LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ರಾಮದುರ್ಗದಲ್ಲಿ ‘ಸುರಕ್ಷಿತ ಬಚಪನ್’ ಅಭಿಯಾನಕ್ಕೆ ಚಾಲನೆ


ರಾಮದುರ್ಗ: ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಅ.೨೬ ರಿಂದ ೩೧ರ ವರೆಗೆ ಸುರಕ್ಷಿತ ಬಚಪನ್ ಅಭಿಯಾನ ನಡೆಯುತ್ತಿದ್ದು, ಮಕ್ಕಳಿಗೆ ಜಾಗೃತಿ ಮೂಡಿಸಲಾಗುವುದು ಎಂದು ಪೆನಲ್ ಅಡ್ವಕೇಟ್ ಡಿ.ಎ. ಮನಿಯಾರ್ ಹೇಳಿದರು.
ಸ್ಥಳೀಯ ಜ್ಞಾನ ಪ್ರಬೋಧಿನಿ ವಿದ್ಯಾಲಯದಲ್ಲಿ ಜಿ.ಪಂ. ಶಾಲಾ ಶಿಕ್ಷಣ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರಿ ಇವುಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ಸುರಕ್ಷಿತ ಬಚಪನ್ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೇಲಿನ ಲೈಂಗಿನ ದೌರ್ಜನ್ಯ ಮತ್ತು ಕಿರುಕುಳ ಪ್ರಕರಣಗಳನ್ನು ತಡೆಗಟ್ಟುವುದು. ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸುವುದು. ಮಕ್ಕಳ ಸುರಕ್ಷತೆ, ಉತ್ತಮ ಬಾಲ್ಯ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದೇ ಅಭಿಯಾನದ ಉದ್ಧೇಶವಾಗಿದೆ ಎಂದು ಅವರು ತಿಳಿಸಿದರು.  
ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಬಿಂದಿಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಮೇಲೆ ಒಂದಿಲ್ಲೊಂದು ದೌರ್ಜನ್ಯಗಳು ನಡೆಯುತ್ತಲಿವೆ. ಹಾಗಾಗಿ ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದ್ದು, ಕಾನೂನು ಸೇವಾ ಪ್ರಾಧಿಕಾರಿ ಅಭಿಯಾನ ಹಮ್ಮಿಕೊಂಡಿರುವುದನ್ನು ಶ್ಲಾಘಿನಿಸಿದರು.
ಶಿಕ್ಷಣ ಸಂಯೋಜಕ ಶಿವಾನಂದ ಯರಗುದ್ರಿ, ಆಡಳಿತಾಧಿಕಾರಿ ಎಸ್.ವಿ. ಕುಲಕರ್ಣಿ, ಪ್ರಧಾನ ಗುರುಮಾತೆ ಎಸ್.ವಿ.ನಾಡಗೌಡರ, ಎಸ್.ಎಸ್. ಆಪ್ಟೆ ಉಪಸ್ಥಿತರಿದ್ದರು. ಐ.ಪಿ. ಬಡಿಗೇರ ಸ್ವಾಗತಿಸಿದರು. ಎಸ್.ಎಸ್. ಬಡಿಗೇರ ನಿರೂಪಿಸಿ, ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST