ಬಳ್ಳಾರಿ,ಮಾ.೦4.: ಮಕ್ಕಳು ಪ್ರಾಪಂಚಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವಲ್ಲಿ ಪತ್ರಿಕೆಗಳು ಮಹತ್ವದ ಪಾತ್ರವನ್ನುವಹಿಸುತ್ತವೆ. ಪ್ರಪಂಚ ಇಂದು ಯುದ್ಧದ ಭೀತಿಯಲ್ಲಿದೆ. ಅದನ್ನು ಎದುರಿಸುವಂತಹ ಧೀರ ನಿರ್ಧಾರ ತೆಗೆದುಕೊಳ್ಳುವಲ್ಲಿ ಪರಸ್ಪರ ಹೋರಾಟಕ್ಕಿಳಿದಿವೆ. ಯಾವ ಯಾವ ಕಾಲಕ್ಕೆ ಪ್ರಾಪಂಚಿಕ ಘಟನಾವಳಿಗಳು ಸಂಭವಿಸಿವೆ. ಅವುಗಳ ಮಹತ್ವ ಸಂಗತಿಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಅವುಗಳಲ್ಲಿ ಸಣ್ಣ ಪುಸ್ತಕಗಳಲ್ಲಿ ನೆನಪಿನ ಬುತ್ತಿಗಳಲ್ಲಿ ದಾಖಲಿಸುತ್ತಾ ಹೋದಲ್ಲಿ ನಿಮ್ಮಜ್ಞಾನ ಹೆಚ್ಚುವುದಲ್ಲದೇ ಜೀವನಕ್ಕೂ ಅವು ಉಪಯೋಗಕ್ಕೆ ಬರಲಿವೆ. ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳ ಬೇಡಿ ಎಂದು ಬಳ್ಳಾರಿ ಜಿಲ್ಲಾ ಪತ್ರಿಕಾ ವರದಿಗಾರರ ಸಂಘದ ಅಧ್ಯಕ್ಷರಾದ ಎನ್.ವೀರಭದ್ರಗೌಡ ನುಡಿದರು.
ನಗರದ ಕಂಟೋನ್ಮೆAಟ್ ನಲ್ಲಿನ ಶ್ರೀ ನಂದ ವಸತಿ ಶಾಲೆ ಮತ್ತು ಕಾಲೇಜ್ ನಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ನಮ್ಮ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ಗವಿಸಿದ್ಧರವರಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಏಷ್ಯಾ ಬುಕ್ ಆಫ್ ವರ್ಲ್ಡ್ ಪ್ರಶಸ್ತಿ ಮತ್ತು ಇಂಡಿಯಾ ಬುಕ್ ಆಫ್ ಅವಾರ್ಡ್ ಹಾಗೂ ಚಿನ್ನದ ಪದಕವನ್ನು ನೀಡಿ ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಜಿಲ್ಲಾಧ್ಯಕ್ಷ ಆರ್.ಎಚ್.ಎಂ.ಚನ್ನಬಸವಸ್ವಾಮಿ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳು ಮೂಡಬೇಕು. ಪಂಚಾAಗದ ಮೇಲಿನ ನಂಬಿಕೆಗಿAತ ಪಂಚ ಅಂಗಗಳ ಮೇಲೆ ನಂಬಿಕೆ ಇರಿಸಿ ಎಂದರಲ್ಲದೇ ಮೂಢನಂಬಿಕೆಗಳ ಬೆನ್ನು ಹತ್ತದೇ ದ ಮೂಲ ನಂಬಿಕೆಯ ಮೇಲೆ ವಿಶ್ವಾಸ ಇರಿಸಿ ಎಂದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಯು.ರಮೇಶ್ ಮಾತನಾಡಿ, ವೈಜ್ಞಾನಿಕ ಚಿಂತನೆಯ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಬೋಧಿಸಿದರು.
ಶ್ರೀನಂದಾ ವಸತಿ ಶಾಲೆ ಕಾಲೇಜಿನ ಮುಖ್ಯಸ್ಥ ವಿ.ಗಾಂಧಿ ಮಾತನಾಡಿ, ವಿಶ್ವದ ಯುದ್ಧದ ಪರಿಸ್ಥಿತಿ ನಮ್ಮೆಲ್ಲರನ್ನು ತಲ್ಲಣಗೊಳಿಸುತ್ತಿದೆ. ಶಾಂತಿ ನೆಮ್ಮದಿ ಸ್ನೇಹ ಭಾ ತೃತ್ವದ ತಳಹದಿಯಲ್ಲಿನ ಭಾರತವೂ ಕೂಡ ಎಚ್ಚರದ ಹೆಜ್ಜೆಗಳನ್ನಿರಿಸುತ್ತಿದೆ. ವಿಶ್ವದಆಗುಹೋಗುಗಳು, ಯುದ್ಧ ಸನ್ನಿವೇಶಗಳ ಕುರಿತಾಗಿ ನಾರ್ಥ ಡೋಮಶ್ ಭವಿಷ್ಯ ನಿಜವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾ.ವೈ,ಸಂಶೋ, ಪರಿಷತ್ತನ ಉಪಾಧ್ಯಕ್ಷರು ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರಾದ ಶಿವಾರೆಡ್ಡಿ ಹಾಗೂ ವೀರಶೈವ ತರುಣ ಸಂಘದ ಅಧ್ಯಕ್ಷರಾದ ನಂದೀಶಮಠ ಉಪಸ್ತಿತರಿದ್ದರು. ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಹೆಚ್. ಜೆ. ಸರಿತಾ ನಿರ್ವಹಿಸಿದರು. ನಂತರದಲ್ಲಿ ಜ್ಞಾನಾಮೃತ ಪ್ರೌಢಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಸಾಹಿಲ್ ಇವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.


