ಇಂಡಿ: ಪಟ್ಟಣದ ಮಾಡೆಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿಶೇಷವಾಗಿ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದು ಡಿಸ್ಟಿಂಕ್ಷನ್ ಫಲಿತಾಂಶ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇಂಡಿ ತಾಲೂಕು ಮಟ್ಟದಲ್ಲಿ ಉರ್ದು ಮಾಧ್ಯಮದ ವಿದ್ಯಾರ್ಥಿಗಳು
ಉಮ್ಮೆರೋಮಾನ ಬಾಗವಾನ ಶೇ. ೯೭.೬೦% ೬೧೦ ಅಂಕ ಪಡೆದು ಪ್ರಥಮ. ರುಕ್ಸಾನಾ ಬಾಗವಾನ ಶೇ. ೯೭.೧೨% ೬೦೭ ಅಂಕ ಪಡೆದು ದ್ವಿತೀಯ ಹಾಗೂ ಮಹೇಕ ನದಾಫ ಶೇ. ೯೬.೪೮% ೬೦೩ ಅಂಕ ಪಡೆದು ತೃತೀಯ ಸ್ಥಾನಗಳನ್ನು ಪಡೆದು ಮೆರೆದಿದ್ದಾರೆ. ಅಲ್ಲದೆ ವಿಜಯಪುರ ಜಿಲ್ಲೆ ಮಟ್ಟದಲ್ಲಿಯೂ ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನಗಳನ್ನು ತಮ್ಮದಾಗಿಸಿಕೊಂಡು ಶ್ರೇಷ್ಠ ಸಾಧನೆ ತೋರಿದ್ದಾರೆ.
ಈ ಸಾಧನೆಗೆ ಗೌರವ ಸೂಚಕವಾಗಿ ಶಾಲೆಯ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಸಾಧನೆಯನ್ನು ಪ್ರಶಂಸಿಸಿದರು.
ಶಾಲೆಯ ಮುಖ್ಯ ಶಿಕ್ಷಕರು ಶ್ರೀ ಮೊಹಮ್ಮದರಫೀಕ ಮುಲ್ಲಾ ಮಾತನಾಡಿ, “ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಹೇಳಿದರು. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಉತ್ತಮ ಫಲಿತಾಂಶ ತರಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಶ್ರೀ ಮುಫ್ತಿ ಅಬ್ದುಲ ರಹಮಾನ ಅರಬ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು ಅದೇ ರೀತಿ ಶ್ರೀ ಪರವೀಜ ಪಟೇಲ ಸಿ ಆರ್ ಪಿ ಇಂಡಿ ಉರ್ದು ಕ್ಲಸ್ಟರ ಶ್ರೀ ಅಲ್ಲಾಭಕ್ಷ ವಾಲಿಕಾರ ಶ್ರೀ ಅಲಹಾಜ ನಿಸಾರಅಹ್ಮದ ಬಾಗವಾನ ಶ್ರೀ ಜಾಕೀರ ಶೇಖ ಶ್ರೀ ಇಮ್ತಿಯಾಜ ಸೌದಾಗರ ಮುಖ್ಯ ಅತಿಥಿಗಳ ಸ್ಥಾನವನ್ನು ವಹಿಸಿದರು ಈ ಸಮಾರಂಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಮಹಮ್ಮದ ರಫೀಕ ಮುಲ್ಲಾ ಸಹ ಶಿಕ್ಷಕರಾದ ಅಬ್ದುಲ್ಲಾ ಪಟೇಲ ಸಲಾವುದ್ದೀನ ನಾಗೂರ ಮುಜೀಬುರ ರಹಮಾನ ಅಫ್ಜಲಪೂರ
ಶಿರಾಜಅಹ್ಮದ ಚಟ್ಟರ್ಕಿ
ಮಹಮ್ಮದ ರಫಿಕ ಅವಟಿ ಬಶೀರಅಹ್ಮದ ಗಾಲಿಬವಾಲೆ ಮತ್ತು ಶಾಲೆಯ ಸಹಶಿಕ್ಷಕಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಈ ಸಾಧನೆಯಿಂದ ಮಾಡೆಲ್ ಪಬ್ಲಿಕ್ ಶಾಲೆ ಮತ್ತೊಮ್ಮೆ ತನ್ನ ಶೈಕ್ಷಣಿಕ ಗುಣಮಟ್ಟವನ್ನು ಸಾಬೀತುಪಡಿಸಿದೆ.