ಬಳ್ಳಾರಿ, ಜೂ.24: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಮಾಜಸೇವೆ ಮತ್ತು ಜನಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಗಾಲಿ ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಅವರು, ಕರ್ನಾಟಕ ಟಿವಿಯು ನೀಡುವ ಪ್ರತಿಷ್ಠಿತ ಲೀಡರ್ ಅವಾರ್ಡ್ 2025 'ಜನಮೆಚ್ಚಿದ ಮಹಿಳಾ ನಾಯಕಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಹಿಳಾ ಸಬಲೀಕರಣ ಮತ್ತು ಸಮಾಜದ ಅಭಿವೃದ್ಧಿಗಾಗಿ ಲಕ್ಷ್ಮಿ ಅರುಣಾ ಅವರು ಸಲ್ಲಿಸುತ್ತಿರುವ ನಿರಂತರ ಕೊಡುಗೆಯನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಸಾಧನೆಯು ಈ ಭಾಗದ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದು, ಅವರ ಜನಪರ ಕಾಳಜಿಗೆ ಸಿಕ್ಕ ಗೌರವವಾಗಿದೆ.
ಲಕ್ಷ್ಮೀ ಅರುಣಾ ಅವರು ಮತ್ತಷ್ಟು ಮಹಿಳಾ ಸಬಲೀಕರಣದ ಕಾರಗಯಗಳನ್ನು ಕೈಗೊಳ್ಳಲು ಈ ಪ್ರಶಸ್ತಿ ಮತ್ತಷ್ಟು ಸ್ಪೂರ್ತಿ ನೀಡಲಿ ಎಂದು ಅವರ ಅಭಿಮಾನಿಗಳು ಆಶಿಸಿದ್ದಾರೆ.
