ಘಟಪ್ರಭಾ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಮಾಡಲು ರಾಜ್ಯ ಸರಕರ ಪ್ರಯತ್ನಿಸುತ್ತಿತುವುದನ್ನು ವಿರೋಧಿಸಿ ಘಟಪ್ರಭಾ ಮೃತ್ಯುಂಜಯ ಸರ್ಕಲ್‌ನಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ, ಕನ್ನಡಪರ ಸಂಘಟನೆ ಮತ್ತು ದಲಿತ ಪರ ಸಂಘಟನೆಗಳು ಮಂಗಳವಾರ ದಂದು ಸೇರಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ರೈತ ಸಂಘದ ಅಧ್ಯಕ್ಷ ಗಣೇಶ ಇಳಿಗೇರ ಮಾತನಾಡಿ ರಾಜ್ಯ ಸರಕಾರ ಪ್ರತಿಯೊಂದು ಇಲಾಖೆಯನ್ನು ಖಾಸಗೀಕರಣ ಮಾಡಿ ಜನಸಾಮಾನ್ಯರ ಮೇಲೆ ಬಾರ ಹಾಕುತ್ತಿದೆ ಈಗಾಗಲೇ ಸಾರಿಗೆ ಇಲಾಖೆಯ ಖಾಸಗೀಕರಣ ಮಾಡಿದೆ ಈಗ ರೈತರ ಜತೆ ನೇರ ಸಂಪರ್ಕ ಹೊಂದಿರುವ ವಿದ್ಯುತ್ ಇಲಾಖೆಯನ್ನು ಟಾಟಾ ಪವರ್ ಕಂಪನಿಗೆ ಕೊಡುವ ಪ್ರಯತ್ನ ನಡೆದಿದೆ. ಈಗಾಗಲೇ ನಗರ ಪ್ರದೇಶದಲ್ಲಿ ಖಾಸಗಿಯವರೆ ನಿಯಂತ್ರಣ ಮಾಡುತ್ತಿದ್ದಾರೆ. ವಿದ್ಯುತ್ ಖಾಸಗೀಕರಣವಾದರೆ ರೈತರು ತಮ್ಮ ಸಮಸ್ಯೆಯನ್ನು ಯಾರ ಜೊತೆ ಹೇಳಿಕೊಳ್ಳಬೇಕು ಸರಕಾರದ ಹಿಡಿತದಲ್ಲಿರುವ ವಿದ್ಯುತ್ ಪ್ರಸರಣಾ ನಿಗಮ ರಾಜ್ಯದಲ್ಲಿ ಜನಪರ, ರೈತಪರ, ಕೈಗಾರಿಕಾ ಅಭಿವೃದ್ಧಿ, ಗ್ರಾಮೀಣ ವಿದ್ಯುತ್ ಕರಣ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ ಇದೇ ಅಲ್ಲದೆ ಹಲವಾರು ಕಲ್ಯಾಣ ಯೋಜನೆಗಳು ಯಶ್ವಸಿಯಾಗಿ ನಡೆಯುತ್ತಿದೆ ಖಾಸಗಿಯಾದರೆ ರೈತರಿಗೆ ತುಂಬಾ ತೊಂದರೆಯಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ನಾವು ಬಿಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪರ ಸಂಘಟನೆಯ ಒಕ್ಕೂಟ ಅಧ್ಯಕ್ಷ ಕೆಂಪಣ್ಣ ಚೌಕಾಶಿ, ದಲಿತಪರ ಸಂಘಟನೆಯ ಮುಖಂಡರು, ಹಲವಾರು ರೈತ ಮುಖಂಡರು ಸರಕಾರದ ನೀತಿಯನ್ನು ವಿರೋಧಿಸಿ ಮಾತನಾಡಿದರು.
ಎರಡು ಗಂಟೆ ರಸ್ತೆ ತಡೆ ಪರದಾಡಿದ ಸಾರ್ವಜನಿಕರು: ಘಟಪ್ರಭಾ ಮೃತ್ಯಂಜಯ ಸರ್ಕಲ್‌ನಲ್ಲಿ ರೈತರು ಬೆಳಿಗ್ಗೆ ೧೧.೩೦ ರಿಂದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದರಿಂದ ಸಾರ್ವಜನಿಕರು, ವಾಹನಸವಾರರು ಪರದಾಡಬೇಕಾಯಿತು. ಪ್ರಾರಂಭದಲ್ಲಿ ಪ್ರತಿಭಟನೆ ಮಾಡಿ ಮನವಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು ಆದರೆ ರೈತರು ಸ್ಥಳಕ್ಕೆ ಜಿಲ್ಲಾಧಿಕಾರಿಗಳೆ ಬರಬೇಕು ಅಲ್ಲಿ ತನಕ ಮನವಿ ನೀಡುವುದಿಲ್ಲವೆಂದು ಹಠ ಹಿಡಿದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಸ್ಥಳದಲ್ಲಿದ್ದ ತಾಲೂಕಾ ದಂಡಾಧಿಕಾರಿಗಳು, ಘಟಪ್ರಭಾ ಠಾಣೆಯ ಪಿಐ ಎಚ್.ಡಿ.ಮುಲ್ಲಾ ಎಲ್ಲಾರು ಮನವಿ ಮಾಡಿದರು ರೈತರು ಕೇಳಲಿಲ್ಲ ನಮ್ಮನ್ನು ಬಂಧಿಸುವ ತನಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲವೆಂದು ಕುಳಿತುಕೊಂಡರು ೧.೩೦ರ ಸುಮಾರಿಗೆ ಮೇಲಾಧಿಕಾರಿಗಳು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮನವರಿಕೆ ಮಾಡಿದ ನಂತರ ರೈತರು ಸ್ಥಳದಲ್ಲಿದ್ದ ಗೋಕಾಕ ತಾಲೂಕಾ ದಂಡಾಧಿಕಾರಿ ಡಾ|| ಮೋಹನ ಭಸ್ಮೆ, ಘಟಪ್ರಭಾ ಠಾಣೆ ಪಿಐ ಎಚ್.ಡಿ.ಮುಲ್ಲಾ, ಮೂಡಲಗಿ ಸರ್ಕಲ್ ಇನ್ಸ್‌ಪೆಕ್ಟರ ಶ್ರೀಶೈಲ ಬ್ಯಾಕೂಡ ಅವರಿಗೆ ಮನವಿ ಸಲ್ಲಿಸಿ ನಿರ್ಗಮಿಸಿದರು. ಎರಡು ಗಂಟೆ ರಸ್ತೆ ತಡೆಯಾಗಿದ್ದರಿಂದ ಘಟಪ್ರಭಾದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.
