ಇಂಡಿ: ನೀಜ ಸುಖಿ ಶ್ರೀ ಹಡಪದ ಅಪ್ಪಣ್ಣನವರ ಜಯಂತಿಯನ್ನು ಇದೇ ಜು.೨೯ ಬುಧವಾರರಂದು ಬೆಳಿಗ್ಗೆ ೧೧:೦೦ ಗಂಟೆಗೆ ನಗರದ ಪ್ರಮುಖ ಬಿದಿಗಳಲ್ಲಿ ಶ್ರೀ ಹಡಪದ ಅಪ್ಪಣ್ಣನವರ ಭಾವಚಿತ್ರದ ಭವ್ಯ ಮೇರವಣಿಗೆ ಮಾಡಿ ವಿಜ್ರಂಭಣಿಯಿಂದ ಆಚರಿಸಲಾಗುವುದು. ಆದ್ದರಿಂದ ಇಂಡಿ ತಾಲೂಕಿನ ಸಮಾಜ ಬಾಂದವರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೇಯಲ್ಲಿ ಭಾಗವಹಿಸಿ ಯಶ್ವಿಗೊಳಿಸಬೇಕು ಎಂದು ಅಧ್ಯಕ್ಷ ಸಿದ್ದು ಎಮ್.ನಾವಿ ಹಾಗೂ ಕಾರ್ಯದರ್ಶಿ ಸಿದ್ರಾಯ ಹಪ್ತಾಗಿರಿ ತಿಳಿಸಿದ್ದಾರೆ.
