LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಾರ್ಖಾನೆಯಿಂದ 4500/- ರೂ., ಸರ್ಕಾರದಿಂದ 1000/- ರೂ ನೀಡಿ 

ಗುರ್ಲಾಪೂರ(27):- ಕಾರ್ಖಾನೆ ಮಾಲೀಕರಿಂದ 4500 ರೂ ಹಾಗೂ ಸರ್ಕಾರದಿಂದ 1,000 ರೂ ಗಳನ್ನು  ನಮ್ಮ ಬೇಡಿಕೆಯಾಗಿತ್ತು. ಇದನ್ನು ನಾವು ಮುಖ್ಯಮಂತ್ರಿ ಅವರ ಮುಂದೆ  ಮಂಡಿಸುತ್ತಿರುವಾಗ ಬೇರೆ ಬಣದವರು ಬೇಕಂತಲೇ  ಮಧ್ಯಪ್ರವೇಶಿಸಿ  ಕಿಡಗೇಡಿತನ  ಮಾಡಿದ್ದಾರೆ. ಆದರೂ  ಅವರು ನಮ್ಮವರೇ , ಎಲ್ಲರೂ ಒಗ್ಗಟ್ಟಾಗಿ  ನಮ್ಮ ಗುರಿ ಸಾಧಿಸೋಣ ಎಂದು  ಕರ್ನಾಟಕ ರಾಜ್ಯ ರೈತ ಸಂಘ  ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದರು.
 ಅವರು ಮಂಗಳವಾರ ಬೃಹತ್ ರೈತ ಹೋರಾಟದಲ್ಲಿ  ಮಾತನಾಡುತ್ತಾ  ನಮ್ಮ ಗುರಿ ಒಂದೇ ನಮ್ಮ ಹೋರಾಟ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ . ಅವರು ನಮಗೆ ಮೋಸ ಮಾಡುತ್ತಿದ್ದಾರೆ  ಅವರನ್ನು ಸರಿದಾರಿಗೆ ತರುವುದೇ ನಮ್ಮ ಉದ್ದೇಶ. 80 ವರ್ಷಗಳಿಂದ  ರೈತರಿಗೆ ಆಗುತ್ತಿರುವ ಶೋಷಣೆ, ಆತ್ಮಹತ್ಯೆ  ನಿಲ್ಲುತ್ತಿಲ್ಲ, ಇದು ಕೊನೆಯಾಗಬೇಕು. ರೈತರನ್ನು ಆರ್ಥಿಕವಾಗಿ ಸಬಲುಗೊಳಿಸಿ , ಅವರಿಗೆ ನ್ಯಾಯ ದೊರಕಿಸಿ ಕೊಡುವುದು  ರೈತ ಸಂಘಟನೆಯ ಮೂಲ ಕರ್ತವ್ಯವಾಗಿದೆ ಎಂದು ಹೇಳಿದರು.
 ರಾಜ್ಯ ಗೌರವಾಧ್ಯಕ್ಷ    ಶಶಿಕಾಂತ್ ಗುರೂಜಿ ಮಾತನಾಡಿ ಗುರ್ಲಾಪುರ ರೈತ ಹೋರಾಟ  ಎಲ್ಲ ಫ್ಯಾಕ್ಟರಿ ಮಾಲೀಕರ  ಎದೆ ನಡುಗಿಸುತ್ತದೆ, ಇಲ್ಲಿನ ರೈತ ಕಹಳೆ  ರಾಜ್ಯ ಸರ್ಕಾರದ ವರೆಗೆ  ಕೇಳಿಸುತ್ತದೆ, ನಾವು ಒಗ್ಗಟ್ಟಾಗಿ  ಹೋರಾಟ ಮುಂದುವರೆಸಿದರೆ  ನಮ್ಮ ಬೇಡಿಕೆ  ಆದಷ್ಟು ಬೇಗ ಈಡೇರುತ್ತದೆ, ಕಾರ್ಖಾನೆ ಮಾಲೀಕರು  ಹೋರಾಟ ಗೌರವಿಸಿ  ರೈತರಿಗೆ ಯೋಗ್ಯ ಬೆಲೆಯನ್ನು  ನೀಡಲೇಬೇಕು, ಇಲ್ಲದಿದ್ದರೆ ನಾವು ರಾಜ್ಯದ್ಯಂತ ಹೋರಾಟವನ್ನು ಮುಂದುವರಿಸಬೇಕಾಗುತ್ತದೆ ಎಂದರು.
  ರೈತ ಹೋರಾಟಗಾರ   ಪ್ರೊಫೆಸರ್ ನಂಜುಂಡಸ್ವಾಮಿ ಅವರ ಸುಪುತ್ರಿ ಚುಕ್ಕಿ ನಂಜುಂಡಸ್ವಾಮಿಯವರು ಭಾಗವಹಿಸಿ ನಾಡಿನ ಎಲ್ಲ ರೈತರ  ಹಗಲು ದರೋಡೆ ನಡೆಯುತ್ತಿದೆ. ನಮಗೆ ಸಿಗಬೇಕಾದ ಸ್ಥಾನಮಾನ ಗೌರವ, ನಮ್ಮ ಶ್ರಮಕ್ಕೆ ಸಿಗಬೇಕಾದ ಬೆಲೆ  ಸಿಗುತ್ತಿಲ್ಲ. ನಮ್ಮನ್ನ ಆಳುತ್ತಿರುವಂತ ಸರ್ಕಾರ ಯಾವ ರೀತಿ ನೋಡ್ತಾ ಇದೆ, ನಾವು ಈ ಸರ್ಕಾರಗಳಿಗೆ ಮನುಷ್ಯರಾಗಿ ಕಾಣಿಸ್ತಾ ಇದೆಯೋ ಇಲ್ಲವೋ? ಪ್ರಾಣಿಗಳಾಗಿ ಕಾಣಿಸ್ತಾ ಇದಿವಾ? ಎಂದು ಪ್ರಶ್ನೆ ಮಾಡಿದರು.
ಸತ್ಯಪ್ಪ ಮಲ್ಲಾಪುರೆ ಮಾತನಾಡಿ ಮೋದಿ ಅವರಿಗೆ  ಅಂಬಾನಿ ಅದಾನಿ  ಕಾರ್ಪೊರೇಟ್ ಉದ್ಯಮಿಗಳ   ಸಾಲ ಮನ್ನಾ ಮಾಡುವುದು ಮಾತ್ರ ಕಾಣುತ್ತಿದೆ. ದೇಶದ ಬಹು ಸಂಖ್ಯಾತ ಬಡ ರೈತರು  ಬಿಸಿಲಲ್ಲಿ ಶ್ರಮ ವಹಿಸಿ ಕಷ್ಟಪಟ್ಟು  ದುಡಿದರು, ಅವರಿಗೆ ನಮ್ಮ ಬೆವರಿನ ಹನಿ ಕಾಣಿಸುತ್ತಿಲ್ಲ ಎಂದು ಹೇಳಿದರು.
ಕಾರ್ಯಾಧ್ಯಕ್ಷ ರಾಜು ಪವಾರ, ಬೆಳಗಾವಿ ಜಿಲ್ಲಾಧ್ಯಕ್ಷ ಕುಮಾರಣ್ಣ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ಪರಸಣ್ಣ ಚಿನಗುಂಡಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಮಾನಿಂಗ ತೇಲಿ, ಕೆಂಪಣ್ಣ ಅಗಡಿ, ಈರಣ್ಣ ಸಸಾಲಟ್ಟಿ, ಮನೂ ಹುಣಶ್ಯಾಳ, ಶ್ರೀಶೈಲ ಅಂಗಡಿ, ಶಿವಾನಂದ ದೊಣವಾಡ, ಸಿದ್ದಪ್ಪ ಅಂಗಡಿ, ಸತ್ಯಪ್ಪ ಮಲ್ಲಾಪುರೆ, ಕುಮಾರ್ ಮಾಲಾಡಿ, ಗುರುನಾಥ ಹುಕ್ಕೇರಿ, ನಿತಿನ್ ಹುಕ್ಕೇರಿ, ಶಿವಲಿಂಗ ಕೌಜಲಗಿ, ಪರಸಪ್ಪ ಚಿನಗೊಂಡಿ, ರಮೇಶ ಕಲಾಲ, ಶಶಿಕಾಂತ್ ನಾಯಕ್ ಹಾಗೂ ನೂರಾರು ರೈತರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST