ಇಂಡಿ: ವಾಲ್ಮೀಕಿ ಮಹರ್ಶೀಗಳ ಆದರ್ಶವನ್ನು ಪ್ರತಿಯೊಬ್ಬರು ತಮ್ಮ ಜೀವನ ಅಳವಡಿಸಕೊಳ್ಳಬೇಕು. ಋಷಿಗಳು ತಮ್ಮ ಕರ್ಮದಿಂದ ಬದಲಾವಣೆ ಹೊಂದಿ ಇನ್ನೋಬ್ಬರಿಗೆ ಆದರ್ಶಪ್ರಾಯರಾದರು. ಅಲ್ಲದೆ ರಾಮಾಯಣ ಎಂಭ ಮಹಾ ಗ್ರಂಥವನ್ನು ರಚಿಸುವ ಮೂಲಕ ಖ್ಯಾತನಾಮರಾದರು ಎಂದು ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ ಹೇಳಿದರು.
ಅವರು ನಗರದ ವಿಜಯಪುರ ರಸ್ತೆಯ ವಾಲ್ಮೀಕಿ ಮರ್ಹಶಿ ಸಭಾ ಭವನದಲ್ಲಿ ತಾಲೂಕಾ ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕಂಡ ಶ್ರೀವಾಲ್ಮೀಕಿ ಮರ್ಹಶಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಸ್ಪ ನಮನ ಸಲ್ಲಿಸಿ ಮಾತನಾಡಿದರು. . ಇಂದಿನ ಅವರ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು ಅವರ ತತ್ವಾಧರ್ಶಗಳನ್ನು ಮೈಗುಡಿಸಕೊಳ್ಳಬೇಕು. ಅಲ್ಲದೆ ಸರ್ವ ಸಮಾಜಕ್ಕೆ ಸಂತರಾಗಿದ್ದು ನಾವು ಅವರ ಗುಣ ಅಳವಡಿಸಿಕೊಳ್ಳಬೇಕು ಎಂದರು.
ಸುರೇಶ್ ನಡಗಡ್ಡಿ ದಲಿತ ಮುಖಂಡರು ಪ್ರಾಸ್ತಾವಿಕವಾಗಿ ಮಾತನಾಡಿ ಮಹಶ್ರಿ ವಾಲ್ಮೀಕಿ ರವರು ಸಮಾಜದ ಆಸ್ತಿ, ಅವರು ಜಗತ್ತಿಗೆ ೨೪೦೦೦ಶ್ಲೋಕ ಹೊಂದಿದ್ದ ರಾಮಾಯಣ ಮಹಾ ಗ್ರಂಥ ರಚಸಿದರು. ಇದು ಸಮಾಜದ ಸಂಸ್ಕಾರದ ಮೌಲ್ಯ ಹೊಂದಿರುವ ಗ್ರಂಥವಾಗಿದೆ ಎಂದರು.
ಉಪನ್ಯಾಸಕರಾದ ರವಿಕುಮಾರ ಅರಳಿ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆಯ ಕಾಲೇಜು ಇಂಡಿ ರವರು ಮಾತನಾಡಿ ಮಹಾಶ್ರೀ ವಾಲ್ಮೀಕಿ ರವರು ಸಮಾಜದ ಮಹಾನ್ ಸಂತ ಬೇಟೆಗಾರ ಆಗಿದ ವಾಲ್ಮೀಕಿ ಮನಸು ಪರಿವರ್ತ್ ನೆ ಮಹರ್ಷಿ ವಾಲ್ಮೀಕಿ ಆದರೂ ಜಗತ್ತಿಗೆ ರಾಮನ ಗುಣ ಸೀತೆಯ ಪತಿ ಸೇವೆ, ಭರತನ ಸಹೋದರ ಗುಣಗಳು ಲವ ಕುಶ ಗುರುಬೋದನೆ ಮಾಡಿಯಾದರೂ. ಗುರುವಿನ ಜೀವನ ನಮಗೆ ಮಾದರಿ ಎಂದು ಉಪನ್ಯಾಸ ನೀಡಿದರು.
ಪ್ರಸಕ್ತ ೨೦೨೫-೨೬ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪ್ರತಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಸಮಾಜ ಕಲ್ಯಾಣಾ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಲಮಾಣಿ ಸ್ವಾಗತಿಸಿ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೇಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆ ಮೇಲೆ ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ. ತಾಪಂ ಇಓ ಮಹಾದೇವಪ್ಪ ಏವೂರ, ಅರ್ಜುನ್ ನಾಯೊಕೋಡಿ ವಾಲ್ಮೀಕಿ ಸಮಾಜ ಅಧ್ಯಕ್ಷ ಅರ್ಜುನ ಪೀರಪ್ಪ ನಾಯಕೋಡಿ, ವಾಲ್ಮೀಕಿ ನೌಕರ ಸಂಘಧ ಅಧ್ಯಕ್ಷರ ಬ್ರೀಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಸವರಾಜ ಗೋರನಾಳ ಶಿಕ್ಷಕರು ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಾರ್ಡನ್ ಹಾಗೂ ಸಿಬ್ಬಂದಿಗಳು ವಿವಿಧ ಇಲಾಖೆಯ ತಾಲೂಕಮಟ್ಟದ ಅಧಿಕಾರಿಗಳು ಸಮಾಜದ ಮುಖಂಡರ ಭಾಗವಹಿಸಿದರು.