LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಅಗ್ನಿವೀರರಾಗಿ ಆಯ್ಕೆ ವಿದ್ಯಾರ್ಥಿಗಳಿಗೆ ಸನ್ಮಾನ

ಹುನಗುಂದ: ನಗರದ ವಿಮವಿವ ಸಂಘದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯದ ಹತ್ತು ವಿದ್ಯಾರ್ಥಿಗಳು ಅಗ್ನಿವೀರರಾಗಿ ಅಯ್ಕೆಯಾಗಿರುವದು ಬಹಳ? ಸಂತೋಷ ತಂದಿದೆ. ದೇಶ ಸೇವೆ ಮಾಡಲು ಇದೊಂದು ಸುವರ್ಣ ಅವಕಾಶವಾಗಿದೆ ಎಂದು ಪದವಿ ಪ್ರಾಚಾರ್ಯ ಶ್ರೀಶೈಲ ಗೋಲಗೊಂಡ ಹೇಳಿದರು.
ಇಲ್ಲಿನ ಕಲಾ, ವಿ.ಎಂ.ಎಸ್.ಆರ್.ವಸ್ತ್ರದ ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಎನ್‌ಸಿಸಿ ವಿಭಾಗದ ಅಡಿಯಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತ
ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸಿ ತಂದೆ ತಾಯಿಗಳ ಹಾಗೂ ಮಹಾವಿದ್ಯಾಲಯದ ಗೌರವ ಹೆಚ್ಚಿಸಬೇಕು ಎಂದು ಹೇಳಿದರು.
ಕ್ರೀಡಾ ನಿರ್ದೇಶಕ ಎಸ್.ಬಿ ಚಳಗೇರಿ ಮಾತನಾಡಿ ಅಗ್ನಿವೀರ ಅಯ್ಕೆಯಾದವರಿಗೆ ನಾಲ್ಕು ವ?ಗಳಲ್ಲಿ ಸುಮಾರ ರೂ. ೨೭.೩೦ ಲಕ್ಷ ವೇತನ ಸಿಗಲಿದ್ದು, ಶೇ.೨೫ರ? ಅಭ್ಯರ್ಥಿಗಳಿಗೆ ಸೇವೆಯಲ್ಲಿ ಮುಂದುವರೆಯುವ ಅವಕಾಶವಿದೆ. ಯಾವದೇ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರಬೇಕು ಎಂದರು. ಪದವಿ ಪೂರ್ವ ಪ್ರಾಚಾರ್ಯ ಎಚ್.ಎಸ್.ಬೋಳಿಶೆಟ್ಟರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಗ್ನಿ ವೀರರಾಗಿ ಆಯ್ಕೆಯಾದ ದರ್ಶನ ಕುಣಬೆಂಚಿ, ದ್ಯಾಮಣ್ಣ ಅಂಟರದಾನಿ, ಧರ್ಮಪ್ಪ ಚಿತ್ತವಾಡಗಿ, ಮಂಜುನಾಥ ಬನ್ನಿ, ನವೀನ ಗೂಳಿ, ಶಿವಪ್ಪ ಪವಾಡಿಗೌಡರ, ವಿಶ್ವನಾಥ ಮೊಕಾಶಿ, ಮಂಜುನಾಥ ತಳವಾರ, ಆನಂದ ಹೆಳವರ, ಶಿವರುದ್ರಪ್ಪ ಗೂಳಿ ಅವರನ್ನು ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಅಗ್ನಿ ವೀರರಾಗಿ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ಲೆಫ್ಟಿನೆಂಟ್ ವಿರೇಶ ರಾಯರ ನಿರೂಪಿಸಿದರು. ಪ್ರಾಧ್ಯಪಕ ಡಿ.ಎಸ್. ತಿಪ್ಪೇಸ್ವಾಮಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್