ತಾಳಿಕೋಟೆ, ಶ್ರೀ ಖಾಸ್ಗತಜ್ಜನ ಜಾತ್ರೆ ಎಂದಾಕ್ಷಣ ಉತ್ತರ ಕರ್ನಾಟಕ ಭಾಗದ ಜನರಿಗೆ ಬಹಳೇ ಪ್ರಸಿದ್ದತೆ ಪಡೆದ ಜಾತ್ರೆ ವರ್ಷದಿಂದ ವರ್ಷಕ್ಕೆ ತನ್ನ ವೈಭವವನ್ನು ಭಕ್ತಾಧಿಗಳಿಂದ ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದು ಸದ್ಯ ಶ್ರೀ ಖಾಸ್ಗತಜ್ಜನ ಜಾತ್ರೆಗೆ ತಾಳಿಕೋಟೆ ಪಟ್ಟಣವು ವಿಜಯನಗರ ಸಾಮ್ರಾಜ್ಯದಲ್ಲಿನ ಮೆರಗು ಕಂಡಂತೆ ಎಲ್ಲಡೆಯು ವಿದ್ಯುತ್ ದ್ವೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ.
ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ನಿಮಿತ್ಯವಾಗಿ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರ ಅಪೇಕ್ಷೆಯಂತೆ ಈಗ ಇಡೀ ತಾಳಿಕೋಟೆ ಪಟ್ಟಣವೇ ವಿವಿಧ ಪ್ರಮುಖ ಮಾರ್ಗಗಳ ಎಡಭಲದಲ್ಲಿ ವಿದ್ಯುತ್ ದ್ವೀಪಗಳಿಂದ ಜಗಮಗಿಸುತ್ತಿದ್ದು ಭಕ್ತಾಧಿಗಳು ಹಬ್ಬದ ವಾತಾವರಣದಂತೆ ತಮ್ಮ ಅಂಗಡಿ ಮುಗ್ಗಟ್ಟುಗಳ ಮುಂದೆಯೂ ವಿದ್ಯುತ್ ದ್ವೀಪಗಳನ್ನು ಅಳವಡಿಸಿ ದೀಪಾವಳಿ ಹಬ್ಬದಂತೆ ಜಾತ್ರೋತ್ಸವ ಯಶಸ್ವಿಗೆ ಮುಂದಾಗಿದ್ದಾರೆ.
ಶ್ರೀಮಠದ ಅಲಂಕಾರಕ್ಕೆ ಇನ್ನಷ್ಟು ಮೆರಗು ಹೆಚ್ಚಿಸಲು ಹೊರವಲಯ ಹಾಗೂ ಗೋಪೂರ ಎತ್ತರಕ್ಕೂ ಜಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ ಹೆಚ್ಚಿಸಲಾಗಿದೆ ಶ್ರೀಮಠದ ಒಳಭಾಗದಲ್ಲಿಯ ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳವರ ಬೆಳ್ಳಿ ಉತ್ಸವ ಮೂರ್ತಿಗಳಿಗೆ ರಾಜವೈಭವದ ಮಂಟಪಗಳಂತೆ ಅಲಂಕೃತಗೊಳಿಸಲಾಗಿದೆ ಮಠದ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ವಿರಕ್ತಶ್ರೀಗಳ ಮೂರ್ತಿಗೆ ರುದ್ರಾಕ್ಷೀ ಮಂಟಪವನ್ನು ನಿರ್ಮಿಸಿ ಜಾತ್ರೆಯ ಸೋಬಗನ್ನು ಇನ್ನಷ್ಟು ಇಮ್ಮಡಿಗೊಳಿಸಲು ಎಲ್ಲ ಕಾರ್ಯಗಳಲ್ಲಿಯೂ ಭಕ್ತವೃಂದವೇ ಮುಂದಾಗಿರುವದು ಈ ಭಾರಿಯ ಜಾತ್ರೆಯ ವೈಭವಕ್ಕೆ ಇನ್ನಷ್ಟು ಮೆರಗು ಬಂದಂತಾಗಿದೆ.
ಇದು ಅಲ್ಲದೇ ಪಟ್ಟಣದ ಪ್ರಮುಖ ಮಾರ್ಗಗಳಾದ ಬಸವೇಶ್ವರ ಸರ್ಕಲ್, ರಾಣಾಪ್ರತಾಪಸಿಂಹ ಸರ್ಕಲ್, ಶಿವಾಜಿ ಮಹಾರಾಜ ವೃತ್ತ, ಹಾಗೂ ಡಾ.ಅಂಬೇಡ್ಕರ್ ಸರ್ಕಲ್, ಬಸ್ ನಿಲ್ದಾಣ ಮುಂಭಾಗ, ಶ್ರೀ ಖಾಸ್ಗತೇಶ್ವರ ಮಠದ ಮುಂಭಾಗವೂ ಭಕ್ತಾಧಿಗಳು ಹಾಗೂ ವಿವಿಧ ಯುವ ಸಂಘಟಿಕರು ತಮ್ಮಾ ಇಚ್ಚಾ ಅನುಸಾರ ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳ ಹಾಗೂ ಶ್ರೀ ಸಿದ್ದಲಿಂಗಶ್ರೀಗಳ ಭಾವಚಿತ್ರದೊಂದಿಗೆ ಸ್ವಾಗತ ಕೋರುವಂತಹ ಕಟೌಟ್‌ಗಳನ್ನು ಕಟ್ಟಿ ಭಕ್ತರಿಗೆ ಸ್ವಾಗತಕೊರುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಜೂಲೈ ೧೯ ರಿಂದ ಪ್ರಾರಂಭಗೊಂಡಿರುವ ಜಾತ್ರೋತ್ಸವ ಅಂಗವಾಗಿ ಸಪ್ತ ಭಜನೆಯಲ್ಲಿ ಸುಮಾರು ೧೬೦ ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಳ್ಳುವದರೊಂದಿಗೆ ಭಕ್ತಿ ಸಮರ್ಪಣೆಗೆ ಮುಂದಾಗಿದ್ದು ಹಗಲು ರಾತ್ರಿಯೂ ಬಿಡುವಿಲ್ಲದೇ ನಡೆಯುವ ಈ ಸಪ್ತ ಭಜನೆ ಕಾರ್ಯದಲ್ಲಿ ಎಲ್ಲ ಭಕ್ತರಿಗೆ ಅವಕಾಶ ಸಿಗಲಿ ಎಂಬ ಕಾರಣದಿಂದ ಒಂದು ಗ್ರಾಮದವರಿಗೆ ೧ ಗಂಟೆ ಮೀಸಲಿಡಲಾಗಿದೆ ಸದರಿ ಸಪ್ತ ಭಜನಾ ಕಾರ್ಯವು ಆಶಾಡ ಏಕಾದಶಿ ದಿನವಾದ ದಿ.೨೬ ಗೋಪಾಲ ಕಾವಲಿ ಒಡೆಯುವ ದಿನದಂದು ಮುಕ್ತಾಯಗೊಳ್ಳಲಿದೆ.
ಇಂದು ಹುಗ್ಗಿ ಪ್ರಸಾದ ಪ್ರಸಾದ
ವಿಶೇಷವಾಗಿ ದಿ.೨೬ ಗೋಪಾಲ ಕಾವಲಿ ಒಡೆಯುವದಿನದಂದು ಈ ಹಿಂದಿನಿಂದ ಬಂದ ಸಾಂಪ್ರದಾಯದಂತೆ ಉತ್ತರ ಕರ್ನಾಟಕ ಭಾಗದ ಗೋದಿ ಹುಗ್ಗಿ, ರೊಟ್ಟಿ, ಅನ್ನ ಸಾಂಬಾರು ಪ್ರಸಾದ ರೂಪದಲ್ಲಿ ಉಣಬಡಿಸಲು ಮುಂದಾಗಲಾಗಿದ್ದು ದಿ. ೨೭ ರಂದು ವಿಶೇಷ ಪ್ರಸಾದವಾಗಿ ಸಜ್ಜಕ, ರೊಟ್ಟಿ, ಅನ್ನ ಸಾಂಬರು ವ್ಯವಸ್ಥೆ ಮಾಡಲಾಗಿದೆ ಜಾತ್ರೆ ಪ್ರಾರಂಭದಿನದಿಂದಲೂ ಮುಕ್ತಾಯದ ವರೆಗೆ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲಿ ವಿಜಯಪುರದ ರೋಟ್ಟಿ ದೇಶದಲ್ಲಿ ಪ್ರಸಿದ್ದತೆ ಪಡೆದಿರುವದರಿಂದ ರೋಟ್ಟಿ, ವಿವಿಧ ತರಹದ ಪಲ್ಲೆ, ಸಾಂಬರ, ಅನ್ನ, ಫನ್ನಿರ ಮಸಾಲ, ಚಪಾತಿ, ಬೊಂದೆ, ಶೆಂಗಾ ಹೋಳಿಗೆ, ಶಿರಾ ಸಜ್ಜಕ, ಒಳಗೊಂಡಂತೆ ವಿವಿಧ ಬಗೆಯ ಫಕ್ವಾನ ಭೋಜನೆದಂತೆ ಶ್ರೀಮಠದಿಂದ ಪ್ರಸಾದದ ನಡೆಯುತ್ತಾ ಬಂದಿದೆ.
ಇಂದು ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮ
ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೆ ಹಾಗೂ ರಥೋತ್ಸವ ಅಂಗವಾಗಿ ದಿ. ೨೬ ರವಿವಾರರಂದು ನಸುಕಿನ ಜಾವ ೫-೩೦ ಕ್ಕೆ ಅಸಂಖ್ಯಾತ ಭಕ್ತ ಸಮೂಹದ ಸಮ್ಮುಖದಲ್ಲಿ ಗೋಪಾಲ ಕಾವಲಿ(ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮವು ಭಕ್ತಿ ಭಾವದೊಂದಿಗೆ ಜರುಗಲಿದೆ. ೯ ದಿನಗಳ ಕಾಲ ನಡೆದು ಬಂದ ಸಪ್ತ ಭಜನಾ ಕಾರ್ಯಕ್ರಮವು ಗೋಪಾಲಕಾವಲಿ(ಮೊಸರುಗಡಿಗೆ) ಒಡೆಯುವದರ ಮೂಲಕ ಮಂಗಲಗೊಳ್ಳಲಿದೆ.
ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಘನ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಗೋಪಾಲ ಕಾವಲಿ ಒಡೆಯುವ ಮುಂಚೆ ಭವ್ಯ ಪ್ರಭಾತ ಪೇರಿಯೊಂದಿಗೆ ಧ್ವಜದ ಮೆರವಣಿಗೆ ನಡೆಯುವದು.
----
ಭಕ್ತರೇ ಶ್ರೀಮಠದ ಆಸ್ತಿಯಾಗಿದ್ದಾರೆ ಶ್ರೀ ಖಾಸ್ಗತಜ್ಜನ ಜಾತ್ರೆ ಭಕ್ತರಿಂದಲೇ ಮೇರಗನ್ನು ಹೆಚ್ಚಿಸಿಕೊಂಡಿದೆ ಸಂಭ್ರಮದ ಜಾತ್ರೆಯ ಸೊಬಗನ್ನು ಹೆಚ್ಚಿಸಲು ಭಕ್ತರೇ ನಿಂತು ಎಲ್ಲ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಇದು ಭಕ್ತರ ಮಠ ಅಜ್ಜನ ಜಾತ್ರೆಗೆ ಎಲ್ಲರೂ ಬಂದು ಶ್ರೀ ಖಾಸ್ಗತಜ್ಜನ ಕೃಪೆಗೆ ಪಾತ್ರರಾಗಬೇಕು.
ಬಾಲಶಿವಯೋಗಿ ಶ್ರೀಸಿದ್ದಲಿಂಗಶ್ರೀ
ಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟೆ
