LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮೌಲ್ಯಯುತ ಕಥೆಗಳ ಸಂಕಲನ ಮಕ್ಕಳಿಗೆ ದಾರಿದೀಪ

ಹಸಿರು ಕ್ರಾಂತಿ ವರದಿ ಕಲಬುರಗಿ 

ಮೌಲ್ಯಯುತ ಕಥೆಗಳ ಸಂಕಲನ ಮಕ್ಕಳಿಗೆ ದಾರಿದೀಪವಾಗಿವೆ ಎಂದು ರಾಜ್ಯ ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸತೀಶ ಎಸ್. ಹೊಸಮನಿ ಹೇಳಿದರು.

ನಗರದ ಹೋಟೆಲ್ ಬೃಂದಾವನ ಗ್ರ್ಯಾಂಡ್ ಹೋಟೆಲ್ ಬಲದೇವ್ ಸಭಾಂಗಣದಲ್ಲಿ ಮಹಾದೇವಪ್ಪ ಕಡೇಚೂರವರ ಪ್ರಥಮ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಅಯ್ಯನ ಕಥೆಗಳು ಸಣ್ಣ ಕಥೆಗಳ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ರೀಡೆ, ಸ್ನೇಹ, ಓದುವ ಹವ್ಯಾಸ, ಸಾಹಸ ಮಹಾಪುರುಷರ ಕಥೆಗಳು ಪ್ರಾಣಿ ಪ್ರೀತಿ ಮುಂತಾದ ಮಕ್ಕಳ ಕಥೆಗಳು ಇನ್ನಷ್ಟು ಪ್ರಭಾವಶಾಲಿಯಾಗಿ ಮಕ್ಕಳು ಬೆಳೆಯಲು ಪ್ರೇರಣೆ ನೀಡುವ ಕೃತಿಯಾಗಿ ಮೂಡಿ ಬಂದಿದೆ ಎಂದು ಬಣ್ಣಿಸಿದರು.

ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಅವರು ಬದುಕಿನುದ್ದಕ್ಕೂ ಆದರ್ಶದ ಬಾಳ್ವೆ ಮಾಡಿ ಅದರ ಪ್ರೇರಣೆಯಿಂದಲೇ ಅವರ ಭಾವನೆಗಳ ಸ್ಫುರಣೆಯ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡುವ ಕಥಾ ಹಂದರವನ್ನು ಅದು ಒಳಗೊಂಡಿದೆ ಎಂದು ರಾಜ್ಯ ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸತೀಶ್ ಎಸ್. ಹೊಸಮನಿ ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೌಲ್ಯ ಕುಸಿಯುತ್ತಿರುವಾಗ ಮಕ್ಕಳ ಮನೋಧರ್ಮಕ್ಕೆ ಅನುಗುಣವಾಗಿ ಕಥೆಗಳ ಮೂಲಕ ನೀತಿಯನ್ನು ಬೋಧನೆ ಮಾಡಲು ಪ್ರಯತ್ನಿಸಿದ ಕಡೆ ಚೂರು ಅವರ ಇಡೀ ಬದುಕು ಆದರ್ಶಪ್ರಾಯವಾದುದು. ಮಕ್ಕಳು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅನ್ಯಾಯ ಶೋಷಣೆಗೆ ಎಚ್ಚರ ನೀಡುವ ಕೃತಿಯ ಕಥೆಗಳು ನಿಜಕ್ಕೂ ನಮಗೆ ದಾರಿ ದೀಪವಾಗಲಿದೆ ಎಂದರು.

ಡಾ.ಪಿ.ಎಸ್.ಶಂಕರ, ಸ್ವಾಮಿರಾವ್ ಕುಲಕರ್ಣಿ ಮಾತನಾಡಿದರು. ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಉಪ ನಿರ್ದೇಶಕರಾದ ವೀರಶೆಟ್ಟಿ ಬಿ.ಗಾರಂಪಳ್ಳಿ ಪುಸ್ತಕ ಪರಿಚಯ ಮಾಡಿದರು. 

ಧರ್ಮದರ್ಶಿ ವೆಂಕಟೇಶ ಎಂ.ಕಡೇಚೂರ, ಚಂದ್ರಕಾಂತ ಗುತ್ತೇದಾರ, ಡಾ.ಹನುಮಂತ ರಾವ್ ದೊಡ್ಡಮನಿ, ಬೋಡೆ ರಿಯಾಝ್ ಅಹಮ್ಮದ್, ಮಹಾದೇವಯ್ಯ ಕರದಳ್ಳಿ, ಸಂಧ್ಯಾ ಹೊನಗುಂಟಿಕರ್, ನಾರಾಯಣ ಕುಲಕರ್ಣಿ, ಚಿತ್ರಶೇಖರ ಕಂಠಿ, ಸುಬ್ರಾವ್ ಕುಲಕರ್ಣಿ, ಪ್ರಭಾಕರ ಜೋಶಿ ಸೇಡಂ, ಜಮುನಾ ಗುತ್ತೇದಾರ್, ಭೀಮಣ್ಣ ಬೋನಾಳ, ಡಾ.ಸುರೇಶ್ ಹೇರೂರು, ಲಕ್ಷ್ಮಣರಾವ್ ಪೊಲೀಸ್ ಪಾಟೀಲ್, ವೀರಭದ್ರ ಸಿಂಪಿ, ಬಿ.ಆರ್.ಅಣ್ಣ ಸಾಗರ್, ಕುಪೇಂದ್ರ ಶಾಸ್ತ್ರಿ, ಕೃಷ್ಣಮೂರ್ತಿ ಹಳ್ಳಿಖೇಡ್, ಅನಿಲಕುಮಾರ್ ಎಚ್.ಎನ್, ಶಾಂತಾ ಭೀಮಸೇನ್ ರಾವ್ ಮತ್ತಿತರ ಅನೇಕರು ಉಪಸ್ಥಿತರಿದ್ದರು. ಡಾ.ಸದಾನಂದ ಪೆರ್ಲ ಸ್ವಾಗತ ಕೋರಿದರು. ಕಿರಣ್ ಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಡಾ.ಗವಿಸಿದ್ದಪ್ಪ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಲೇಖಕನ ಜವಾಬ್ದಾರಿ ಕೃತಿಯಲ್ಲಿ ಅನಾವರಣ

ಸಮಾಜದ ನೈತಿಕ ಶುದ್ಧೀಕರಣಕ್ಕೆ ಕಥಾಹಂದರವನ್ನ ಹೆಣೆದು ಲೇಖಕ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ ಕಥಾ ಸಂಕಲನ ಇದಾಗಿದೆ. ಕಥೆಗಳ ಪಾತ್ರ ಶೈಲಿ ಭಾಷೆ ಅತ್ಯಂತ ಸರಳವಾಗಿ ಮಣ್ಣಿನ ಸೊಗಡನ್ನು ಬಿಂಬಿಸುತ್ತಿದೆ. ಹೈಸ್ಕೂಲಿನಿಂದ ಕಾಲೇಜಿನವರೆಗೆ ಓದುವ ವಿದ್ಯಾರ್ಥಿಗಳಿಗೆ ನೀತಿ ಬೋಧೆನೆಯನ್ನು ನೀಡುವ ಉತ್ತಮ ಕೃತಿ.

-ವೀರಶೆಟ್ಟಿ ಬಿ.ಗಾರಂಪಳ್ಳಿ, ಪುಸ್ತಕ ವಿಮರ್ಶಕ.

 

ಕಡೇಚೂರ್ ವಾರ್ಷಿಕ ಪ್ರಶಸ್ತಿ ಘೋಷಿಸಿ

ಮಂತ್ರ-ತಂತ್ರ-ಯಂತ್ರ ಯುಗವನ್ನು ದಾಟಿದ ಇಂದಿನ ಸಮಾಜ ಕುತಂತ್ರ ಯುಗದಲ್ಲಿ ಬದುಕುತ್ತಿದ್ದು, ಮೌಲ್ಯಗಳು ಕಣ್ಮರೆಯಾಗುತ್ತಿರುವ ಕಾಲ ಘಟ್ಟದಲ್ಲಿ ಹಿರಿಯರು ಜವಾಬ್ದಾರಿಯುತ ಬದುಕನ್ನು ಮಾಡಿ ಎಚ್ಚರಿಕೆ ನೀಡಿದ್ದು, ಅದು ಈ ಕಥೆಗಳಲ್ಲಿ ಕೂಡಾ ಅನಾವರಣಗೊಂಡಿದೆ. ಬದುಕಿನ ಚಿಂತನೆ ಮತ್ತು ಮೌಲ್ಯಗಳು ಕಥೆಯ ಅಂತಃಸತ್ವವಾಗಿದ್ದು, ವ್ಯಕ್ತಿತ್ವ ನಿರ್ಮಾಣಕ್ಕೆ ನೀತಿ ಬೋಧಕ ಕಥೆಗಳಾಗಿವೆ. ಕಡೇಚೂರ್ ಹೋರಾಟದ ಮೂಲಕ ಮಾನವೀಯ ಮೌಲ್ಯದ ಅರ್ಥವಂತಿಕೆಯ ಜೀವನ ಸಾಗಿಸಿದವರು. ಅವರ ಹೆಸರಿನಲ್ಲಿ ಪ್ರತಿಷ್ಠಾನವು ಪ್ರತಿ ವರ್ಷ ಒಬ್ಬ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಲಿ.

-ಡಾ.ಸ್ವಾಮಿರಾವ್ ಕುಲಕರ್ಣಿ, ಹಿರಿಯ ಸಾಹಿತಿ.

 

ಪುಸ್ತಕ ಬಿಡುಗಡೆ ಕ್ರಮ ಬದಲಾಗಲಿ

ಪುಸ್ತಕ ಬಿಡುಗಡೆ ಕಾರ್ಯಕ್ರಮವು ಸಾಂಪ್ರದಾಯಿಕ ಶೈಲಿಯಿಂದ ವಿದೇಶದಲ್ಲಿರುವಂತೆ ಭಿನ್ನವಾಗಿ ಆಗಬೇಕಾಗಿದೆ. ವಿದೇಶದಲ್ಲಿ ಸಾಂಕೇತಿಕವಾಗಿ ಪುಸ್ತಕದ ಲೇಖಕ ಕೃತಿಯನ್ನು ಬರೆದ ಬಗೆಯನ್ನು ತಿಳಿಸಿದರೆ ಸಭಿಕರು ಪ್ರಶ್ನೆಗಳ ಮೂಲಕ ಕೃತಿಯ ಒಳನೋಟವನ್ನು ತಿಳಿಸುತ್ತಾರೆ. ಅಂತಹ ಪದ್ಧತಿಯಲ್ಲಿ ಪುಸ್ತಕ ಬಿಡುಗಡೆಯಾದರೆ ಲೇಖಕ ಮತ್ತು ಓದುಗನ ನಡುವಿನ ಸಂಬಂಧ ವೃದ್ಧಿಗೊಳ್ಳುತ್ತದೆ, ಕೃತಿ ಪೂರ್ಣ ರೂಪದಲ್ಲಿ ಅನಾವರಣಗೊಳ್ಳುತ್ತದೆ.

-ಡಾ.ಪಿ.ಎಸ್.ಶಂಕರ, ಹಿರಿಯ ವೈದ್ಯರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 *ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ ರೆಡ್ಡಿಯವರಿಗೆ ಗೌರವ, ಸನ್ಮಾನ,,* 15 ವರ್ಷಗಳ ಬಳಿಕ ಮಾರಿಹಾಳದಲ್ಲಿ ಮಹಾಲಕ್ಷ್ಮಿ ಜಾತ್ರೆ: ಜಾತ್ರೆಯ ಸಿದ್ಧತೆ, ಭಕ್ತರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಸಭೆನಾಳೆ ಶ್ರೀ ದ್ಯಾಮವ್ವ, ದುರಗಮ್ಮ ದೇವಿಯರ ಅದ್ದೂರಿ ಮೇರವಣಿಗೆ: ರಾಜು ಖಾನಪ್ಪನವರಮಾಧ್ಯಮ ಮಿತ್ರರು ಕ್ರೀಡೆಯಲ್ಲಿ ಭಾಗವಹಿಸಿದ್ದು ಉತ್ತಮ ಬೆಳವಣಿಗೆಕೊಪ್ಪಳ ತಾ.ಪಂ. ಇಒ ಎತ್ತಂಗಡಿಗೆ ಆಗ್ರಹಿಸಿ ಆ. 31ಕ್ಕೆ ಬೃಹತ್ ಪ್ರತಿಭಟನೆಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳಸಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ: ಜಿಲ್ಲೆಯಲ್ಲಿ 13,53,946 ಮತದಾರರ ಕರಡು ಪಟ್ಟಿ ಪ್ರಕಟ30ರಂದು  ಶ್ರೀ ಬಾಳುಮಾಮಾ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿತ್ಯ ನೇಮ ಉಪಾಷಣೆಯಿಂದ ನೆಮ್ಮದಿ ಜೀವನ.....ಪ್ರಭುಜಿ   ಮಹಾರಾಜ.ಮಳೆ ದೇವರು ಕೊಡುತ್ತಾನೆ, ಅದರ ಹಂಚಿಕೆ ಸರ್ಕಾರ ಮಾಡಬೇಕು  : ಮಹಾಂತೇಶ ದೊಡ್ಡಗೌಡರ