Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರು

ಬೀದಿಗಿಳಿದ ಅನ್ನದಾತ ರಸ್ತೆ ದುರಸ್ಥಿಗಾಗಿ ರೈತರಿಂದ ಬೃಹತ್ ಪ್ರತಿಭಟನೆ ಧರಣಿ

ತಾಳಿಕೋಟೆ, ತಾಲೂಕಿನ ಕೆಸರಟ್ಟಿ ಕ್ರಾಸ್‌ದಿಂದ ಬಿಂಜಲಭಾವಿ ಮಾರ್ಗವಾಗಿ ಕಲಕೇರಿ ಸಂಪರ್ಕಿಸುವ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿ ಹೋಗಿದ್ದು ಕೂಡಲೇ ನೂತನ ರಸ್ತೆ ನಿರ್ಮಿಸಬೇಕೆಂದು ರಾಷ್ಟ್ರೀಯ ರೈತ ಸಂಘ ಜಿಲ್ಲಾ ಹಾಗೂ ತಾಲೂಕಾ ಮತ್ತು ಗ್ರಾಮ ಘಟಕದ ನೇತೃತ್ವದಲ್ಲಿ ನೂರಾರು ರೈತರು ಬೀದಿಗಿಳಿದು ಪ್ರತಿಭಟನೆ ಮಾಡಿದ ಘಟನೆ ಸೋಮವಾರರಂದು ಬಿಂಜಲಭಾವಿ ಗ್ರಾಮದಲ್ಲಿ ನಡೆದಿದೆ.
ಸುಮಾರು ೨೦ ವರ್ಷಗಳ ಹಿಂದೆ ಮಾಜಿ ಸಚೀವ ದಿ.ಎಂ.ಸಿ.ಮನಗೂಳಿ ಅವರು ಸಿಂಧಗಿ ಶಾಸಕರಾಗಿದ್ದ ಸಮಯದಲ್ಲಿ ನಿರ್ಮಾಣಗೊಂಡಿದ್ದ ರಸ್ತೆ ಇಲ್ಲಿಯವರೆಗೂ ಸಣ್ಣ ಪುಟ್ಟ ದುರಸ್ಥಿಯೂ ಕೂಡಾ ಕಂಡಿಲ್ಲಿ ಎಲ್ಲಿ ನೋಡಿದರೂ ತಗ್ಗು ದಿನ್ನಿಗಳು ತುಂಬಿಕೊಂಡಿವೆ ನಿತ್ಯ ಒಂದಿಲ್ಲಾ ಒಂದು ವಾಹನವು ಅಪಘಾತಕ್ಕಿಡಾಗುತ್ತಾ ಸಾಗಿವೆ ಈ ರಸ್ತೆ ಹದಗೆಟ್ಟ ಪರಿಣಾಮ ಬಸ್, ಕಾರುಗಳು ಅಲ್ಲದೇ ಟಂ ಟಂಗಳ ಸ್ಟೇರಿಂಗ್ ಕಟ್ ಆಗಿ ಸಾಕಷ್ಟು ಸಾವು ನೋವುಗಳು ಸಂಬವಿಸಿವೆ ಇಷ್ಟಾದರೂ ಕೂಡಾ ಅಧಿಕಾರಿಗಳು ಹೊಸ ರಸ್ತೆ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಕೆಸಟ್ಟಿ ಕ್ರಾಸ್‌ದಿಂದ ಬಿಂಜಲಭಾವಿ ಮಾರ್ಗವಾಗಿ ಕಲಕೇರಿ ಗ್ರಾಮಕ್ಕೆ ಸುಮಾರು ೧೦ ಕೀಲೋ ಮೀಟರ್ ಆಗುತ್ತದೆ ಈ ಮಾರ್ಗದಲ್ಲಿ ಯಾರೇ ವಾಹನ ಮೂಲಕ ಬರಬೇಕೆಂದರೂ ಕೂಡಾ ಸರ್ಕಸ್ ಮಾಡುತ್ತಾ ಬರುವಂತಹ ಪರಿಸ್ಥಿತಿ ಎದುರಾಗಿದೆ ಸದ್ಯ ಮಳೆಯಾಗುತ್ತಿರುವದರಿಂದ ನೀರು ನಿಂತು ತಗ್ಗುಗಳೇ ಕಾಣಿಸುತ್ತಿಲ್ಲಾ ಇಂತಹ ಬೃಹತ್ ಆಕಾರದ ತಗ್ಗಿನಲ್ಲಿ ಬೈಕ್ ಸವಾರರೋರ್ವರು ಬಿದ್ದು ಕಾಲು ಮುರಿದುಕೊಂಡಿದ್ದಾರೆ ಈ ರಸ್ತೆಯ ಎಡ ಭಲ ಭಾಗದಲ್ಲಿ ರೈತಾಪಿ ಜನರ ನೂರಾರು ಏಕರೆ ಭೂಮಿ ಇರುವದರಿಂದ ಬಿತ್ತನೆ ಕಾರ್ಯಗಳಿಗೆ ಮತ್ತು ಮಾಲು ಮಸಲು ತರಲು ಎತ್ತಿನ ಬಂಡೆಯಲ್ಲಿ ಹೋಗಬೇಕೆಂದರೆ ಸಾದ್ಯವಾಗುತ್ತಿಲ್ಲಾ ತಿಂಗಳ ಹಿಂದೆ ರೈತನೋರ್ವನು ಎತ್ತಿನ ಬಂಡೆಯಲ್ಲಿ ಜಮೀನು ಸ್ವಚ್ಚತೆಗೆ ಹೋಗುತ್ತಿದ್ದಾಗ ಎತ್ತಿನ ಕಾಲು ಮುರಿದಿದೆ ಸುಮಾರು ೧೦ ಕೀಲೋ ಮೀಟರ್ ವರೆಗೆ ಕಡಿ ಕಂಕರಗಳ ರಾಶಿಗಳೇ ಬಿದ್ದಿರುವದರಿಂದ ವಾಹನ ಸಂಚಾರ ಮತ್ತು ರೈತರು ಸಂಚರಿಸಲು ಮಹಾ ಕಂಠಕ ಎದುರಾದಂತಾಗಿದೆ ಕೂಡಲೇ ಅಧಿಕಾರಿಗಳು ಜನ ಪ್ರತಿನಿಧಿಗಳು ಎಚ್ಚೆತ್ತು ಕೂಡಲೇ ನೂತನ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಉಪ ತಹಶಿಲ್ದಾರ ಬೆಟ್ಟಿ
ರಸ್ತೆ ನಿರ್ಮಾಣಕ್ಕಾಗಿ ನಡೆದ ಪ್ರತಿಭಟನಾ ಸ್ಥಳಕ್ಕೆ ಉಪ ತಹಶಿಲ್ದಾರ ಅನೀಲ ಚವ್ಹಾಣ ಅವರು ಬೆಟ್ಟಿ ನೀಡಿದರಲ್ಲದೇ ಪ್ರತಿಭಟನಾ ನಿರತರಿಂದ ಮನವಿ ಸ್ವಿಕರಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು ಸದರಿ ರಸ್ತೆ ನಿರ್ಮಾಣ ಕುರಿತು ಲೋಕೋಪಯೋಗಿ ಇಲಾಖೆಯ ಮತ್ತು ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಿ ತಮ್ಮ ಬೇಡಿಕೆಗೆ ಸ್ಪಂದಿಸುವಂತಹ ಕೆಲಸ ಮಾಡುತ್ತೇನೆ ಧರಣಿ ನಿರತ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಮನವಿ ಮಾಡಿದರು.
ಅಧಿಕಾರಿ ಮಾತಿಗೆ ಜಗ್ಗದ ರೈತರು
ಸುಮಾರು ೧೦ ವರ್ಷಗಳಿಂದ ಎಲ್ಲ ಇಲಾಖಾ ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದಾಗಿದೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲಾ ನಮ್ಮ ತಾಳ್ಮೇಯ ಕಟ್ಟೆಯು ಒಡೆದು ಹೋಗಿದೆ ಜಿಲ್ಲಾಧಿಕಾರಿಗಳು ಮತ್ತು ಸಂಬಂದ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೆಟ್ಟಿ ನೀಡಿ ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಅಲ್ಲಿಯವರೆಗೆ ನಮ್ಮ ಧರಣಿನಿರತ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳುವದಿಲ್ಲಾವೆಂದು ಪಟ್ಟು ಹಿಡಿದರು.
ಅಧಿಕಾರಿಗಳು ಸ್ಪಂದಿಸದಿದ್ದರೆ ರಸ್ತೆ ತಡೆ
ಕೂಡಲೇ ರಸ್ತೆ ದುರಸ್ಥಿಗೆ ಅಧಿಕಾರಿಗಳು ನಾಲ್ಕು ದಿನದಲ್ಲಿ ಕ್ರಮ ವಹಿಸದಿದ್ದಲ್ಲಿ ಕೆಸರಟ್ಟಿ ಮಾರ್ಗವಾಗಿ ಕಲಕೇರಿ ತೆರಳು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗುವದು ಇದಕ್ಕೂ ಸ್ಪಂದಿಸದಿದ್ದರೆ ಕೆಸರಟ್ಟಿ ಕ್ರಾಸ್‌ನ ತಾಳಿಕೋಟೆ-ದೇವರಹಿಪ್ಪರಗಿ ಮುಖ್ಯರಸ್ತೆಯನ್ನು ಕೂಡಾ ಬಂದ್ ಬೃಹತ್ ಪ್ರಮಾಣ ಹೋರಾಟದ ಹಾದಿ ಹಿಡಿಯುತ್ತೇವೆ ಬೇಡಿಕೆ ಇಡೇರುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ರಾಷ್ಟ್ರೀಯ ರೈತ ಸಂಘದ ಜಿಲ್ಲಾ ಯುವ ಮೂರ್ಚಾ ಅಧ್ಯಕ್ಷ ಹಣಮಂತ ವಡ್ಡರ ಅವರು ತಿಳಿಸಿದರು.
      ಈ ಸಮಯದಲ್ಲಿ ಜಿಲ್ಲಾ ಯುವ ಮೂರ್ಚಾ ಅಧ್ಯಕ್ಷ ಹಣಮಂತ ವಡ್ಡರ, ಜಿಲ್ಲಾ ಉಪಾಧ್ಯಕ್ಷ ಮೈಹಿಬೂಬಾಷಾ ಮನಗೂಳಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ, ತಾಲೂಕಾ ಅಧ್ಯಕ್ಷ ಅಶೋಕಗೌಡ ಪಾಟೀಲ, ತಾಲೂಕಾ ಯುವ ಮೂರ್ಚಾ ಅಧ್ಯಕ್ಷ ಗೌಡಪ್ಪಗೌಡ ಹಳಿಮನಿ ಅಸ್ಕಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ಶರಣು ಕೌದಿ, ಗ್ರಾಮ ಘಟಕದ ಅಧ್ಯಕ್ಷ ವಿಜಯಕುಮಾರ ಉಕ್ಕಲಿ, ಕೆಸರಟ್ಟಿ ಗ್ರಾಮದ ಮುಖಂಡರಾದ ರಾಮನಗೌಡ ಪಾಟೀಲ, ಬಸನಗೌಡ ಬಿರಾದಾರ, ಗುರುನಾಥಗೌಡ ಪಾಟೀಲ, ಬಿಂಜಲಭಾವಿ ಗ್ರಾಮದ ಮುಖಂಡರುಗಳಾದ ಸಿದ್ದಣ್ಣ ಅಸ್ಕಿ, ಮಲಕನಗೌಡ ಬಿರಾದಾರ, ಸಾಯಬಣ್ಣ ಉಕ್ಕಲಿ, ಬಸಯ್ಯ ಹಿರೇಮಠ, ಶಾಂತಗೌಡ ಬಿರಾದಾರ, ಮಹ್ಮದಲಿ ಮಕಾಂದಾರ, ಚನ್ನಾರೆಡ್ಡಿಗೌಡ ಬಿರಾದಾರ, ಒಳಗೊಂಡು ನೂರಾರು ಜನರು ಪಾಲ್ಗೊಂಡಿದ್ದರು.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ