LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಮಹಿಳೆಯ ಕಾಣೆ ಠಾಣೆಗೆ ದೂರು


ತಾಳಿಕೋಟೆ, ತಾಲೂಕಿನ ಹೊಸಹಳ್ಳಿ ಗ್ರಾಮದ ಸಾವಿತ್ರಿ ಅಲಿಯಾಸ್ ಸುಕನ್ಯಾ (೨೮) ಎಂಬ ಮಹಿಳೆ ತುಂಬಗಿ ಗ್ರಾಮದ ಶ್ರೀ ಪರಮಾನಂದ ಪೂರ್ವ ಪ್ರಾಥಮಿಕ ಶಾಲೆಗೆ ೨೦೨೬ರ ಸೆಪ್ಟೆಂಬರ್ ೧೯ರಂದು ಬೆಳಿಗ್ಗೆ ಸುಮಾರು ೧೧.೩೦ರ ವೇಳೆಗೆ ತೆರಳಿದ್ದ ಸಾವಿತ್ರಿ ಅವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆಂದು ಮಾವ ಪ್ರಕಾಶ ಮಲ್ಲರಾಯ ಬಡಿಗೇರ (೫೫) ಅವರು ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
     ಸಾವಿತ್ರಿ ಅಲಿಯಾಸ್ ಸುಕನ್ಯಾ ಅವರು ಮೂಲತಃ ಬಸವನಬಾಗೇವಾಡಿ ತಾಲೂಕಿನ ಸಾಸನೂರ ಗ್ರಾಮದವರಾಗಿದ್ದು, ಪ್ರಸ್ತುತ ತಾಳಿಕೋಟೆ ತಾಲೂಕಿನ ಹೊಸಹಳ್ಳಿಯಲ್ಲಿ ವಾಸವಾಗಿದ್ದಾರೆ. ಹೊಲ ಮತ್ತು ಮನೆ ಕೆಲಸ ಮಾಡುತ್ತಿದ್ದ ಅವರು ಸುಮಾರು ೫ ಅಡಿ ೪ ಇಂಚು ಎತ್ತರ, ತೆಳ್ಳನೆಯ ಹಾಗೂ ಸದೃಢ ಮೈಕಟ್ಟು, ಗೋಧಿ ಮೈಬಣ್ಣ ಮತ್ತು ಕೋಲು ಮುಖ ಹೊಂದಿದ್ದಾರೆ. ಕನ್ನಡ ಮಾತನಾಡುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ಚಾಕೊಲೇಟ್ ಬಣ್ಣದ ಹೂವಿನ ಚಿತ್ರವಿರುವ ನೈಟಿ ಧರಿಸಿದ್ದರು ಎಂದು ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.
      ಸದರಿ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಾಳಿಕೋಟೆ ಪೊಲೀಸ್ ಠಾಣೆ ದೂರವಾಣಿ ೦೮೩೫೬-೨೬೬೩೩೩, ೯೪೮೦೮೦೪೨೬೫ ಗೆ ಸಂಪರ್ಕಿಸಲು ಕೋರಲಾಗಿದೆ. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST