Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜ್ಯೋತಿ ಬೆಳಗಿಸುವ ಮೂಲಕ ಸಾಂಸ್ಕೃತಿಕ ಕ್ರೀಡೆ, ಇ ಎಲ್ ಸಿ. ರೇಂಜರ್, ರೋವರ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ 

ರಾಮದುರ್ಗ: ತಾಲೂಕಿನ ಸುರೇಬಾನ-ಮನಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2026- 27ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ಇ ಎಲ್ ಸಿ ರೇಂಜರ್ ಮತ್ತು ರೋವರ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಶನಿವಾರ ಜ್ಯೋತಿ ಬೆಳಗಿಸುವ  ಮೂಲಕ  ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ ಕೆ ಭಜಂತ್ರಿ ಪ್ರಾಚಾರ್ಯರು, ಅಧ್ಯಕ್ಷರು ಜಿಲ್ಲಾ ಪ್ರಾಚಾರ್ಯರ ಸಂಘ, ಬೆಳಗಾವಿ  
ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮುಖ್ಯವಾದದ್ದು, ಸಾಧನೆಗೆ ಶ್ರದ್ದೆ, ಸತತ ಪ್ರಯತ್ನ ಇದ್ದಾಗ ಯಶಸ್ಸು ಹುಡುಕಿಕೊಂಡು ಬರುತ್ತದೆ. ಉತ್ತಮ ಕೆಲಸಕಾರ್ಯಗಳು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತವೆ. ಹಲವಾರು ಮಹಾನ್ ಸಾಧಕರನ್ನು ಮಾದರಿಯಾಗಿಟ್ಟುಕೊಂಡು ಅವರಂತೆ ಸಾಧನೆ ಮಾಡಲು ಸತತ ಪ್ರಯತ್ನ,ನಿರಂತರ ಅಧ್ಯಯನ, ಉತ್ತಮ ಸಂಸ್ಕೃತ ಇಂತವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧಕರಾಗಿ, ಅಗ್ರ ಗಣ್ಯ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ  ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯರು ಎನ್ ಬಿ ಶಿರಿಶಾಡ ಅವರು  ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಪಠ್ಯೇತರ ಚಟುವಟಿಕೆಯು ಸಹ ಅಷ್ಟೇ ಮುಖ್ಯವಾಗಿದೆ. ಸತತ ವಿದ್ಯಾಭ್ಯಾಸವು ಜೀವನದ ದಾರಿದೀಪವಾಗಿದೆ. ಗುರುಗಳು ಹೇಳಿದಂತಹ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು . ಜೊತೆಗೆ ಮೊಬೈಲ್ ಬಳಕೆ ಅತೀಯಾಗದಿರಲಿ, ಅವಶ್ಯವಿದ್ದಷ್ಟು ಬಳಕೆ ಮಾಡಲು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಶ್ರಮದಿಂದ ಅಭ್ಯಾಸವನ್ನು  ಮಾಡಿದರೆ ಮುಂದೆ ಭವಿಷ್ಯದಲ್ಲಿ ಸುಖವನ್ನು ಅನುಭವಿಸಲು ಸಾಧ್ಯ, ಆದ್ದರಿಂದ ಉತ್ತಮವಾದ ರೀತಿಯಲ್ಲಿ ಅಭ್ಯಾಸವನ್ನು ಮಾಡಬೇಕು, ಎಂದು ಹೇಳಿದರು.
 ಈ ಸಂದರ್ಭದಲ್ಲಿ ಈ ಮಹಾವಿದ್ಯಾಲಯದಲ್ಲಿ ಸಾಧನೆಗೈದ   ವಿದ್ಯಾರ್ಥಿನಿಯರು ಪ್ರತೀಕಾ ಮೇಟಿ ಹಾಗೂ ವೀಣಾ ಕುದರಿ ಅನಿಸಿಕೆ ವ್ಯಕಪಡಿಸಿ ನಮಗೆ ಇಲ್ಲಿ ಉತ್ತಮವಾದ ರೀತಿಯಲ್ಲಿ ಎಲ್ಲ ಉಪನ್ಯಾಸಕರು ಭೋದನೆ-ಮಾರ್ಗದರ್ಶನ ನೀಡಿದ್ದಾರೆ. ಅವರ ಮಾರ್ಗದರ್ಶನ, ಸಹಕಾರದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರು ನಾಗರಾಜ ಹಕ್ಕೇರ ವಹಿಸಿಕೊಂಡಿದ್ದರು. ವಿಶೇಷ ಉಪನ್ಯಾಸ ಪ್ರಾಚಾರ್ಯರು ಎಂ ಕೆ ಭಜಂತ್ರಿ, ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಗಿರಿಯಪ್ಪ ಹಣಸಿ,ಸದಸ್ಯರಾದ ಶಿವಾನಂದ ಮೇಟಿ, ಮಂಜುನಾಥ ಪಾಟೀಲ, ಮಹಾಂತೇಶ ಮೋಟೆ, ಎಸ್ ಆರ್ ಗುರುಬಸಣ್ಣವರ, ಪ್ರಾಚಾರ್ಯರು ಡಿ ಟಿ ಹೊಸಮನಿ, ರವೀಂದ್ರ ಕರಲೆಪ್ಪನವರ ಉಪನ್ಯಾಸಕರು , ಹಾಗೂ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು.
ಡಾ. ಅಶ್ವಿನಿ ಟಿ ಜಿ  ನಿರೂಪಿಸಿದರು,ಪ್ರವೀಣಕುಮಾರ ಕೋಟಿ  ಸ್ವಾಗತಿಸಿದರು,  ಪ್ರಾಸ್ತಾವಿಕ ನುಡಿ ರಮೇಶ ಬಡಿಗೇರ,ಸಾಧನೆ ಗೈದವಿದ್ಯಾರ್ಥಿಗಳ ಗೌರವ ಸಮರ್ಪಣೆ ಸಾವಿತ್ರಿ ಪಾಟೀಲ,  ಈಶಪ್ಪ ಸರ್  ವಂದಿಸಿದರು.
Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಶ್ರೀಮತಿ. ಸರಳಾ ಶಿವಾನಂದ ಹೇರೆಕರ ಇವರು    ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್  ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆವಿಜ್ರಂಭಣಿಯಿಂದ ಜರುಗಿದ ಶ್ರೀ ಹಡಪದ ಅಪ್ಪಣ್ಣನವರ ಜಯಂತಿಅಥಣಿ, ಶ್ರೀ ಸುಧಾ ಭಜನಾ ಮಂಡಳದಿಂದ ಏಕಾದಶಿ‌ ನಿಮಿತ್ಯ ಪಲ್ಲಕ್ಕಿ ಉತ್ಸವ. ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಕಾರ ಹುಣ್ಣಿಮೆಗೆ ಮೊದಲೇ ಸಜ್ಜುಗೊಂಡ ವೇದಿಕೆಯ ಪೂಜಾ ಕಾರ್ಯಕ್ರಮಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ * ಎಲ್ಲಡೆ ಸಂಭ್ರಮ, ಸಡಗರದ ಮೆರಗುಜ್ಯೋತಿ ಬೆಳಗಿಸುವ ಮೂಲಕ ಸಾಂಸ್ಕೃತಿಕ ಕ್ರೀಡೆ, ಇ ಎಲ್ ಸಿ. ರೇಂಜರ್, ರೋವರ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ವಿಕಸಿತ್ ವೈಬ್ರಂಟ್‌ ವಿಲೇಜ್‌-2006 ವಿಶಿಷ್ಟ ಕಾರ್ಯಕ್ರಮಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ ಚುನಾವಣೆ ಸ್ವಾಸ್ಥ್ಯ ಸಂಕಲ್ಪ ಯೋಜನೆ ಕಾರ್ಯಕ್ರಮ