ಬೆಳಗಾವಿ., ನಮ್ಮ ಕ್ಷೇತ್ರದ ಯುವ ನಿರ್ಮಾಪಕರಾದ ಮಂಜುನಾಥ ಹುಲಮನಿ ಹಾಗೂ ಪ್ರಕಾಶ ಮುಂಗರವಾಡಿ ಇವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ, ಮತ್ತು ಹಳ್ಳಿಯ ಜಾತ್ರೆಯಲ್ಲಿ ನಾಟಕ ಮಾಡಲು 2 ತಿಂಗಳು ತಾಲಿಮು ಮಾಡಿ, ನಿರ್ದೇಶಕರನ್ನು ಕರೆದು ನಾಟಕ ಮಾಡುತಿದ್ದರು, ಆದರೂ ಅದರಲ್ಲಿ ಅಲ್ಪ ಸ್ವಲ್ಪ ತಪ್ಪು ಒಪ್ಪು ಆದರೂ ನಡೆಯುತ್ತಿತ್ತು, ಆದರೆ ಚಲನಚಿತ್ರ ಹಾಗೆ ಅಲ್ಲ ಸಾಹಿತ್ಯ, ಸಂಗೀತ, ಸಂಕಲನ, ಹೊಡೆದಾಟ, ಸೆಟ್, ನೃತ್ಯ, ವಿದೇಶ ಚಿತ್ರಣ ಹೀಗೆ ಹಲವಾರು ಒಳ್ಳೆಯ ಗುಣಮಟ್ಟದಿಂದ ತಯಾರಿ ಮಾಡಬೇಕಾಗತ್ತೆ, ನಮ್ಮ ಜಿಲ್ಲೆಯ ಹೊಸ ಪ್ರತಿಭೆ ಪ್ರವೀಣ್ ಸುತಾರ ನಟನೆ, ನಿರ್ದೇಶನ ಮಾಡಿ ಒಳ್ಳೆಯ ಚಿತ್ರ ತೆಗೆದು ಇಂದು ಟ್ರೇಲರ್ ಬಿಡುಗಡೆ ಆಗಿ ಒಳ್ಳೆಯ ಟ್ರೇಲರ್ ನೋಡಿ ಸಂತೋಷವಾಗಿದೆ ಎಂದು ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ನಗರದ ಕನ್ನಡ ಭವನದಲ್ಲಿ ಮಂಗಳವಾರದಂದು ಅಂಚೆಗೆ ಹೋಗದ ಪತ್ರ ಕನ್ನಡ ಚಲನ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕ ಸಾ ಪ ಮಾಜಿ ಅಧ್ಯಕ್ಷ ಯ ರು ಪಾಟೀಲ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳು, ಗುಹೆಗಳು,ಕೋಟೆ, ಕೊಟ್ಟಲುಗಳು ತುಂಬಿರುವ ಜಿಲ್ಲೆಯನ್ನು ಬಿಟ್ಟು ಬೆಂಗಳೂರು, ಮೈಸೂರು ಬೇರೆ ಸ್ಥಳಗಳಿಗೆ ಹೋಗಿ ಚಿತ್ರೀಕರಣ ಮಾಡುವ ಜನ ಇದ್ದಾರೆ, ಆದರೆ ಈ ಒಂದು ಅಂಚೆಗೆ ಹೋಗದ ಪತ್ರ ಚಲನಚಿತ್ರ ಜಿಲ್ಲೆಯ ಕಲಾವಿದರು, ತಂತ್ರಜ್ಞರು, ನಾಯಕಿಯರು, ಜಿಲ್ಲಾ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿ ದೊಡ್ಡ ಸಾಧನೆ ಮಾಡಿದ್ದು, ಅವರಿಗೆ ನೀವೆಲ್ಲರೂ ಬೆಂಬಲಿಸಿ, ಬೆಳಗಾವಿ ಕಲಾವಿದರು ಮುಂದೆ ಬಂದು ಬೆಳೆಯಲು ಅವಕಾಶ ಕೊಡಬೇಕು ಎಂದರು.
ಕೆ ಪಿ ಸಿ ಸಿ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ ಮಾತನಾಡಿ ಯಾರಿಗೂ ಗೊತ್ತಾಗದೆ ಚಿತ್ರೀಕರಣ ಮುಗಿಸಿ ಇಂದು ನಮ್ಮ ಒಡನಾಡಿಗಳು ಒಳ್ಳೆಯ ಚಿತ್ರ ಮಾಡಿ ಟ್ರೇಲರ್ ಬಿಡುಗಡೆ ಮಾಡಲು ನಮ್ಮನ್ನು ಕರೆದದ್ದು ಸಂತಸ ನೀಡಿದ್ದು, ಚಿತ್ರ ಖಂಡಿತ ಯಶಸ್ಸು ಆಗುತ್ತದೆ. ಸ್ಥಳೀಯರಿಗೆ ಹೆಚ್ಚಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಿತ್ತೂರು ಉತ್ಸವದಲ್ಲಿ ಅವಕಾಶ ನೀಡಿದ್ದು, ಅದೇ ರೀತಿಯಲ್ಲಿ ನಮ್ಮ ಜಿಲ್ಲಾ ಕಲಾವಿದರಿಗೆ ನಾವೆಲ್ಲರೂ ಬೆಂಬಲಿಸೋಣ ಎಂದರು.
ನಟ, ನಿರ್ದೇಶಕ ಪ್ರವೀಣ್ ಸುತಾರ ಮಾತನಾಡಿ ಈ ಚಿತ್ರ ಮಾಡಲು ಬಹಳ ಶ್ರಮ ನಮ್ಮ ಇಡಿ ತಂಡ ಮಾಡಿದೆ, ನನ್ನ ಕಲೆಯನ್ನು ಗುರುತಿಸಿ ಮಂಜು ಹಾಗೂ ಪ್ರಕಾಶ ಅಣ್ಣ, ಮಾಂತಣ್ಣ, ಬರಮಣ್ಣ ಸ್ನೇಹಿತರ ಸಹಕಾರದಿಂದ ಇಂದು ಚಿತ್ರ ರೆಡಿ ಆಗಿದ್ದು, ಗ್ರಾಮೀಣ ಶೈಲಿಯ ಕಥಾ ಹಂದರ, ಒಳ್ಳೆಯ ಹಾಡುಗಳ, ವಿನೂತನ ಡೈಲಾಗ, ಹೊಂದಿರುವ ತ್ರಿಕೋಣ ಪ್ರೇಮಕತೆ ಚಿತ್ರ ಇದಾಗಿದ್ದು, ಒಳ್ಳೆಯದನ್ನು ಮಾತ್ರ ತೋರಿಸಿ, ಕೆಟ್ಟದನ್ನು ತೋರಿಸುವ ಕಾಲದಲ್ಲಿ, ನಾವು ಎಲ್ಲವನ್ನು ತೋರಿಸುವ ಕೆಲಸ ಮಾಡಲಾಗಿದೆ ಅದಕ್ಕಾಗಿ ಹೊಸಬರಿಗೆ ತಾವು ಉತ್ತಮ ಪ್ರೋತ್ಸಾಹ ನೀಡಿ ಸ್ಥಳೀಯ ಪ್ರತಿಭೆ ಬೆಳೆಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಆರ್ ಸಿ ಪಾಟೀಲ, ಬಾಳಾಸಾಹೇಬ ದೇಸಾಯಿ,ನಿರ್ಮಾಪಕರಾದ ಶ್ರೀಮತಿ ಶಕುಂತಲಾ ಹುಲಮನಿ, ಶ್ರೀಮತಿ ವೀಣಾ ಮುಂಗರವಾಡಿ,ಬಸವರಾಜ ತಿಗಡಿ, ಚೇತನ ಹಿರೇಮಠ,ಮಹಾಂತೇಶ ಹಲಗಿಮರಡಿ,ಸಿದ್ದಯ್ಯ ಧಾರವಾಡ,ಮಂಜುನಾಥ ಹುಲಮನಿ, ಪ್ರಕಾಶ ಮುಂಗರವಾಡಿ, ನಾಯಕಿಯರಾದ ಸಹನಾ ಪ್ರಕಾಶ ಹಾಗೂ ಸೌಮ್ಯ, ನಿರೂಪಣೆಯನ್ನು ಸುಮಾ ನೆರವೇರಿಸಿದರು.