ನೇಸರಗಿ,17: ಮೇ 10 ರಿಂದ ಪ್ರಾರಂಭವಾಗಿರುವ ಸಮೀಪದ ದೇಶನೂರ ಗ್ರಾಮದ ಶ್ರೀ ಗ್ರಾಮದೇವತೆ ಜಾತ್ರಾ ಪ್ರಯುಕ್ತ ಅದ್ದೂರಿಯಾಗಿ ಹೊನ್ನಾಟ,ಮೆರವಣಿಗೆ,ಉಡಿ ತುಂಬುವದು ಮೇ 15 ರವರೆಗೆ ನೇರವೇರಿ, ಮೇ 16 ಗುರುವಾರದಂದು ಶ್ರೀ ಭಾಂವಿ ಬಸವೇಶ್ವರ ರಥೋತ್ಸವವು ಸಂಜೆ 4 ಘಂಟೆಗೆ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರ ಸಮ್ಮುಖದಲ್ಲಿ ಭಕ್ತಿ ಭಾವದೊಂದಿಗೆ ನೆರವೇರಿತು.
ಗುಲಾಲ್, ಬಂಡಾರ ಎರಚಿ, ಜೈ ಬಸವೇಶ್ವರ, ದ್ಯಾಮವ್ವ ಉಗ್ಗೆ, ಉಗ್ಗೆ ಎನ್ನುತ್ತಾ ಜೈಕಾರ ಹಾಕಿ ಜಾತ್ರಾ ಮಹೋತ್ಸವದಲ್ಲಿ ಎಡೆಬಿಡದೇ ಸುರಿಯುತ್ತಿದ್ದ ಮಳೆಯಲಿ ಸಂಭ್ರಮದಿಂದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು ದೇಶನೂರ ಗ್ರಾಮಸ್ಥರು.