LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಇನ್ನೆರಡು ವರ್ಷದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ; ಬಸವರಾಜ ಬೊಮ್ಮಾಯಿ

ಸವಣೂರು 

ಇನ್ನೆರಡು ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ವ್ಯವಸ್ಥೆ ಬದಲಾವಣೆಯಾಗಿ ರೈತ ಪರ ಸರ್ಕಾರ ಬಂದಾಗ ರೈತರ ಮಕ್ಕಳಿಗೆ ವಿದ್ಯಾನಿಧಿ, ರೈತರಿಗೆ ಡೀಸೆಲ್‌ ಸಬ್ಸಿಡಿ, ಬೀಜ ಗೊಬ್ಬರಕ್ಕೆ ಸಹಾಯಧನ ನೀಡುವ ಯೋಜನೆಗಳು ಮತ್ತೆ ಜಾರಿಗೆ ಬರುತ್ತವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಎಲ್ಲಿ ಭಕ್ತಿ ಇದೆ. ಅಲ್ಲಿ ತಾಯಂದಿರು ಇರುತ್ತಾರೆ. ಭಕ್ತಿ ಸಂಸ್ಕೃತಿ ನಮ್ಮ ಭಾರತದ ತಾಯಿ, ದ್ಯಾಮವ್ವನ ದೇವಸ್ಥಾನ ಸುಂದರವಾಗಿ ನಿರ್ಮಾಣ ಆಗಿದೆ. ಈ ಊರಿನ ಜನರು ಬಹಳ ದೈವ ಭಕ್ತರಿರುವುದರಿಂದ ಎಲ್ಲ ದೇವಸ್ಥಾನಗಳು ನಿರ್ಮಾಣ ಆಗಿವೆ. ಮಾರುತಿ ದೇವಸ್ಥಾನ, ಪರಮೇಶ್ವರ ದೇವಸ್ಥಾನ, ದ್ಯಾಮವ್ವ, ಮಾಯಮ್ಮನ ದೇವಸ್ಥಾನಗಳ ನಿರ್ಮಾಣ ಆಗಿವೆ ಎಂದು ಹೇಳಿದರು. ಇವತ್ತಿನ ದಿನಮಾನಗಳಲ್ಲಿ ಧರ್ಮ ಜಾಗೃತಿ ಬಹಳ ಮುಖ್ಯವಾಗಿದೆ. ನಮ್ಮ ಬದುಕು ಧರ್ಮದಿಂದ ನಡೆಯಬೇಕು.

ನಂಬಿಕೆಯಿಂದ ಶಕ್ತಿ ಬರುತ್ತದೆ

ನ್ಯಾಯ, ನೀತಿ, ಧರ್ಮ ಈ ಮೂರು ಮನಷ್ಯರಿಗೆ ಅತ್ಯಂತ ಅವಶ್ಯಕತೆ ಇರುವ ಗುಣಗಳು. ಧರ್ಮದಿಂದ ನಡೆಯಬೇಕೆಂದರೆ ಧರ್ಮದ ಜಾಗೃತಿ ಬಹಳ ಮುಖ್ಯ. ನಮ್ಮ ಜನರಿಗೆ ದೈವದಿಂದ ಧರ್ಮ ಹೀಗಾಗಿ ದೇವಸ್ಥಾನಗಳು ಬಹಳ ಮುಖ್ಯ, ದೇವಸ್ಥಾನಗಳಿಗೆ ಭಕ್ತರ ನಂಬಿಕೆಯಿಂದ ಶಕ್ತಿ ಬರುತ್ತದೆ. ಎಲ್ಲ ದೇವರ ಕೃಪಾಶೀರ್ವಾದ ನಿಮ್ಮ ನಂಬಿಕೆಯಿಂದ ದೈವದ ಅನುಗ್ರಹದಿಂದ ಈ ಊರಿಗೆ ಒಳ್ಳೆಯದಾಗುತ್ತದೆ. ಈ ಊರಿನಲ್ಲಿ ರೈತರು, ಕಾಯಕಯೋಗಿಗಳಿದ್ದಾರೆ. ಪ್ರಗತಿಪರ ಚಿಂತನೆ ಮಾಡುವ ಯುವಕರಿದ್ದಾರೆ. ಮಹಿಳಾ ಸಂಘಗಳಿವೆ. ನಿಮ್ಮ ಆದಾಯ ಕೃಷಿ ಮೇಲೆ ನಿಂತಿದೆ. ನಿಮ್ಮ ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಾನು ಸಿಎಂ ಇದ್ದಾಗ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಮಾಡಿದೆ. 8ನೇ ತರಗತಿಯಿಂದ ಪಿಜಿವರೆಗೂ ಸ್ಕಾಲರ್ ಶಿಪ್ ನೀಡುತ್ತಿದ್ದೇವು. ಅದರಿಂದ ಸುಮಾರು 11 ಲಕ್ಷ ಮಕ್ಕಳಿಗೆ ಅನುಕೂಲವಾಗಿತ್ತು. ಆ ಯೋಜನೆ ಈಗ ನಿಂತಿದೆ. ಆದರೆ, ಇನ್ನೆರಡು ವರ್ಷದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ವ್ಯವಸ್ಥೆ ಬದಲಾವಣೆಯಾಗಿ ರೈತರ ಸರ್ಕಾರ ಬಂದಾಗ ಮತ್ತೆ ರೈತ ವಿದ್ಯಾನಿಧಿ, ರೈತರಿಗೆ ಡೀಸೆಲ್ ಸಬ್ಸಿಡಿ, ಬೀಜ ಗೊಬ್ಬರಕ್ಕೆ ಸಹಾಯಧನ ನೀಡುವ ಯೋಜನೆಗಳು ಮತ್ತೆ ಜಾರಿಗೆ ಬರುತ್ತವೆ ಎಂದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್