Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ರಥಸಪ್ತಮಿ ಹಬ್ಬ, ಸೂರ್ಯ ನಮಸ್ಕಾರ ದಿನ. ಜೀವಸಂಕುಲ ಪೋಷಿಸುವ ಒಡೆಯ ಸೂರ್ಯದೇವ

ರಥಸಪ್ತಮಿಯ ಹಿನ್ನೆಲೆ, ಆಚರಣೆ ಮಹತ್ವವನ್ನು ತಿಳಿಯೋಣ ಆತ್ಮೀಯರೆ ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಯಂದು ರಥಸಪ್ತಮಿ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದ್ದು, ರಥ ಸಪ್ತಮಿಯನ್ನು ಭಗವಾನ್ ಸೂರ್ಯನಾರಾಯಣನಿಗೆ ಅರ್ಪಿಸಲಾಗಿದೆ. ಸೂರ್ಯ ಸಮಸ್ತ ಜೀವಕೋಟಿಗೆ ಆಧಾರವಾಗಿದ್ದು, ಈ ದಿನ ಒಳ್ಳೆಯ ಆರೋಗ್ಯಕ್ಕಾಗಿ ಸೂರ್ಯನಲ್ಲಿ ಬೇಡುವುದು ರಥಸಪ್ತಮಿಯ ಮಹತ್ವಗಳಲ್ಲಿ ಒಂದಾಗಿದೆ.
ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. ೯ ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಸೌರಮಂಡಲದ ರಾಜ ಮತ್ತು ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ. ಏಳು ಕುದುರೆಗಳುಳ್ಳ ರಥವು ಸೂರ್ಯದೇವನ ವಾಹನವಾಗಿದ್ದು, ಈತ ದೇಹದಲ್ಲಿನ ೭ ಚಕ್ರಗಳನ್ನು ಹಾಗೂ ಕಾಮನಬಿಲ್ಲಿನ ೭ ಬಣ್ಣಗಳನ್ನು ಪ್ರತಿನಿಧಿಸುತ್ತಾನೆ.

ಹಿಂದೂ ಧರ್ಮದಲ್ಲಿ ನಾಗರಹಾವನ್ನು ಹೊರತುಪಡಿಸಿ ಕಣ್ಣಿಗೆ ಕಾಣುವ ದೇವರೆಂದು ಸೂರ್ಯದೇವನನ್ನು ಕರೆಯುತ್ತಾರೆ. ಈತನನ್ನು ಪ್ರತಿದಿನವು ನಾವು ನೋಡಬಹುದಾಗಿದೆ. ಪ್ರತಿದಿನವು ಈತನಿಂದಲೇ ಆರಂಭ, ಈತನಿಂದಲೇ ಅಂತ್ಯ. ಶೈವ ಧರ್ಮದಲ್ಲಿ ಸೂರ್ಯನನ್ನು ಶಿವನೆಂದು, ವೈ?ವ ಧರ್ಮದಲ್ಲಿ ವಿ?ವೆಂದು ಪೂಜಿಸುತ್ತಾರೆ. ಸೂರ್ಯನನ್ನು ವೈವಸ್ವತ, ರವಿ, ಆದಿತ್ಯ, ಪು?, ದಿವಾಕರ, ಸವಿತಾ, ಅರ್ಕ, ಮಿತ್ರ, ಭಾನು, ಭಾಸ್ಕರ ಮತ್ತು ಗ್ರಹಪತಿ ಅಥವಾ ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ.

ಈಗಾಗಲೇ ಹೇಳಿರುವ ಹಾಗೇ ಹಿಂದೂ ಧರ್ಮದ ಪ್ರಮುಖ ದೇವರಾದ ಸೂರ್ಯನು ಕತ್ತಲನ್ನು ನಿವಾರಿಸಿ ಬೆಳಕನ್ನು ಹೊರಸೂಸುತ್ತಾನೆ. ಇದರರ್ಥ ಜಗತ್ತಿನಲ್ಲಿ ಅಜ್ಞಾನವನ್ನು ತೊಡೆದು ಹಾಕಿ ಸುಜ್ಞಾನವು ಬೆಳಗುವಂತೆ ಮಾಡುತ್ತಾನೆ. ಸೂರ್ಯ ದೇವನ ಕಿರಣಗಳಿಗೆ ಜನ ಜೀವನ ವನ್ನು ಸಂರಕ್ಷಿಸುವ, ಸಂಹಾರ ಮಾಡುವ ಎರಡೂ ಗುಣವೂ ಇದೆ. ಈತನ ಕೋಪಕ್ಕೆ ಕಾರಣರಾದವರು ಈತನ ಕಿರಣಗಳಿಂದಲೇ ಸುಟ್ಟು ಬಸ್ಮರಾಗುತ್ತಾರೆ. ಪ್ರತಿದಿನವು ಬೆಳಗಿನಿಂದ ಸಂಜೆಯವರೆಗೆ ಒಳಿತನ್ನು ಮಾಡುವ ಸೂರ್ಯದೇವನನ್ನು ಪೂಜಿಸಿದರೆ ಪ್ರತಿನಿತ್ಯದ ಕ?ವು ದೂರಾಗುತ್ತದೆ.

ರಥಸಪ್ತಮಿ ಎಂದರೆ ತಕ್ಷಣ ನೆನಪಾಗುವುದು ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡುವುದು. ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರಥ ಸಪ್ತಮಿಯ ದಿನದಂದು ನಡೆದುಕೊಂಡು ಬಂದಿರುವ ರೂಢಿ. ಎಕ್ಕದ ಎಲೆಗಳನ್ನು ಮೇಲೆ ಹೇಳಿರುವ ದೇಹದ ಭಾಗಗಳಿಗೆ ಇಟ್ಟುಕೊಂಡು ಸ್ನಾನ ಮಾಡಿದ ನಂತರ, ಸೂರ್ಯನ ೧೦೮ ಹೆಸರುಗಳನ್ನು ಉಚ್ಛರಿಸಿ ಸೂರ್ಯ ನಮಸ್ಕಾರ ಮಾಡುವ ಪದ್ಧತಿಯೂ ಇದೆ. ಒಂದು ವೇಳೆ ೧೦೮ ನಾಮಗಳನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಇದ್ದರೆ ಇಂದ್ರ, ಧಾತ, ಪರ್ಜನ್ಯ, ತ್ವ?, ಪು?, ಆರ್ಯಮ, ಭಾಗ, ವಿವಸ್ವನ, ವಿ?, ಅಂಶುಮಾನ, ವರುಣ ಮತ್ತು ಮಿತ್ರ ಎಂಬ ಸೂರ್ಯನ ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡಬಹುದಾಗಿದೆ.

ಸೂರ್ಯನ ಪಥ ಬದಲಾವಣೆಯಾಗುವುದರಿಂದ ಮಾಘಮಾಸದಿಂದ ಮುಂದಕ್ಕೆ ಚಳಿ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿಯೂ ರಥಸಪ್ತಮಿಯ ಆಚರಣೆಯನ್ನು ನೋಡಬಹುದಾಗಿದ್ದು, ರಥಸಪ್ತಮಿ ಎಂಬ ಹೆಸರು ಸೂರ್ಯನ ರಥಕ್ಕೂ ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಗೂ ಸಂಬಂಧಿಸಿದ್ದನ್ನು ಸೂಚಿಸುತ್ತದೆ. ಸೂರ್ಯನ ಸಾರಥಿಯಾದ ಅರುಣ (ಅನೂರು) ರಥವನ್ನು ಉತ್ತರದತ್ತ ಮುನ್ನಡೆಸೆ, ಈಶಾನ್ಯ ದಿಕ್ಕಿಗೆ ಚಲಿಸುತ್ತಾನೆ. ಸೂರ್ಯನ ರಥದ ಚಕ್ರಗಳು ಕಾಲವನ್ನು, ಏಳು ಕುದುರೆಗಳು ಏಳು ಬಣ್ಣಗಳ ಹಾಗೂ ಏಳು ವಾರಗಳ ಪ್ರತಿನಿಧಿಗಳಾಗಿವೆ.

ಇನ್ನು ರಥಸಪ್ತಮಿಯ ದಿನದಂದು ಬಳಸುವ ಎಕ್ಕದ ಎಲೆಗಳ ಬಗ್ಗೆ ಹೇಳುವುದಾದರೆ ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅ? ಅಲ್ಲದೇ, ದೇಹದಲ್ಲಿನ ಕಿ?ಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔ?ಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ರಥ ಸಪ್ತಮಿಯಂದು ಮುಂಜಾನೆಯೇ ಎದ್ದು ಎಕ್ಕದ ಎಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲೆ ಇಟ್ಟುಕೊಂಡು ಸ್ನಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ರಥಸಪ್ತಮಿಯ ದಿನದಂದು ಎಕ್ಕದ ಎಲೆಗಳನ್ನು ಮೈಮೇಲೆ ಇಟ್ಟುಕೊಂಡು ಸ್ನಾನ ಮಾಡುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
"ರಥ ಸಪ್ತಮಿ ಸ್ನಾನ ಮಂತ್ರ
ಸ್ನಾನ ಮಾಡುವಾಗ ಹೇಳುವ ಧ್ಯಾನಶ್ಲೊ?ಕ ಮತ್ತು ಮಂತ್ರಗಳು

ಸಪ್ತ ಸಪ್ತ ಮಹಾಸಪ್ತ ಸಪ್ತದ್ವಿ?ಪಾ ವಸುಂಧರಾ |
ಸಪಾರ್ಕಪರ್ಣಮಾದಾಯ ಸಪ್ತಮ್ಯಾಂಸ್ನಾನ ಮಾಚರೇತ್ ||*

ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ॒ರಥಸಪ್ತಮಿ ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವ? ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶ್ರೀ _ಶುಭಕೃತ್ ನಾಮ_ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ, ಲಕ್ಷ್ಮೀ ವೆಂಕಟೇಶ/ನರಸಿಂಹ ಪ್ರೀತ್ಯಥಂ ಸ್ನಾನಮಹಂ ಕರಿ?.

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ |

ಸೂರ್ಯ ಅರ್ಘ್ಯ ಮಂತ್ರ:-
ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾಘ್ಯಂ ದಿವಾಕರ |

ಸೂರ್ಯ ಮಂತ್ರಗಳು:
ಸೂರ್ಯ ದೇವನನ್ನು ಮನಸ್ಸಾದಗಲೆಲ್ಲಾ ಪೂಜಿಸುವಂತಿಲ್ಲ. ಆತನನ್ನು ಪೂಜಿಸಲು ಪ್ರತ್ಯಕ ಸಮಯವಿದೆ. ಮುಂಜಾನೆ ಸೂರ್ಯ ಹುಟ್ಟಿದಾಕ್ಷಣ ಸ್ನಾನ ಮಾಡಿ ಪರಿಶುದ್ಧ ಮನಸ್ಸಿನಿಂದ ಆತನನ್ನು ಪೂಜಿಸಬೇಕು. ಸೂರ್ಯನನ್ನು ಪೂಜಿಸುವಾಗ ಪಠಿಸಬೇಕಾದ ಮಂತ್ರಗಳು ಹೀಗಿವೆ:

ಸೂರ್ಯ ಮಂತ್ರ:
ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ

ಈ ಮಂತ್ರವು ಸೂರ್ಯದೇವನನ್ನು ಹೊಗಳುವ ಮಂತ್ರವಾಗಿದೆ. ಈ ಮಂತ್ರದಲ್ಲಿ ಸೂರ್ಯನನ್ನು ಬ್ರಹ್ಮಾಂಡದ ಅಧಿಪತಿಯೆಂದು ಹೊಗಳಲಾಗುತ್ತದೆ. ಉತ್ತಮ ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿಗಾಗಿ ಭಕ್ತರು ಸೂರ್ಯದೇವನನ್ನು ಪ್ರಾರ್ಥಿಸಲಾಗುತ್ತದೆ. ಮಾನವನ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಮಂತ್ರಕ್ಕಿದೆ ಎಂದು ನಂಬಲಾಗಿದೆ.

ಸೂರ್ಯ ಗಾಯತ್ರಿ ಮಂತ್ರ:
ಓಂ ಆದಿತ್ಯಾಯ ವಿಧ್ಮಹೇ ಮಾತಾಂಡಾಯ ಧೀಮಹೀ ತನ್ನೋಃ ಸೂಯಃ ಪ್ರಚೋದಯಾತ್

ಸೂರ್ಯ ವಶೀಕರಣ ಮಂತ್ರ:
ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ
ದಶದಿಕ್ಪಾಲ ಲಕ್ಷ್ಮಿ ದೇವತಾಯ ಧರ್ಮಕರ್ಮ ಸಹಿತಾಯ ಅಮುಕ ನಾಥಾಯ ನಾಥಾಯ ನಾಮ ಮೋಹಾಯ ಮೋಹಾಯ
ಆಕರ್ಶಯ ಆಕರ್ಶಯ ದಾಸಾನುದಾಸಂ ಕುರು ಕುರು ವಶಂ ಕುರು ಕುರು ಸ್ವಾಹಾ

ಈ ಮಂತ್ರವನ್ನು ಪಠಿಸಲಿಚ್ಛಿಸುವವರು ಸ್ನಾನ ಮಾಡಿ ಶುದ್ಧತೆಯಿಂದ ಈ ಮಂತ್ರವನ್ನು ೧೦೮ ಬಾರಿ ಪಠಿಸಬೇಕು. ಈ ಮಂತ್ರವನ್ನು ಜಪಿಸುವುದರಿಂದ ಪ್ರೀತಿಗೆ ಸಂಬಂಧಿಸಿದ ಸಮಸ್ಯೆಗಳನ್ನು, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸುತ್ತದೆ.

ಭಾರತೀಯ ಪ್ರತಿಯೊಂದು ಹಬ್ಬಗಳು ತನ್ನದೇ ಆದಂತ ವೈಜ್ಞಾನಿಕ, ಆಧ್ಯಾತ್ಮಿಕ, ಸಂಸ್ಕೃತಿಕ ತಳಹದಿಯನ್ನು ಹೊಂದಿವೆ ಆದ್ದರಿಂದ, ಬದಲಾವಣೆಯ ಆಧುನಿಕ ಜಗತ್ತಿಗೆ ಭಾರತೀಯ ಆಧ್ಯಾತ್ಮಿಕತೆಯ ಶ್ರೀಮಂತಿಕೆಯನ್ನು ಪರಿಚಯಿಸುತ್ತಾ ಅಳವಡಿಸಿಕೊಂಡು ಮುನ್ನಡೆಯೋಣ.

ಲೇಖಕರು
ರಾಘವೇಂದ್ರ ಮ ನೀಲಣ್ಣವರ(ರಾಮನೀ)
ಉಪನ್ಯಾಸಕರು,ಯೋಗ ಶಿಕ್ಷಕರು. ರನ್ನ ಬೆಳಗಲಿ. ಬಾಗಲಕೋಟೆ ಜಿಲ್ಲೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್ಸಮಾಜದ ಮುಖ್ಯ ವಾಹಿನಿಗೆ ವಿಕಲ ಚೇತನರು ಮುಂದೆ ಬರಬೇಕು : ಬಾಲಚಂದ್ರ ಜಾರಕಿಹೊಳಿಶ್ರೀ ಸಾಯಿ ಕಾಲೇಜಿನ ಶಿಬಿರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಕನ್ನಡ ಕಟ್ಟುವಲ್ಲಿ ಧಾರವಾಡದ ಧುರೀಣರ ಕೊಡುಗೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ವಿಧಾನ ಪರಿಷತ್ ಸದಸ್ಯ  ಸ್ಥಾನಕ್ಕೆ ಐದನೇ ಬಾರಿ ಆಯ್ಕೆಯಾದ ಶಶೀಲ್. ಜಿ. ನಮೋಶಿ ಅವರಿಗೆ ಹೊಸಪೇಟೆ ಯಲ್ಲಿ ಅದ್ಧೂರಿ ಸ್ವಾಗತ*ಬಿಜೆಪಿ ಮೋರ್ಚಾ ಪದಾಧಿಕಾರಿಗಳ ಮಹತ್ವದ ಸಭೆ*ಮಹಿಳಾ ಸಾಹಿತಿಗಳ ನಿರ್ಲಕ್ಷ್ಯ ಖಂಡನೀಯ-ಡಾ.ಸುಜಾತಾ ಚಲವಾದಿವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ತಂಡಕ್ಕೆ ತನ್ವೀರ್ ಆಯ್ಕೆಶ್ರೀ ವಿಶ್ವಗುರು ಸೌಹಾರ್ದ ಸೊಸೈಟಿ  ಅಧ್ಯಕ್ಷರಾಗಿ ಅರವಿಂದ ಬಡಕುಂದ್ರಿ, ಉಪಾಧ್ಯಕ್ಷರಾಗಿ ಬರಮಪ್ಪ ನಾಗನೂರ ಆಯ್ಕೆ.ಹತ್ತು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ: 95 ರೈತರಿಗೆ ₹54 ಕೋಟಿ ರೂ. ವಿತರಣೆ