LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಪ್ರಾಯೋಗಿಕ ಅನುಭವ ನೀಡುವ ಶಿಕ್ಷಣದ ಅವಶ್ಯಕತೆ ಇದೆ: ಡಾ. ಸಾಗರ್ ದೇಶಪಾಂಡೆ

• ವಿಟಿಯು ಆಯೋಜಿಸಿದ್ದ ವಿಚಾರ ಸಂಕಿರಣ

ಬೆಳಗಾವಿ: "ಸಾಂಪ್ರದಾಯಿಕ ತರಗತಿಯ ಹೊರತಾಗಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವಗಳ ಮೂಲಕ ಶಿಕ್ಷಣವನ್ನು ನೀಡುವ ಅಗತ್ಯವಿದೆ" ಎಂದು ಕೇಂದ್ರ ಜಾಗೃತ ಆಯೋಗದ ಹೆಚ್ಚುವರಿ ಆಯುಕ್ತರಾದ ಡಾ. ಸಾಗರ್ ದೇಶಪಾಂಡೆ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮ್ಯಾನೇಜ್ ಮೆಂಟ್ ಸ್ಟಡೀಸ್ ವಿಭಾಗವು ಕ್ಯಾಂಪಸ್ ನ ಆವರಣದಲ್ಲಿ " ರಿಸರ್ಚ್ 360: ಐಡಿಯಾ ಟು ಇಂಪ್ಯಾಕ್ಟ್" ಕುರಿತು ಆಯೋಜಿಸಿದ್ದ ಆರು ದಿನಗಳ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ತರಗತಿಗಳಲ್ಲಿ ಬೋಧಿಸಲಾಗುವ ನೈತಿಕ ಮೌಲ್ಯಗಳು ಮತ್ತು ವಾಸ್ತವಿಕ ಬದುಕಿನ ಪರಿಸ್ಥಿತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಅಗತ್ಯವಿದೆ. ಇನ್ನೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೈಜ ವೃತ್ತಿಪರ ಸಾಮರ್ಥ್ಯ, ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯ ಮತ್ತು ನೈತಿಕ ಮೌಲ್ಯಗಳು ಸಾಂಪ್ರದಾಯಿಕ ತರಗತಿಯ ಪಾಠಗಳ ಮಿತಿಯನ್ನು ಮೀರಿ, ಪ್ರಾಯೋಗಿಕ ಅನುಭವಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಬೇಕಿದೆ." ಎಂದರು.
ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಮಾತನಾಡಿ, " ಸಂಶೋಧನಾ ವಿದ್ಯಾರ್ಥಿಗಳು ತಳಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಕೆಲಸ ಮಾಡಬೇಕು. ಅದುವೇ
ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವ ರೀತಿಯಲ್ಲಿರಬೇಕು.
“ವಿಶ್ವವಿದ್ಯಾಲಯವೊಂದನ್ನು ಅದರ ಕಟ್ಟಡಗಳಿಂದ ಗುರುತಿಸಲಾಗುವುದಿಲ್ಲ, ಬದಲಾಗಿ ಉತ್ಪಾದಿಸುವ ಸಂಶೋಧನೆಯಿಂದ ಗುರುತಿಸಲಾಗುತ್ತದೆ. ಹೀಗಾಗಿ ಗುಣಮಟ್ಟ ಸಂಶೋಧನೆಗಳು ಮೂಡಿ ಬರಲಿ. ನಾವು ಮಾಹಿತಿಯ ಸ್ಫೋಟದ ಯುಗದಲ್ಲಿ ಬದುಕುತ್ತಿದ್ದೇವೆ. ಮಾಹಿತಿ ಎಲ್ಲೆಡೆ ಲಭ್ಯವಿದೆ, ಆದರೆ ಜ್ಞಾನ ವಿರಳವಾಗಿದೆ ಮತ್ತು ವಿವೇಕ ಅತ್ಯಂತ ಅಪರೂಪವಾಗಿದೆ” ಎಂದರು.
ಈ ಕಾರ್ಯಕ್ರಮದಲ್ಲಿ ವಿಟಿಯು ಕುಲಸಚಿವರಾದ ಡಾ. ಪ್ರಸಾದ್ ಬಿ. ರಾಂಪುರೆ, ಕುಲಸಚಿವ (ಮೌಲ್ಯಮಾಪನ) ಡಾ.ಯು.ಜೆ.ಉಜ್ವಲ್, ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರಲ್ಹಾದ ರಾಥೋಡ್, ಸಂಯೋಜಕ ಪ್ರೊ. ಬಿ.ಎಸ್. ಕುಡುಚಿ ಮಠ, ಡಾ. ದೀಪ್ತಿ ಶೆಟ್ಟಿ, ಡಾ. ವಿಜಯ್ ಕುಮಾರ್ ಇತರರು ಭಾಗವಹಿಸಿದ್ದರು. ಆರು ದಿನಗಳ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಕುರಿತು ತಿಳಿಸಿಕೊಡಲಾಗುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪನಮನ ಮೌಲ್ಯಾಧಾರಿತ ಶಿಕ್ಷಣಕ್ಕೆ ವಾಲ್ಮೀಕಿಯವರ ಆದರ್ಶಗಳು ಪ್ರೇರಣೆ-ಸಜ್ಜನಶ್ರೀಕೃಷ್ಣನ ಚರಿತ್ರೆ ಆಲಿಸುವುದು ಅಮೃತಪಾನಕ್ಕೆ ಸಮಾನ: ಪಂಡಿತ ಅನಂತಾಚಾರ್ಯ ಅಕಮಂಚಿಇಂಡಿ: ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಮಾದರಿ – ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿಇಂಡಿ: ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ವರ್ಗಾವಣೆ ಎಚ್ಚರಿಕೆ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ  ವಾಲ್ಮೀಕಿ ಜಯಂತಿ ಕಾರ್ಯಕ್ರಮ / ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಅಭಿಮತ  ಪ್ರಾಯೋಗಿಕ ಅನುಭವ ನೀಡುವ ಶಿಕ್ಷಣದ ಅವಶ್ಯಕತೆ ಇದೆ: ಡಾ. ಸಾಗರ್ ದೇಶಪಾಂಡೆರಾಮಾಯಣ ಜೀವನದ ಮೌಲ್ಯ ತಿಳಿಸುವ ಮಹಾನ್ ಗ್ರಂಥ: ವಿದ್ಯಾಶಂಕರ್ ಕಾಗವಾಡ್: ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಎಸ್‌ಸಿ ಸಮುದಾಯದ ಕಾರ್ಮಿಕರಿಂದ ನಿರಂತರ ಸತ್ಯಾಗ್ರಹಕಾಗವಾಡ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ಬದುಕಿನ ಮೌಲ್ಯ ಸಾರಿದ ಮಹರ್ಷಿ ವಾಲ್ಮೀಕಿ