LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಗುಣಮಟ್ಟ ಕಾಯ್ದುಕೊಂಡ ಪತ್ರಿಕೆಗಳು ಇಂದಿಗೂ ಜೀವಂತ

ಕರ್ನಾಟಕ ಮಾಧ್ಯಮ ಒಕ್ಕೂಟದಿಂದ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಭಿಪ್ರಾಯ

ಹಸಿರು ಕ್ರಾಂತಿ ವರದಿ ಮುದ್ದೇಬಿಹಾಳ

ಸಾಹಿತ್ಯದ ಅರಿವು, ಪ್ರೀತಿ ಇರುವವರು ಪತ್ರಿಕೆಗಳನ್ನು ನಿರಂತರ ಓದುತ್ತಾರೆ. ಯಾವ ಪತ್ರಿಕೆ ತನ್ನ ಗುಣಮಟ್ಟ ಕಾಯ್ದುಕೊಂಡಿದೆಯೋ ಆ ಪತ್ರಿಕೆ ಇಂದಿಗೂ ಜೀವಂತವಾಗಿವೆ. ಬರವಣಿಗೆಯಲ್ಲಿ ಶ್ರೀಮಂತ ಭಾಷೆ ಬಳಸಬೇಕು ಎಂದು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ವಿಜಯಮಹಾಂತೇಶ ಮಂಗಲ ಭವನದಲ್ಲಿ ಕರ್ನಾಟಕ ಮಾಧ್ಯಮ ಒಕ್ಕೂಟದಿಂದ ನಡೆದ ವಾರ್ಷಿಕ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ನಿಸ್ಪಕ್ಷಪಾತವಾಗಿ ಕೆಲಸ ಮಾಡಬೇಕು. ದೇಶ ಕಟ್ಟಲು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪತ್ರಿಕೆಗಳು ಒಂದಾಗಬೇಕು. ಪತ್ರಿಕೆಯಲ್ಲಿ ಬರುವ ಟೀಕೆ-ಟಿಪ್ಪಣಿಗಳು ಸಹಜ ನಾವು ಅವುಗಳಿಂದ ಕಲಿತುಕೊಳ್ಳಬೇಕು. ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಸುದ್ದಿ ಹರಡುವ ಜನ ಯಾರು? ರಾಜಕಾರಣಿಗಳು, ಮುಖಂಡರು. ನಾವು ಸರಿಯಾಗಿದ್ದರೇ ಪತ್ರಕರ್ತರಿಗೆ ಸುದ್ದಿ ಬರೆಯುವ ಅವಶ್ಯಕತೆ ಬೀಳುವುದೇ ಇಲ್ಲ. ಹಾಗಾಗಿ ನಾವು ತಪ್ಪುಗಳನ್ನು ಮಾಡದೇ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮಾಧ್ಯಮಗಳಲ್ಲೂ ಸಹಿತ ಭ್ರಷ್ಟಾಚಾರ ಪ್ರಾರಂಭವಾಗಿವೆ. ಮಾಧ್ಯಮಗಳು ದೇಶ ಕಟ್ಟುವ ಕಾರ್ಯದಲ್ಲಿ ಕೈ ಜೋಡಿಸಬೇಕು. ಭಾರತದಲ್ಲಿ ಯಾವುದೇ ವ್ಯಕ್ತಿ ಹೆಚ್ಚು ಮಹತ್ವ ನೀಡುವ ಬದಲು ದೇಶದ ಬಗ್ಗೆ ಮಹತ್ವ ನೀಡಲಿ, ವ್ಯಕ್ತಿಗಿಂತ ದೇಶ ದೊಡ್ಡದು. ದೇಶವನ್ನು ಒಡೆದು ಆಳಲಿಕ್ಕೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ನಮಗೆ ಪಾಠ ಕಲಿಸಲು ಸಿದ್ಧವಾಗಿರುತ್ತಾರೆ ಎನ್ನುವುದನ್ನು ಜನಪ್ರತಿನಿಧಿಗಳು ಮರೆಯಬಾರದು ಎಂದು ತಿಳಿಸಿದರು.

ಕೆಲವರ ವೈಯಕ್ತಿಕ ಜೀವನವನ್ನು ಸ್ಟಿಂಗ್ ಹೆಸರಿನಲ್ಲಿ ತೋರಿಸಲಾಗುತ್ತಿದೆ. ಹಾಗಾಗಿ ಯಾವ ರಾಜಕಾರಣಿಗಳು ಸ್ಟಿಂಗ್ ಆಪರೇಷನ್ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ಆದರೆ, ಮಾಧ್ಯಮಗಳು ಬಳಸುವ ಭಾಷೆ ಸುಧಾರಿಸಬೇಕು. ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿಯ ಪ್ರಭಾವ ಬಿರುತ್ತವೆ ಎನ್ನುವುದನ್ನು ಮಾಧ್ಯಮಗಳು ಅರಿತುಕೊಳ್ಳಬೇಕು ಎಂದರು.

ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತೆ ಹಾಗೂ ಸುವರ್ಣ ನ್ಯೂಸ್‌ನ ನಿರೂಪಕಿ ಶ್ವೇತಾ ಆಚಾರ್ಯ ಮಾತನಾಡಿ, ಪತ್ರಿಕಾರಂಗದಲ್ಲಿ ನಿಷ್ಠುರತೆ ಬಹಳ ಮುಖ್ಯ. ಅದರಲ್ಲೂ ರಾಜಕೀಯ ಕ್ಷೇತ್ರದಲ್ಲಿ ನಿಷ್ಠಯಿಂದ ವರದಿಗಾರಿಕೆ ಮಾಡಬೇಕು ಎಂದರು. 

ಪತ್ರಿಕಾರಂಗದಲ್ಲಿ ವರದಿಗಾರರು ವಿಷಯವನ್ನು ಸಿದ್ಧಪಡಿಸುತ್ತಾರೆ. ಆದರೆ, ಟಿವಿ ಮಾಧ್ಯಮದಲ್ಲಿ ನಮಗೆ ಸಿಗುವ ವರದಿಯನ್ನು ಜನರ ಮನಮುಟ್ಟುವ ರೀತಿಯಲ್ಲಿ ನಾವು ಮತ್ತೊಮ್ಮೆ ಸರಿಪಡಿಸಿ ಅದನ್ನು ನಿರೂಪಣೆ ಮಾಡಬೇಕು. ನಿರೂಪಕರೆಂದರೆ ಕೇವಲ ಕೊಟ್ಟ ವಿಷಯವನ್ನು ಹೇಳುವುದಷ್ಟೇ ಅಲ್ಲ ಅದನ್ನು ಜನರಿಗೆ ಮುಟ್ಟುವ ರೀತಿಯಲ್ಲಿ ತಯಾರಿಕೆ ಮಾಡಬೇಕು. ಇದರಲ್ಲಿ ಸಾಕಷ್ಟು ಏಳು-ಬೀಳುಗಳು ಬರುತ್ತವೆ. ಆದರೆ, ಯಾವುದಕ್ಕೂ ನಾವು ಕುಗ್ಗಬಾರದು ಎಂದು ಸಲಹೆ ನೀಡಿದರು.

ಜೀವಮಾನ ಮಾಧ್ಯಮ ಸಾಧಕ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜೆ ಮಾತನಾಡಿ, ಪತ್ರಿಕಾರಂಗದಲ್ಲಿ ಸಾಧನೆ ಎನ್ನುವುದು ಏನೂ ಇಲ್ಲ. ಈ ಕ್ಷೇತ್ರದಲ್ಲಿ ಕೇವಲ ಸಮಾಜ ಸೇವೆ ಮಾತ್ರ. ಇದನ್ನೇ ನಾನು ಮಾಡಿಕೊಂಡು ಬಂದಿದ್ದೇನೆ. ಆದರೆ, ಕರ್ನಾಟಕ ಮಾಧ್ಯಮ ಒಕ್ಕೂಟ ನನಗೆ ಜೀವಮಾನ ಮಾಧ್ಯಮ ರತ್ನ ಪ್ರಶಸ್ತಿ ನೀಡಿರುವುದನ್ನು ನನಗೆ ಸದಾ ಬೆಂಬಲಿಸಿದ ನನ್ನ ಪೂರ್ವಜರಿಗೆ ಹಾಗೂ ಗುರುಗಳಿಗೆ ಮತ್ತು ನನ್ನ ಸಹಪಾಠಿಗಳಿಗೆ ಅರ್ಪಿಸುತ್ತೇನೆ ಎಂದು ಧನ್ಯವಾದಗಳನ್ನು ತಿಳಿಸಿದರು.

ಕುಂಟೋಜಿ ಗ್ರಾಮದ ಭಾವೈಕ್ಯತಾ ಸಂಸ್ಥಾನ ಮಠದ ಗುರು ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪತ್ರಕರ್ತರಲ್ಲಿಯೂ ಎಡಪಂಥಿಯ ಹಾಗೂ ಬಲಪಂಥಿಯ ಎಂದು ಇದ್ದಾರೆ. ಹಾಗೆ ಸ್ವಾಮಿಗಳಲ್ಲಿಯೂ ಆಸ್ತಿಕರು ಹಾಗೂ ನಾಸ್ತಿಕ ಸ್ವಾಮೀಜಿಗಳಿದ್ದಾರೆ. ಒಬ್ಬರು ಈ ಭಾರತವನ್ನು ಎಡಗಣ್ಣಿನಿಂದ ನೋಡಿದರೇ, ಇನ್ನೊಬ್ಬರು ಬಲಗಣ್ಣಿನಿಂದ ನೋಡುತ್ತಾರೆ. ಪತ್ರಿಕೋದ್ಯಮ ಇಂದು ಸೊಸಿಯಲ್‌ ಪ್ರಭಾವದಿಂದ ಸ್ವಲ್ಪ ಸಂಪಾದಕರ ನಿರ್ಬಂಧಗಳಿಂದ ಪತ್ರಕರ್ತರು ತಮ್ಮ ಬರವಣಿಗೆ ಹಿಡಿದಿಟ್ಟುಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದ್ದರೇ, ಸೊಸಿಯಲ್ ಮೀಡಿಯಾಗಲು ಯಾರ ಭಯವೂ ಇಲ್ಲದೆ ಜಗತ್ತಿನಲ್ಲಿ ಮೂಲೆ, ಮೂಲೆಗೂ ತಲುಪುತ್ತಿದೆ. ನೈಜ ಪತ್ರಕರ್ತರು ತಮ್ಮ ಪ್ರಖರ ಬರವಣಿಗೆ ಬರೆಯಲು ಸಾಧ್ಯವಾಗುತ್ತಿಲ್ಲ. ಇದೊಂದು ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಪತ್ರಿಕಾ ರಂಗದಲ್ಲಿ ಪತ್ರಕರ್ತರಿಗೆ ಸಾಕಷ್ಟು ತಿರುವು ಆಗುತ್ತವೆ. ಇಂತಹ ತಿರುವಿನಲ್ಲಿ ಕೆಲ ಪತ್ರಕರ್ತರಿಗೆ ಹೆಚ್ಚಿನ ಅನುಕೂಲವಾದರೇ, ಇನ್ನೂ ಕೆಲ ಪತ್ರಕರ್ತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಈ ಹಿಂದೆ ನಮ್ಮ ಕ್ಷೇತ್ರದಲ್ಲಿಯೇ ನಮ್ಮ ಆತ್ಮೀಯನೇ ಒಬ್ಬನಿದ್ದ. ಪತ್ರಿಕಾ ರಂಗದಿಂದಲೇ ಎಲ್ಲರಿಗೂ ಪರಿಚಯವಾಗಿ ಮುಂದೆ ಅದೇ ಪತ್ರಿಕಾರಂಗದಿಂದಲೇ ಮರಿಚಿಕೆಯಾದ. ಇಂತಹ ಪ್ರಸಂಗಗಳು ಪತ್ರಕರ್ತರಿಂದ ಸಾಧ್ಯವಾಗುತ್ತದೆ ಎಂಬುವುದು ಎಲ್ಲರೂ ತಿಳಿಯಬೇಕು ಎಂದರು.

ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಮಾತನಾಡಿ, ಪತ್ರಿಕೋಧ್ಯಮದಲ್ಲಿ ಎಲ್ಲ ಪತ್ರಕರ್ತರೂ ಒಂದೇ ಎನ್ನುವ ಭಾವನೆ ಇರುಬೇಕು. ಎಲ್ಲ ಪತ್ರಕರ್ತರಿಗೂ ಸಮಾಜದಲ್ಲಿ ಒಂದೊಂದು ಜವಾಬ್ದಾರಿಗಳು ಇರುತ್ತವೆ. ಆದರೆ, ವರದಿಗಾರಿಕೆಯನ್ನು  ಯಾವುದೇ ಆಮಿಷಕ್ಕೆ ಒಳಗಾಗದೇ ನಿಷ್ಠುರನಾಗಿರಬೇಕು. ಪತ್ರಿಕಾರಂಗದಲ್ಲಿ ಪ್ರತಿಯೊಬ್ಬರನ್ನು ಗುರುತಿಸಿಬೇಕು ಹಾಗೂ ಅವರ ಸಂಕಷ್ಟಗಳಿಗೆ ಸ್ಪಂದನೆ ಸಿಗುವ ರೀತಿಯಲ್ಲಿ ನಾವೆಲ್ಲರೂ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿಟಕಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ರಾಜ್ಯ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಸಮಾಜ ಸೇವಕ ಸಿ.ಬಿ.ಅಸ್ಕಿ, ಬಾಲಾಜಿ ಶುಗರ್ಸ್‌ ನಿರ್ದೇಶಕ ರಾಹುಲಗೌಡ ಪಾಟೀಲ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರಣ್ಣ ತಾರನಾಳ, ಎಪಿಎಂಸಿ ಮಾಜಿ ಉಪಾಧ್ಯಕ್ಷ ವೈ.ಎಚ್.ವಿಜಯಕರ, ಉದ್ಯಮಿ ಸಿಕಂದರ ಜಾನ್ವೇಕರ, ತಾಲೂಕು ವೀರಸೈವ ಲಿಂಗಾಯತ ಸಮಾಜ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ತಾಲೂಕು ನ್ಯಾಯವಾದಿಗಳ ಸಂಘ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಸೇರಿದಂತೆ ಇತರರಿದ್ದರು.

ಮಲ್ಲಿಕಾರ್ಜುನ ತಿಪ್ಪಾರ ಸೇರಿದಂತೆ ಪರಶುರಾಮ ಬಾಸಗಿಗೆ ಮಾಧ್ಯಮ ಸಾಧಕ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು ಉದಯವಾಣಿ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಮಲ್ಲಿಕಾರ್ಜುನ ತಿಪ್ಪಾರ ಹಾಗೂ ವಿಜಯವಾಣಿ ವಿಜಯಪುರ ಜಿಲ್ಲಾ ವಿಶೇಷ ವರದಿಗಾರ ಪರಶುರಾಮ ಬಾಸಗಿ ಅವರಿಗೆ ಮಾಧ್ಯಮ ಸಾಧಕ ರತ್ನ ಪ್ರಶಸ್ತಿ, ವಿಜಯಪುರ ಜಿಲ್ಲಾ ಸಂಯುಕ್ತ ಕರ್ನಾಟಕ ವರದಿಗಾರ ಶರಣು ಮರನೂರ, ಕನ್ನಡಪ್ರಭ ದಿನಪತ್ರಿಕೆಯ ನಾಲತವಾಡ ಗ್ರಾಮೀಣ ವರದಿಗಾರ ಯುನುಸ್‌ ಮೂಲಿಮನಿ, ಚಕ್ರವರ್ತಿ ನ್ಯೂಸ್‌ ಸಂಪಾದಕ ಹಾಗೂ ನ್ಯಾಯವಾದಿ ಚೇತನ ಶಿವಶಿಂಪಿ, ಉದಯಕಾಲ ದಿನಪತ್ರಿಕೆ ವಿಜಯಪುರ ಜಿಲ್ಲಾ ವರದಿಗಾರ ಮಕಬೂಲ್‌ ಬನ್ನೆಟ್ಟಿ, ಭೀಮ ಸಂಕೃತಿ ರಾಷ್ಟೀಯ ಪತ್ರಿಕೆಯ ಸಂಪಾದಕ ಯಲ್ಲಾಲಿಂಗ ಪೂಜಾರಿ(ಮೌರ್ಯ) ಅವರಿಗೆ ಕರ್ನಾಟಕ ಮಾಧ್ಯಮ ಒಕ್ಕೂಟದಿಂದ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಪತ್ರಿಕಾ ವಿತರಕರಾದ ರವಿ ಕುಂಬಾರ ಹಾಗೂ ಚಂದ್ರಶೇಖರ ಮೂಖಿಹಾಳ ಅವರಿಗೆ ಅತ್ಯುತ್ತಮ ಪತ್ರಿಕಾ ವಿತರಕ ಪ್ರಶಸ್ತಿ ನೀಡಲಾಯಿತು. 

ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸಲ್ಲಿದ ವಾಣಿಜ್ಯೋದ್ಯಮ ನಿರ್ದೇಶಕರಲ್ಲಿ ಚುನಾಯಿತರಾದ ಶರಣು ಸಜ್ಜನ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಪಚಾರ ನೀಡುವ ಉದ್ದೇಶದಲ್ಲಿ ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಂಗನಾಥ ವೈದ್ಯ, ಯುವ ವರದಿಗಾರ್ತಿ ಸ್ನೇಹಾ ನಲವಡೆ, ರೈತಪರ ಹಿತಚಿಂತಕ ಅರವಿಂದ ಕೊಪ್ಪ ಹಾಗೂ ಕ್ರೀಡಾ ವಿಭಾಗದ ಕರಾಟೆ ಹಾಗೂ ಸ್ಕೇಟಿಂಗ್‌ ಕ್ರೀಡೆಯಲ್ಲಿ ಸಾಧನೆಗೈದ ಕುಮಾರಿ ಶಕುಂತಲಾ ಮತ್ತು ವಿಕ್ರಾಂತ ಶಾರದಳ್ಳಿ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. 

 

ನಾನು ಗ್ರಾಮ ಪಂಚಾಯತಿಯಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ವಿಧಾನಸಭಾ ಟಿಕೆಟ್‌ ಕೇಳಿದಾಗ ನನಗೆ ದೊರಕಲಿಲ್ಲ. ಏಕೆಂದರೇ ನಮ್ಮ ಕ್ಷೇತ್ರದಲ್ಲಿ ದಿ.ಜಗದೇವರಾವ್‌ ದೇಶಮುಖರು ಇಡೀ ರಾಜ್ಯಕ್ಕೆ ಪರಿಚಿತ ನಾಯಕರಾಗಿದ್ದರು. ನನ್ನ ರಾಜಕೀಯ ಜೀವನ ಬದಲಾಗಿದ್ದೇ ಪತ್ರಿಕೆಯ ಬರವಣಿಗೆಯಿಂದಲೇ ಎನ್ನುವುದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ. ವರದಿಗಾರನಿಂದಲೇ ನನಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಸಿಕ್ಕಿದ್ದೆಂದು ಹೇಳಲು ನನಗೆ ಈಗಲೂ ಸಂತಸ. ಪತ್ರಿಕೆಗಳು ಜನಾಭಿಪ್ರಾಯ ರೂಪಿಸುವ ಅತೀ ದೊಡ್ಡ ಶಕ್ತಿಯಾಗಿವೆ. ಮಾಧ್ಯಮ ಕ್ಷೇತ್ರದಲ್ಲಿ ಎಲ್ಲರೂ ಒಂದಾಗಿರಬೇಕೆಂಬ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಸಮಾರಂಭ ಅತ್ಯಂತ್ಯ ಯಶಸ್ವಿಯಾಗಿದೆ.
-ಸಿ.ಎಸ್.ನಾಡಗೌಡ ಅಪ್ಪಾಜಿ, ಅಧ್ಯಕ್ಷರು, ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ ಹಾಗೂ ಶಾಸಕರು, ಮುದ್ದೇಬಿಹಾಳ ಮತಕ್ಷೇತ್ರ.

ಪತ್ರಿಕಾರಂಗದಲ್ಲಿ ಸಾಧನೆ ಎನ್ನುವುದು ಏನೂ ಇಲ್ಲ. ಈ ಕ್ಷೇತ್ರದಲ್ಲಿ ಕೇವಲ ಸಮಾಜ ಸೇವೆ ಮಾತ್ರ. ಇದನ್ನೇ ನಾನು ಮಾಡಿಕೊಂಡು ಬಂದಿದ್ದೇನೆ. ಆದರೆ, ಕರ್ನಾಟಕ ಮಾಧ್ಯಮ ಒಕ್ಕೂಟ ನನಗೆ ಜೀವಮಾನ ಮಾಧ್ಯಮ ರತ್ನ ಪ್ರಶಸ್ತಿ ನೀಡಿರುವುದನ್ನು ನನಗೆ ಸದಾ ಬೆಂಬಲಿಸಿದ ನನ್ನ ಪೂರ್ವಜರಿಗೆ ಹಾಗೂ ಗುರುಗಳಿಗೆ ಮತ್ತು ನನ್ನ ಸಹಪಾಠಿಗಳಿಗೆ ಅರ್ಪಿಸುತ್ತೇನೆ.
-ಮುರುಗೇಶ ಶಿವಪೂಜೆ, ಜೀವಮಾನ ಮಾಧ್ಯಮ ಸಾಧಕ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪನಮನ ಮೌಲ್ಯಾಧಾರಿತ ಶಿಕ್ಷಣಕ್ಕೆ ವಾಲ್ಮೀಕಿಯವರ ಆದರ್ಶಗಳು ಪ್ರೇರಣೆ-ಸಜ್ಜನಶ್ರೀಕೃಷ್ಣನ ಚರಿತ್ರೆ ಆಲಿಸುವುದು ಅಮೃತಪಾನಕ್ಕೆ ಸಮಾನ: ಪಂಡಿತ ಅನಂತಾಚಾರ್ಯ ಅಕಮಂಚಿಇಂಡಿ: ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಮಾದರಿ – ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿಇಂಡಿ: ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ವರ್ಗಾವಣೆ ಎಚ್ಚರಿಕೆ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ  ವಾಲ್ಮೀಕಿ ಜಯಂತಿ ಕಾರ್ಯಕ್ರಮ / ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಅಭಿಮತ  ಪ್ರಾಯೋಗಿಕ ಅನುಭವ ನೀಡುವ ಶಿಕ್ಷಣದ ಅವಶ್ಯಕತೆ ಇದೆ: ಡಾ. ಸಾಗರ್ ದೇಶಪಾಂಡೆರಾಮಾಯಣ ಜೀವನದ ಮೌಲ್ಯ ತಿಳಿಸುವ ಮಹಾನ್ ಗ್ರಂಥ: ವಿದ್ಯಾಶಂಕರ್ ಕಾಗವಾಡ್: ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಎಸ್‌ಸಿ ಸಮುದಾಯದ ಕಾರ್ಮಿಕರಿಂದ ನಿರಂತರ ಸತ್ಯಾಗ್ರಹಕಾಗವಾಡ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ಬದುಕಿನ ಮೌಲ್ಯ ಸಾರಿದ ಮಹರ್ಷಿ ವಾಲ್ಮೀಕಿ