Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜವಾಬ್ದಾರಿಯುತ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿ

ಸಂಕಲ್ಪ ಶಾಲೆಯ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭದಲ್ಲಿ ಡಾ.ಅಶೋಕಕುಮಾರ ಅಭಿಪ್ರಾಯ

ಹಸಿರು ಕ್ರಾಂತಿ ವರದಿ ವಿಜಯಪುರ
ವಿದ್ಯಾರ್ಥಿಗಳಿದ್ದಾಗಲೇ ವಿದ್ಯಾರ್ಥಿಗಳು ಜವಾಬ್ದಾರಿಯುತ, ಕರುಣಾಕರ, ಪ್ರಾಮಾಣಿಕ, ಶಿಸ್ತಿನ ಮತ್ತು ನ್ಯಾಯಯುತ ಸಾಮಾಜಿಕ ಹೋರಾಟದ, ಸಂಘಟನಾ ಕ್ಷಮತೆಯ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಭಾವಿ ಪ್ರಜೆಗಳಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ರಾ.ಜಾಧವ ಹೇಳಿದರು. 

ನಗರದ ಆದರ್ಶ ನಗರದಲ್ಲಿರುವ ಸಂಕಲ್ಪ ಶಾಲೆಯಲ್ಲಿ ನಡೆದ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಪರಿಷತ್ತಿನ ನಾಯಕರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ ಸಿಗುವ ಸೌಕರ್ಯಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.

ಶಾಲೆಯ ಸಂಸ್ಥಾಪಕ ಮತ್ತು ಮುಖ್ಯ ಅಡಳಿತಾಧಿಕಾರಿ ದೀಪಕ ಅಗರ್ವಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಯ್ಕೆಯಾದ ವಿದ್ಯಾರ್ಥಿ ನಾಯಕರು ಅಧಿಕೃತವಾಗಿ ಜವಾಬ್ದಾರಿಗಳನ್ನು ವಹಿಸಿಕೊಂಡು ಅವರು ಇಡೀ ಶೈಕ್ಷಣಿಕ ವರ್ಷದಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ, ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕೀವಿಮಾತು ಹೇಳಿದರು.

ಶಿಕ್ಷಕರು ಕೂಡ ಆಯಾ ವಿದ್ಯಾರ್ಥಿಗಳಲ್ಲಿ ಸೂಪ್ತವಾಗಿ ಅಡಗಿರುವ ಕೌಶಲ್ಯಗಳನ್ನು ಗುರ್ತಿಸಿ, ಅವರಿಗೆ ವೈಯಕ್ತಿಕ ಗಮನಹರಿಸಬೇಕು ಮತ್ತು ಅವರಲ್ಲಿ ಶಿಸ್ತಿನ ನಡುವಳಿಕೆಯ ಜೊತೆ ಅವರಲ್ಲಿನ ಕೌಶಲ್ಯಭರಿತ ಆಸಕ್ತಿಯಿರುವ ಕನಸುಗಳು ಈಡೇರಿಸಲು ಪ್ರೋತ್ಸಾಹ ನೀಡಿ ಸರಿಯಾಗಿ ಮಾರ್ಗದರ್ಶನ ಮಾಡಿ ಶಾಲೆಗೆ ಕೀರ್ತಿ ತರುವಂತಾಗಬೇಕು ಎಂದು ಶುಭ ಹಾರೈಸಿದರು.

ನಾಯಕರಾಗಿ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಬ್ಯಾಡ್ಜ್‌ ಮತ್ತು ಧ್ವಜ ನೀಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆಯನ್ನು ಚಿರಾಯು ಅಗರ್ವಾಲ್, ಯುಕ್ತಿ ಅಗರ್ವಾಲ್, ಸುದೀಕ್ಷಾ ಬಿರಾದಾರ್ ಮತ್ತು ವೆರೋನಿಕಾ ಆಸ್ಕಿ ಹಾಡಿದರು. ದೈಹಿಕ ಶಿಕ್ಷಕಿಯಾದ ವಿಜಯಲಕ್ಷ್ಮೀ ತಳೇವಾಡ ಸ್ವಾಗತಿಸಿದರು. ಕುಮಾರಿ ತಬಸ್ಸುಮ ನಾಲಬಂದ ವಂದನಾರ್ಪಣೆ ಮಾಡಿದರು. ಕು.ನಾಗವೇಣಿ ಕಾಂಬ್ಳೆ ನಿರೂಪಣೆ ಮಾಡಿದರು. ಶಾಲಾ ಆಡಳಿತ ಮಂಡಳಿ ಸಿಬ್ಬಂದಿ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಪ್ರಮಾಣ ವಚನ ಸ್ವೀಕರಿಸಿ ವಿದ್ಯಾರ್ಥಿಗಳು

ಇದೇ ಸಂದರ್ಭದಲ್ಲಿ ಶಾಲಾ ನಾಯಕರಾಗಿ ಹರ್ಷವರ್ಧನ್ ಗಡ್ಡೂಗೆ, ರುಹಾನ್ ಮಕಂದಾರ, ಆರಾಧ್ಯ ಸಿಂಗಾರಿ, ಶ್ರೀಕರ್ ಪೂಜಾರಿ, ಸಮೀಕ್ಷಾ ಅಥ್ನೂರ್, ವಿರಾಟ್ ಹಲದ್ಮನಿ, ಮಾನ್ಯತಾ ತೊರ್ಗಲ್, ಅಭಿಷೇಕ್ ರಾಜಪೂತ್, ಧನೇಶ್ವರಿ ಮಠ, ಧ್ರುವ ಜಗದೀಶ್ವರ, ಧಾನ್ವಿ ಪೋರವಾಲ, ಮಲ್ಲಿಕಾರ್ಜುನ ತಡಲಗಿ, ಅನೌಮ ನಿಡೋಣಿ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಯಾವ ಶಾಲೆ-ಕಾಲೇಜುಗಳಲ್ಲಿ ಪಾಲಕರ ಮತ್ತು ಶಿಕ್ಷಕರ ನಡುವೆ ಒಳ್ಳೆಯ ಸಂಯೋಜನೆ ಇರುತ್ತದೆಯೋ, ಅಲ್ಲಿನ ವಿದ್ಯಾರ್ಥಿಗಳು ಮಾತ್ರ ಬೆಳವಣಿಗೆ ಹೊಂದಿ ಜೀವನದಲ್ಲಿ ಸಾಧಕರಾಗುತ್ತಾರೆ. 
-ಡಾ.ಅಶೋಕಕುಮಾರ ರಾ.ಜಾಧವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು.

ಶಿಕ್ಷಕರು ಕೂಡ ಆಯಾ ವಿದ್ಯಾರ್ಥಿಗಳಲ್ಲಿ ಸೂಪ್ತವಾಗಿ ಅಡಗಿರುವ ಕೌಶಲ್ಯಗಳನ್ನು ಗುರ್ತಿಸಿ, ಅವರಿಗೆ ವೈಯಕ್ತಿಕ ಗಮನಹರಿಸಬೇಕು ಮತ್ತು ಅವರಲ್ಲಿ ಶಿಸ್ತಿನ ನಡುವಳಿಕೆಯ ಜೊತೆ ಅವರಲ್ಲಿನ ಕೌಶಲ್ಯಭರಿತ ಆಸಕ್ತಿಯಿರುವ ಕನಸುಗಳು ಈಡೇರಿಸಲು ಪ್ರೋತ್ಸಾಹ ನೀಡಿ ಸರಿಯಾಗಿ ಮಾರ್ಗದರ್ಶನ ಮಾಡಿ ಶಾಲೆಗೆ ಕೀರ್ತಿ ತರುವಂತಾಗಬೇಕು.
-ದೀಪಕ ಅಗರ್ವಾಲ, ಶಾಲೆಯ ಸಂಸ್ಥಾಪಕ ಮತ್ತು ಮುಖ್ಯ ಅಡಳಿತಾಧಿಕಾರಿ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡೆಂಘೀ ಕಾಯಿಲೆ ತಡೆಗೆ ಶುಚಿತ್ವ, ಪರಿಸರ ಸ್ವಚ್ಛತೆ ಅತ್ಯಗತ್ಯಜವಾಬ್ದಾರಿಯುತ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿವಚನ ಸಾಹಿತ್ಯದ ಉಳಿವಿಗೆ ಫ.ಗು.ಹಳಕಟ್ಟಿ ಕೊಡುಗೆ ಅನನ್ಯಬಾಲ್ಯ ವಿವಾಹ ಸಾಮಾಜಿಕ ಅನಿಷ, ಎಲ್ಲಾ ಇಲಾಖೆ ಸಮುದಾಯದ ಸಹಕಾರದಿಂದ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಿಸಿಬೇಕಾಗಿದೆ: ಮಂಜುನಾಥ ನಾಯಕಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರೋತ್ಸವಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕೆಲಸವಾಗಬೇಕು: ಆರ್ ಆರ್ ಕುಲಕರ್ಣಿ ಜುಲೈ ೨೦ರಂದು ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ  ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮ ಶಿವಯೋಗದ ಮಹಾಪರ್ವತ ಶ್ರೀಮುರುಘೇಂದ್ರ ಶಿವಯೋಗಿಗಳು : ಡಾ.ಶಂಭುಲಿಂಗ ಹೆಗಡಾಳ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ನಿಯೋಗ ಮನವರಿಕೆ: 93 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಒಪ್ಪಿದ KHB ಅಧಿಕಾರಿಗಳು