LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

 ಪಾಲಿಕೆ ಅಧಿಕಾರಿಗಳಿಗೆ ಬೆಳಗಾವಿ ಸ್ಥಾಯಿ ಸಮಿತಿ ಕಟ್ಟುನಿಟ್ಟಿನ ಆದೇಶ

ಮಾಂಜಾ ದಾರ ನಿಷೇಧ ಹಾಗೂ ಫುಟ್‌ಪಾತ್ ಅತಿಕ್ರಮಣ ತೆರವು

 

 

ಬೆಳಗಾವಿ : ಮಹಾನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯು  ಮಂಗಳವಾರ ಜರುಗಿತು. ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೇಯಸ್ ನಾಕಾಡಿ ಅವರು ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ವಿವಿಧ ವಾರ್ಡುಗಳ ಅಭಿವೃದ್ಧಿ ವಿಷಯಗಳನ್ನು ಚರ್ಚಿಸಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮಾಂಜಾದಾರ ಪೂರೈಕೆ, ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡುವುದು ಹಾಗೂ  ಮಂಜ ದಾರದಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಪೊಲೀಸ್ ಇಲಾಖೆಯೊಂದಿಗೆ ಒಡಗೂಡಿ ಕಠಿಣ ಕ್ರಮ ಕೈಗೊಳ್ಳಲು ಸದಸ್ಯರು ಸೂಚಿಸಿದರು.ವಿಶೇಷವಾಗಿ ಪಾಲಿಕೆಯ ಆಸ್ತಿ ಹಾಗೂ ಫುಟ್ಪಾತ್ ಅತಿಕ್ರಮಣದ ಕುರಿತು ಕಠಿಣ ನಿಯಮಗಳನ್ನು ಕೈಗೊಳ್ಳುವ ಹಾಗೂ ಅತಿಕ್ರಮಣ ತೆರವಿನ ನಂತರ ಅದೇ ಸ್ಥಳಗಳಲ್ಲಿ ಮತ್ತೆ ಅತಿಕ್ರಮಣಗಳಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.ಮೇಯರ್ ಪ್ರೀತಿ ಕಾಮಕರ್, ಉಪಮೇಯರ ಹಣಮಂತ ಕೊಂಗಾಲಿ, ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಭಾತಕಂಡೆ, ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ್, ಸಮಿತಿ ಸದಸ್ಯರಾದ ಗಿರೀಶ ಧೋಂಗಡಿ, ಜಯಂತ ಜಾಧವ, ಸವಿತಾ ಪಾಟೀಲ, ಅಭಿಜಿತ್ ಜವಳಕರ, ಲಕ್ಷ್ಮೀ ಲೋಕರಿ, ಖುರ್ಷಿದ್ ಮುಲ್ಲಾ , ಪಾಲಿಕೆ ಅಭಿವೃದ್ಧಿ ಶಾಖೆ, ಉಪ ಆಯುಕ್ತರಾದ ಲಕ್ಷ್ಮೀ ನಿಪ್ಪಾಣಿಕರ್, ಆಡಳಿತ ಶಾಖೆ ಉಪ ಆಯುಕ್ತರಾದ ಉದಯ ಕುಮಾರ್ ಬಿ.ಟಿ. ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ ಬೀಡಿಕರ್, ಅಭಿಯಂತರರಾದ ಹನುಮಂತ ಕಲಾದಗಿ, ಅನೂಪ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST