ಮೂಡಲಗಿ : ಪಟ್ಟಣದ ಪ್ರತಿಷ್ಠಿತ ಮೂಡಲಗಿ ಕೋ- ಆಪರೇಟಿವ್ ಬ್ಯಾಂಕ್ ೨೦೨೫-೨೬ನೇ ಹಣಕಾಸಿನ ವ?ದ ಕೊನೆಯಲ್ಲಿ ೮೦.೦೨ ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಪ್ರಗತಿಯತ್ತ ಸಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಸುಭಾಸ ಢವಳೇಶ್ವರ ತಿಳಿಸಿದರು.
ಶುಕ್ರವಾರದಂದು ಪಟ್ಟಣದ ಬ್ಯಾಂಕಿನ ಸಭಾಭವನದಲ್ಲಿ ಜರುಗಿದ ೭೬ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ವ?ದಲ್ಲಿ ಬ್ಯಾಂಕ್ ೨.೭೧ ಕೋಟಿ ರೂ. ?ರು ಬಂಡವಾಳ, ೯.೮೫ ಕೋಟಿ ರೂ. ಕಾಯ್ದಿರಿಸಿದ ನಿಧಿಗಳು, ೧೬೫.೨೪ ಕೋಟಿ ರೂ. ಠೇವಣಿ ಹಾಗೂ ೬೪.೯೪ ಕೋಟಿ ರೂ. ಗುಂತಾವಣೆ ಹೊಂದಿದ್ದು ೯೩.೨೩ ಕೋಟಿ ರೂ. ಸಾಲ ವಿತರಿಸಿದೆ ಎಂದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ನವೀನ ಬಡಗಣ್ಣವರ, ಕೆ.ವಿ.ದಂತಿ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಸಿ.ಎ. ರಾಜ ಬೋಳಮಾಳ, ಜಿ.ವಿ.ಬುದ್ನಿ, ಚಿದಾನಂದ ಢವಳೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..
