೆ,ಜಿಪಿಟಿ ಸಂಘದ ಅಧ್ಯಕ್ಷ ಎಸ್ ಬಿ ಕುಪವಾಡೆ,
ಬಿಇಒ ಕಛೇರಿ ಭರತ ಬಿಲವಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತ ಟೊಣಗೆ ವಂದಿಸಿದರು. ತಾಲ್ಲೂಕಿನ ಎಲ್ಲ ಸಿಆರ ಸಿ ಗಳು ಶಿಕ್ಷಣ ಇಲಾಖೆ ಸಿಬ್ಬಂದಿಗಳು,ಶಿಕ್ಷಕರು,ವಿಧ್ಯಾರ್ಥಿಗಳು ಉಪಸ್ತೀತರಿದ್ದರು.