ಹುಕ್ಕೇರಿ.,ಜಗತ್ತಿನಲ್ಲಿ ತಂತ್ರಜ್ಞಾನ ಮುಂದುವರೆಯಲು ಇಂಜಿನಿಯರ್ ಗಳೆ ಕಾರಣರಾಗಿದ್ದಾರೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಕಾಳಿ ಯೋಜನೆ ಮುಖ್ಯ ಅಭಿಯಂತರ ಶ್ರೀಧರ ಕೋರಿ ಹೇಳಿದರು.
ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಘಟಪ್ರಭಾ ವಿದ್ಯುದಾಗರದಲ್ಲಿ ಭಾರತ ರತ್ನ ಎಂ ವಿಶ್ವೇಶ್ವರಯ್ಯ ನವರ 165 ನೇ ಜನ್ಮ ದಿನಾಚಾರಣೆ ಹಾಗೂ 59 ನೇ ಅಭಿಯಂತರರ ದಿನಾಚಾರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮ ವನ್ನು ಸ್ಥಾನಿಕ ಅಭಿಯಂತರ ಬಸವರಾಜ ಡಿ ಯವರ ಅದ್ಯಕ್ಷತೆಯಲ್ಲಿ ಕಾಳಿ ಯೋಜನೆಯ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ಶ್ರೀಮತಿ ಶಿಲ್ಪಾ ಡಿ ರಾಜ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಧರ ಕೋರಿ ಪ್ರಪಂಚ ಮುಂದುವರೆಯಲು ತಂತ್ರಜ್ಞಾನ ಕಾರಣ ಅದಕ್ಕೆ ಇಂಜಿನಿಯರಿಂಗ್ ಪಾತ್ರ ಬಹು ಮುಖ್ಯವಾಗಿದೆ ಎಂದರು.
ವೇದಿಕೆ ಮೇಲೆ ಸೂಫಾ ಡ್ಯಾಂ ಅಧೀಕ್ಷಕ ಅಭಿಯಂತರ ಅಶೋಕ ಕುಮಾರ ಎಚ್ ಎಸ್ , ಪ್ರವೀಣಕುಮಾರ ಅರಳಿಕಟ್ಟಿ, ನರಸಯ್ಯ ದೇವಯ್ಯ, ಆರ್ ವಿ ಮಾಪಾರಿ, ದಾಂಡೆಲಪ್ಪಾ ಪಿ ಎಂ, ಶುಷ್ಮಾ ಸಿ ಪಿ ಉಪಸ್ಥಿತರಿದ್ದರು.
ಘಟಪ್ರಭಾ ವಿದ್ಯುದಾಗರ ಸಿಬ್ಬಂದಿಗಳು ಗಣ್ಯರನ್ನು ಸತ್ಕರಿಸಿ ಅಭಿನಂದಿಸಿದರು.
ಇದಕ್ಕೂ ಮೊದಲು ಮುಖ್ಯ ಕಛೇರಿ ಆವರಣದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನವರ ಪುತ್ಥಳಿ ಗೆ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಕಾಳಿ ಯೋಜನೆಯ ಮುಖ್ಯ ಅಭಿಯಂತರ ಶ್ರೀಮತಿ ಶಿಲ್ಪಾ ಡಿ ರಾಜ್ ಇಂಜನಿಯರಗಳಿಗೆ ಸರ್ ಎಂ ವಿಶೇಶ್ವರಯ್ಯನವರೆ ರೂಲ್ ಮಾಡಲ್ ರಾಗಿದ್ದಾರೆ ಅವರ ಕನಸು,ಉದ್ದೇಶ ಗಳನ್ನು ನಾವು ಪಾಲಿಸಬೇಕಾಗಿದೆ ಎಂದರು.
ನಂತರ ಪ್ರತಿಜ್ಞಾ ವಿಧಿ,ರಸಪ್ರಶ್ನೆ ,ಸಂಗೀತ ಕಾರ್ಯಕ್ರಮಗಳು ಜರುಗಿದವು.
ಕಾರ್ಯನಿವಾಹಕ ಅಭಿಯಂತರ ಬಸವರಾಜ ಡಿ ಮಾತನಾಡಿ ಕರ್ನಾಟಕ ವಿದ್ಯುತ್ ನಿಗಮದ ಇಬ್ಬರೂ ಮುಖ್ಯ ಅಭಿಯಂತರರ ಸಮ್ಮುಖದಲ್ಲಿ ಇಂದು ಸರ್ ಎಂ ವಿಶ್ವೇಶ್ವರಯ್ಯ ಜನ್ಮ ದಿನಾಚಾರಣೆ ಮತ್ತು ಇಂಜಿನಿಯರ್ಸ್ ಡೇ ಆಚರಣೆ ಮಾಡುತ್ತಿರುವದು ಸಂತಸದ ದಿನವಾಗಿದೆ ಇದಕ್ಕೆ ಸಹಕರಿಸಿದ ನಿಗಮದ ಅಧಿಕಾರಿಗಳಿಗೆ ,ಸಿಬ್ಬಂದಿಗಳಿಗೆ ಕೃತಜ್ಞತೆಯ ತಿಳಿಸಿದರು.
ಈ ಸಂದರ್ಭದಲ್ಲಿ ಹಿಡಕಲ್ ಜಲಾಶಯದ ಘಟಪ್ರಭಾ ವಿದ್ಯುದಾಗರ ಸಿಬ್ಬಂದಿಗಳು,ಕುಟುಂಬ ಸದಸ್ಯರು ಉಪಸ್ಥಿತರಿದ್ದರು.