LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಾಗವಾಡ್: ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಎಸ್‌ಸಿ ಸಮುದಾಯದ ಕಾರ್ಮಿಕರಿಂದ ನಿರಂತರ ಸತ್ಯಾಗ್ರಹ

ಕಾಗವಾಡ್ ಪಟ್ಟಣದ ಶಿರಗುಪ್ಪಿ ಶುಗರ ಕಾರ್ಖಾನೆಯಲ್ಲಿ ನಮ್ಮ ನೇಮಕಾತಿಯನ್ನು ಖಾಯಂಗೊಳಿಸಬೇಕೆAದು ಆಗ್ರಹಿಸಿ, ಪಟ್ಟಣದ ಸುಮಾರು 20 ಜನ ಎಸ್‌ಸಿ ಸಮುದಾಯದ ಕಾರ್ಮಿಕರು ಸೋಮವಾರ ದಿ. 26 ರಿಂದ ಕಾರ್ಖಾನೆಯ ಆವರಣದಲ್ಲಿ ನಿರಂತರ ಸತ್ಯಾಗ್ರಹ ಪ್ರಾರಂಭಿಸಿ, ಆಗ್ರಹಿಸಿದ್ದಾರೆ.

ಈ ವೇಳೆ ಸತ್ಯಾಗ್ರಹ ನಿರತ ಕಾರ್ಮಿಕರು ಮಾತನಾಡಿ, 1991-92 ರಲ್ಲಿ ಡಾ. ಅಂಬೇಡ್ಕರರ ಜನ್ಮಶತಾಬ್ದಿ ಸಂದರ್ಭದಲ್ಲಿ ನಮಗೆ ಅಕ್ರಮ-ಸಕ್ರಮದ ಯೋಜನೆಯಲ್ಲಿ 1 ಎಕರೆ 12 ಗುಂಟೆ ಜಮೀನು ಮಂಜೂರಾಗಿದ್ದು, ಅದರಲ್ಲಿ ನಾವು ಉಳಿಮೆ ಮಾಡಿ, ಉಪಜೀವನ ಸಾಗಿಸಿದ್ದು, ಸನ್ 2009-10 ರಲ್ಲಿ ಶಿರಗುಪ್ಪಿ ಕಾರ್ಖಾನೆ ಪ್ರಾರಂಭಿಸಲು ಸದರಿ ಜಮೀನು ನಮ್ಮಿಂದ ಪಡೆದುಕೊಂಡು, ಅಲ್ಲಿ ಉಳಿಮೆ ಮಾಡುತ್ತಿರುವ ಪ್ರತಿ ಕುಟುಂಬದ ಒಬ್ಬರಿಗೆ ಕಾರ್ಖಾನೆಯಲ್ಲಿ ನೌಕರಿ ನೀಡುವ ಭರವಸೆಯನ್ನು ಕಾರ್ಖಾನೆಯವರು ನೀಡಿದ್ದು, ಸನ್ 2020 ರಲ್ಲಿ ನಮ್ಮನ್ನು 2 ವರ್ಷಗಳ ವರೆಗೆ ತಾತ್ಕಾಲಿಕ ಕಾರ್ಮಿಕರೆಂದು ನೇಮಕ ಮಾಡಿಕೊಂಡು, ಆದೇಶ ಪತ್ರ ನೀಡಿದ್ದು, 2 ವರ್ಷಗಳ ನಂತರ ಖಾಯಂ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದರು. ಈಗ 4 ವರ್ಷ ಕಳೆದರೂ ನಮ್ಮನ್ನು ಖಾಯಂ ಮಾಡದೇ ತಾತ್ಕಾಲಿಕ ಕಾರ್ಮಿಕರೆಂದು ಮುಂದುವರೆಸಿದ್ದಾರೆ. ಇದರಿಂದ ನಮ್ಮ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಈ ಕುರಿತು ಸಾಕಷ್ಟು ಬಾರಿ ಮೌಖಿಕ ಮತ್ತು ಲಿಖಿತವಾಗಿ ಕಾರ್ಖಾನೆಯವರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜವಾಗಿಲ್ಲ. ಆದ್ದರಿಂದ ಈಗ ಸತ್ಯಾಗ್ರಹ ನಡೆಸಬೇಕಾಗಿ ಬಂದಿದೆ ಎಂದರು.
ಅನೀಲ ಕಾಳೆ, ಸುಮಿತ ಕಾಂಬಳೆ ಮಾತನಾಡಿ, ಕಾರ್ಖಾನೆಯವರು 2022 ರಿಂದ ನಮ್ಮನ್ನು ಖಾಯಂಗೊಳಿಸದೇ ಸತಾಯಿಸುತ್ತಿದ್ದಾರೆ. ಬೇಸತ್ತು ನಾವು ಸತ್ಯಾಗ್ರಹ ನಡೆಸಬೇಕಾಗಿ ಬಂದಿದೆ. ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ನಮ್ಮನ್ನು ಖಾಯಂ ಕಾರ್ಮಿಕರೆಂದು ನೇಮಕ ಮಾಡಿಕೊಳ್ಳಿ ಎಂಬ ಬೇಡಿಕೆ ನಮ್ಮದಾಗಿದ್ದರೂ, ಬೆಳಿಗ್ಗೆಯಿಂದ ಕಾರ್ಖಾನೆಯ ಯಾವೊಬ್ಬ ಅಧಿಕಾರಿಯು ನಮ್ಮನ್ನು ಬೇಟ್ಟಿಯಾಗಿಲ್ಲ. ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.
ಇನ್ನೂ ಮಾಧ್ಯಮದವರು ಕಾರ್ಖಾನೆಯ ಎಚ್‌ಆರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ನಮ್ಮ ಎಂಡಿ ಅವರು ಬಂದ ಮೇಲೆ ಮಾತನಾಡುತ್ತೇನೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. 
ಪ್ರತಿಭಟನೆಯಲ್ಲಿ ಸುಮಿತ ಕಾಂಬಳೆ, ಚಂದ್ರಕಾAತ ಕಾಂಬಳೆ, ಅಸ್ಲಂ ಸಾರವಾನ, ಪ್ರಶಾಂತ ಕಾಂಬಳೆ, ರೋಹಿತ ಚವ್ಹಾನ, ಚೇತನ ಕಾಂಬಳೆ, ಆರೀಫ ಹಕಿಮ, ರಾಜೇಂದ್ರ ಧೊಂಡಾರೆ, ಬಾಬಾಸಾಬ ಚಲವಾದಿ, ಪಿಂಟು ದೇವನೆ, ನೀತಿನ ಕಾಂಬಳೆ, ಅರುಣ ಬಜಂತ್ರಿ, ಸಾಗರ ಸಾನೆ, ಯಾಕೂಬ ಕೊರಮ, ಆದರ್ಶ ಧೊಂಡಾರೆ, ಬಚ್ಚನ ದೇವರೆ, ಪ್ರೇಮಕುಮಾರ ಚವ್ಹಾನ, ಪಾಂಡು ಬಜಂತ್ರಿ, ಅನೀಲ ಚವ್ಹಾನ, ಕಿರಣ ಬಿರಣಗಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪನಮನ ಮೌಲ್ಯಾಧಾರಿತ ಶಿಕ್ಷಣಕ್ಕೆ ವಾಲ್ಮೀಕಿಯವರ ಆದರ್ಶಗಳು ಪ್ರೇರಣೆ-ಸಜ್ಜನಶ್ರೀಕೃಷ್ಣನ ಚರಿತ್ರೆ ಆಲಿಸುವುದು ಅಮೃತಪಾನಕ್ಕೆ ಸಮಾನ: ಪಂಡಿತ ಅನಂತಾಚಾರ್ಯ ಅಕಮಂಚಿಇಂಡಿ: ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಮಾದರಿ – ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿಇಂಡಿ: ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ವರ್ಗಾವಣೆ ಎಚ್ಚರಿಕೆ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ  ವಾಲ್ಮೀಕಿ ಜಯಂತಿ ಕಾರ್ಯಕ್ರಮ / ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಅಭಿಮತ  ಪ್ರಾಯೋಗಿಕ ಅನುಭವ ನೀಡುವ ಶಿಕ್ಷಣದ ಅವಶ್ಯಕತೆ ಇದೆ: ಡಾ. ಸಾಗರ್ ದೇಶಪಾಂಡೆರಾಮಾಯಣ ಜೀವನದ ಮೌಲ್ಯ ತಿಳಿಸುವ ಮಹಾನ್ ಗ್ರಂಥ: ವಿದ್ಯಾಶಂಕರ್ ಕಾಗವಾಡ್: ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಎಸ್‌ಸಿ ಸಮುದಾಯದ ಕಾರ್ಮಿಕರಿಂದ ನಿರಂತರ ಸತ್ಯಾಗ್ರಹಕಾಗವಾಡ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ಬದುಕಿನ ಮೌಲ್ಯ ಸಾರಿದ ಮಹರ್ಷಿ ವಾಲ್ಮೀಕಿ