LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

 ವಾಲ್ಮೀಕಿ ಜಯಂತಿ ಕಾರ್ಯಕ್ರಮ / ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಅಭಿಮತ  

ವಾಲ್ಮೀಕಿ ಬರೆದ ರಾಮಾಯಣ ಮನುಕುಲಕ್ಕೆ ದಾರಿದೀಪ  

ಅಥಣಿ : ಮಹರ್ಷಿ ವಾಲ್ಮೀಕಿ ಅವರು ಬರೆದ   ರಾಮಾಯಣ ಮಹಾಕಾವ್ಯ ಕೇವಲ ಒಂದು ಕಥೆಯಲ್ಲ, ಅದು ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ದಾರಿದೀಪವಾಗಿದೆ ಎಂದು ಪುರಸಭೆಯ ಅಧ್ಯಕ್ಷ ಶಿವಲೀಲಾ ಬುಟಾಳಿ ಹೇಳಿದರು. 
 ಅವರು  ಸೋಮವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲೂಕಾ  ಆಡಳಿತ, ತಾಲೂಕಾ  ಪಂಚಾಯತ, ಪುರಸಭೆಯ ಅಥಣಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ  ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ವಾಲ್ಮೀಕಿ ರಾಮಾಯಣವು ಮಾನವನ ಬದುಕಿಗೆ ಮಾರ್ಗದರ್ಶನವಾಗಿದೆ. ಆದರ್ಶ ಮೌಲ್ಯಗಳು, ಕೌಟುಂಬಿಕ ಬಾಂಧವ್ಯ ಮತ್ತು ಸಮಾಜದಲ್ಲಿ ವ್ಯಕ್ತಿ ಹೇಗೆ ಬದುಕಬೇಕು ಎಂಬುದನ್ನು ಈ ಮಹಾಕಾವ್ಯವು ನಮಗೆ ಅತ್ಯಂತ ಸರಳವಾಗಿ ಬೋಧಿಸುತ್ತದೆ. ಅವರು ನೀಡಿರುವ ಸಂದೇಶದಂತೆ ನಾವೆಲ್ಲರೂ ಬದುಕಿ ಜೀವನವನ್ನು    ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು. 
 ಹಾರೂಗೇರಿಯ ಕನ್ನಡ ಉಪನ್ಯಾಸಕ  ಟಿ. ಎಸ್. ವಂಟಿಗೋಡಿ ಉಪನ್ಯಾಸ ನೀಡುತ್ತಾ ಬೇಡ ಜನಾಂಗದಲ್ಲಿ ಜನಿಸಿದ ರತ್ನಾಕರ ದಿನನಿತ್ಯ ಕೊಲೆ ಮತ್ತು ಸುಲಿಗೆ ಮಾಡುತ್ತಿದ್ದನು. ನಾರದ ಮುನಿಗಳು ಸಂಚರಿಸುತ್ತಿದ್ದಾಗ  ಈ ರತ್ನಾಕರನ ಭೇಟಿ ಆಯಿತು. ಈತನ ಮಾಡುತ್ತಿರುವ ಕೃತ್ಯಗಳ ಬಗ್ಗೆ ತಿಳಿಹಳಿ ನೀನು ಮಾಡುವ ಕೃತದಿಂದ ಪಾಪ ಅನುಭವಿಸಬೇಕಾಗುತ್ತದೆ ಎಂಬುದನ್ನು ದೃಷ್ಟಾಂತದ ಮೂಲಕ ತಿಳಿಸಿದ ಅವರು 
 ನಾರದ ಮುನಿಯ ಸಂದೇಶದಿಂದ  ರತ್ನಾಕರ  ಪರಿವರ್ತನೆ ಹೊಂದಿ ವಾಲ್ಮೀಕಿ ಋಷಿಯಾದರು. ನಾರದಮುನಿ ಗುರುಗಳ ಮೂಲಕ ಬದುಕಿನಲ್ಲಿ ಪರಿವರ್ತನೆ ಹೊಂದಿದ ವಾಲ್ಮೀಕಿ ಋಷಿ ಸಂಸ್ಕೃತದಲ್ಲಿ ರಾಮಾಯಣ ಮಹಾಕಾವ್ಯವನ್ನು ರಚಿಸಿ ಇಡೀ ಜಗತ್ತಿಗೆ ಬೆಳಕಾಗಿದ್ದಾರೆ. ಅವರು ನೀಡಿದ ಸಂದೇಶಗಳು ನಮ್ಮೆಲ್ಲರ ಬದುಕಿಗೆ ಆದರ್ಶ ಮತ್ತು ಪ್ರೇರಣೆಯಾಗಿದೆ ಎಂದರು. 
    ಪುರಸಭೆಯ ಉಪಾಧ್ಯಕ್ಷ ಭುವನೇಶ್ವರಿ ಬೀರಪ್ಪ ಯಕ್ಕಂಚಿ, ಪoಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಮಾತನಾಡಿ. ಮಹರ್ಷಿ ವಾಲ್ಮೀಕಿಯವರನ್ನು ಸಂಸ್ಕೃತ ರಾಮಾಯಣದ ಕರ್ತೃ ಎಂದೂ, ಆದಿಕವಿಯೆಂದೂ ಕರೆಯಲಾಗುತ್ತದೆ. ಮಹರ್ಷಿ ವಾಲ್ಮೀಕಿಯವರ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ಪ್ರತೀ ವರ್ಷ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುವುದು. ಅವರ ಜಯಂತಿ ಕಾರ್ಯಕ್ರಮ ಫೋಟೋ ಪೂಜೆಗೆ ಸೀಮಿತವಾಗದೆ ಮುಂದಿನ ಜನಾಂಗಕ್ಕೆ ಮತ್ತು ಮಕ್ಕಳಿಗೆ ರಾಮಾಯಣ ಮತ್ತು ಮಹಾಭಾರತದಂತಹ ಆದರ್ಶ ಕಥೆಗಳನ್ನ ಹೇಳುವ ಮೂಲಕ ಅವರ ಸಂದೇಶವನ್ನು ತಿಳಿಸುವ ಕಾರ್ಯ ಆಗಬೇಕು ಎಂದರು. 
 ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 
ಈ ಸಂದರ್ಭದಲ್ಲಿ ಉಪ ತಹಸಿಲ್ದಾರ ಮಹಾದೇವ ಬಿರಾದಾರ, ತಾ. ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಪುರಸಭೆ ಸದಸ್ಯ ಬಸವರಾಜ ನಾಯಕ, ಸಮಾಜ ಕಲ್ಯಾಣ ಅಧಿಕಾರಿ ಪರಶುರಾಮ ಪತ್ತಾರ,ಚಂದ್ರಕಾಂತ ಕಾಂಬಳೆ, ಶಂಕರ ನಾವಣಿ,ವರ್ದಮಾನ ಹುದ್ದಾರ,ಗಣೇಶ ಪವಾರ, ಶೃತಿ ಘಟಕಾಂಬಳೆ,ಸುನೀತಾ ಹಿಸಮನಿ,ಆರತಿ ಕಾಂಬಳೆ ಮಂಜುಳಾ ಎನ್,ಶಬಾನಾ, ಅಪ್ಸರಾ ಮೇಲಕೆರಿ,ಬಳ್ಳೊಳ್ಳಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಪರಶುರಾಮ ಪತ್ತಾರ ಸ್ವಾಗತಿಸಿದರು. ಸಂಗಮೇಶ ಹಚಡದ ನಿರೂಪಿಸಿದರು. ಓಗಪ್ಪ  ಅರಟಾಳ ವಂದಿಸಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪನಮನ ಮೌಲ್ಯಾಧಾರಿತ ಶಿಕ್ಷಣಕ್ಕೆ ವಾಲ್ಮೀಕಿಯವರ ಆದರ್ಶಗಳು ಪ್ರೇರಣೆ-ಸಜ್ಜನಶ್ರೀಕೃಷ್ಣನ ಚರಿತ್ರೆ ಆಲಿಸುವುದು ಅಮೃತಪಾನಕ್ಕೆ ಸಮಾನ: ಪಂಡಿತ ಅನಂತಾಚಾರ್ಯ ಅಕಮಂಚಿಇಂಡಿ: ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಮಾದರಿ – ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿಇಂಡಿ: ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ವರ್ಗಾವಣೆ ಎಚ್ಚರಿಕೆ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ  ವಾಲ್ಮೀಕಿ ಜಯಂತಿ ಕಾರ್ಯಕ್ರಮ / ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಅಭಿಮತ  ಪ್ರಾಯೋಗಿಕ ಅನುಭವ ನೀಡುವ ಶಿಕ್ಷಣದ ಅವಶ್ಯಕತೆ ಇದೆ: ಡಾ. ಸಾಗರ್ ದೇಶಪಾಂಡೆರಾಮಾಯಣ ಜೀವನದ ಮೌಲ್ಯ ತಿಳಿಸುವ ಮಹಾನ್ ಗ್ರಂಥ: ವಿದ್ಯಾಶಂಕರ್ ಕಾಗವಾಡ್: ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಎಸ್‌ಸಿ ಸಮುದಾಯದ ಕಾರ್ಮಿಕರಿಂದ ನಿರಂತರ ಸತ್ಯಾಗ್ರಹಕಾಗವಾಡ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ಬದುಕಿನ ಮೌಲ್ಯ ಸಾರಿದ ಮಹರ್ಷಿ ವಾಲ್ಮೀಕಿ