Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

" ದೇಶದ ಉನ್ನತ ಹುದ್ದೆಗಳನ್ನು ಏರಲು ಶಿಸ್ತುಬದ್ಧ ಅಧ್ಯಯನ ಹಾಗೂ ದೃಢ ಸಂಕಲ್ಪ ಅಗತ್ಯ"

ಸಂಕೇಶ್ವರ: ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವಿದ್ದರೆ ಐಎಎಸ್‌ನಂತಹ ಉನ್ನತ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ ಹಾಗೂ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ಕಿರಣ ಕಮತೆ ಹೇಳಿದರು.
ಪಟ್ಟಣದ ಎಸ್‌ಡಿವ್ಹಿಎಸ್ ಸಂಘದ ಎಸ್. ಎಸ್. ಆರ್ಟ್ಸ್ ಮತ್ತು ಟಿ. ಪಿ. ಸೈನ್ಸ್ ಕಾಲೇಜು, ಎಲ್. ಕೆ. ಖೋತ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಬಿಸಿಎ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು.
ಯಶಸ್ಸು ಎಂಬುದು ರಾತ್ರೋರಾತ್ರಿ ಬರುವುದಿಲ್ಲ. ಆರಂಭದಲ್ಲಿ ಎದುರಾದ ಸರಣಿ ವಿಫಲತೆಗಳು ನನ್ನನ್ನು ಕುಗ್ಗಿಸುವ ಬದಲಾಗಿ, ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾದವು. ನಿರಂತರ ಆರು ವರ್ಷಗಳ ಅಡೆತಡೆಯಿಲ್ಲದ ಅಭ್ಯಾಸ ಹಾಗೂ ಕುಟುಂಬದವರು ನೀಡಿದ ಬೆಂಬಲ ಈ ಸಾಧನೆಯ ಹಿಂದಿನ ಶಕ್ತಿಯಾಗಿದೆ. ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಿಡಸೋಸಿ ಸಿದ್ಧಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ, ದೇಶದ ಉನ್ನತ ಹುದ್ದೆಗಳನ್ನು ಏರಲು ಶಿಸ್ತುಬದ್ಧ ಅಧ್ಯಯನ ಹಾಗೂ ದೃಢ ಸಂಕಲ್ಪ ಅಗತ್ಯ. ಕಿರಣ್ ಕಮತೆ ಅವರಂತಹ ಸಾಧಕರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇವರಿಂದ ಪ್ರೇರಣೆ ಪಡೆದು ವಿದ್ಯಾರ್ಥಿಗಳು ಸಮಾಜಮುಖಿ ಸೇವೆಗೆ ಮುಂದಾಗಬೇಕು ಎಂದರು.
ಸಂಘದ ನಿರ್ದೇಶಕ ನ್ಯಾ. ಆರ್. ಬಿ. ಪಾಟೀಲ ಮಾತನಾಡಿ, ಶಿಕ್ಷಣದ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ವಿದ್ಯಾರ್ಥಿಗಳು ಸಮರ್ಪಣಾಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 ಕಾರ್ಯದರ್ಶಿ ಜಿ. ಸಿ. ಕೋಟಗಿ ಮಾತನಾಡಿ, ಸಂಘವು ಮೊದಲಿನಿಂದಲೂ ಸಾಧಕರನ್ನು ಗೌರವಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೆ. ಸಿ. ಶಿರಕೋಳಿ, ಆಡಳಿತಾಧಿಕಾರಿ ಡಾ. ಬಿ. ಎ. ಪೂಜಾರಿ, ಪ್ರಾಚಾರ್ಯೆ ಡಾ. ಎಸ್. ಐ. ಮಡಿವಾಳಪ್ಪಗೋಳ, ಪ್ರಾಚಾರ್ಯ ಬಿ. ಐ. ಹೆಬ್ಬಾಳಿ, ಕೀರ್ತಿ ಕಮತೆ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೌಲ್ಯಯುತ ಕಥೆಗಳ ಸಂಕಲನ ಮಕ್ಕಳಿಗೆ ದಾರಿದೀಪವಿದ್ಯುತ್ ನಿರ್ವಹಣೆ ಖಾಸಗಿಕರಣ ವಿರೋಧಿಸಿ ನೇಕಾರ ಒಕ್ಕೂಟ ಪ್ರತಿಭಟನೆ ಅಗ್ನಿವೀರರ ಪೋಲಿಸ್ ವಿಚಾರಣೆ ಪ್ರಕ್ರಿಯೆ ವಿಳಂಬ:ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಮನವಿ"ಜನಮೆಚ್ಚಿದ ಮಹಿಳಾ ನಾಯಕಿ" ಪ್ರಶಸ್ತಿಗೆ ಭಾಜನರಾದ ಗಾಲಿ ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಡಾ.  ಶ್ಯಾಮ ಪ್ರಸಾದ ಮುಖರ್ಜಿ ತ್ಯಾಗ ಬಲಿದಾನ ಬಹಳ ದೊಡ್ಡದುಪುಸ್ತಕ ಖರೀದಿ ಯೋಜನೆಗೆ ಮರುಚಾಲನೆ ನೀಡಿ :  ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ  ರುದ್ರಪ್ಪ  ಮನವಿನಗರ-ಗ್ರಾಮೀಣದ ಪ್ರತಿ ಮಗುವಿಗೂ ತಲುಪಲಿ ಪೋಲಿಯೋ ಲಸಿಕೆಜೂ.27 ರಂದು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮರಾಸಾಯನಿಕ ಗೊಬ್ಬರ ತಗ್ಗಿಸಿ, ಸಾವಯವ ಕೃಷಿಗೆ ಆದ್ಯತೆ ನೀಡಲು ಕರೆಬಳ್ಳಾರಿ: ಸರಳಾದೇವಿ ಕಾಲೇಜಿನಲ್ಲಿ ‘ಎಸ್.ಐ.ಆರ್’ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ