Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಾಖಲೆ ಮಟ್ಟದ ವಿವಿಧ ಬಗೆಯ ಸಸಿಗಳ ಮಾರಾಟ

ತೋವಿವಿಯ ಆವರಣದಲ್ಲಿ ಸಸ್ಯ ಸಂತೆ | ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಬಾಗಲಕೋಟೆ: ಜುಲೈ ೨೭ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ನಡೆದ ಸಸ್ಯ ಸಂತೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಮೊದಲ ದಿನವೇ ದಾಖಲೆ ಆಗುವ ರೀತಿಯಲ್ಲಿ ಸಸಿಗಳ ಮಾರಾಟದ ವ್ಯವಹಾರ ನಡೆದಿದೆ.
ಸಸ್ಯ ಸಂತೆಯ ಎರಡನೇ ದಿನವಾದ ರವಿವಾರದಂದು ಬೆಳಿಗ್ಗೆಯಿಂದಲೇ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಕುಟುಂಬ ಸಮೇತರಾಗಿ ಆಗಮಿಸಿ ವಿವಿಧ ಬಗೆಯ ಅಲಂಕಾರಿಕ, ಹಣ್ಣಿನ, ಔಷಧೀಯ, ನೆರಳು ನೀಡುವ ಹಾಗೂ ಮನೆ ತೋಟಕ್ಕೆ ಸೂಕ್ತವಾದ ಸಸಿಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು. ಪರಿಸರ ಸ್ನೇಹಿ ಬದುಕಿನತ್ತ ಜನರು ಹೆಚ್ಚಿನ ಆಸಕ್ತಿ ತೋರಿದ ಹಿನ್ನಲೆಯಲ್ಲಿ ಸಸ್ಯ ಸಂತೆಯಲ್ಲಿ ದಿನವೀಡಿ ಜನಸಂದಣಿ ಕಂಡುಬಂದಿತು. ಸಸ್ಯ ಸಂತೆಯ ಮೊದಲ ದಿನವಾದ ಶನಿವಾರದಂದು ತೋಟಗಾರಿಕೆ ವಿವಿಯ ಮಳಿಗೆಯಿಂದಲೇ ೫ ಲಕ್ಷ ರೂ.ಗಳ ಮೇಲ್ಪಟ್ಟು ಮಾರಾಟದ ವ್ಯವಹಾರ ನಡೆದಿದೆ.
ಅಲಂಕಾರಿಕ, ಹೂವಿನ ಗಿಡಗಳ ಖರೀದಿಗೆ ಮುಗಿಬಿದ್ದ ಜನ
ಸಸ್ಯ ಸಂತೆಯಲ್ಲಿ ಮಹಿಳೆಯರು ಅಲಂಕಾರಿಕ ಹಾಗೂ ಹೂವಿನ ಸಸಿಗಳ ಖರೀದಿಗೆ ಮುಗಿಬಿದ್ದಿದ್ದರು. ಗುಲಾಬಿ, ಮಲ್ಲಿಗೆ, ದಾಸವಾಳ ಸೇರಿದಂತೆ ವಿವಿಧ ಬಗೆಯ ಹೂವಿನ ಸಸಿಗಳು ಹಾಗೂ ಮನೆ ಮತ್ತು ಉದ್ಯಾನಗಳ ಅಲಂಕಾರಕ್ಕೆ ಸೂಕ್ತವಾದ ಅಲಂಕಾರಿಕ ಸಸಿಗಳನ್ನು ಆಸಕ್ತಿಯಿಂದ ಖರೀದಿಸಿದರು. ಇದರ ಜೊತೆಗೆ ಹಣ್ಣಿನ, ಔಷಧೀಯ, ಸುಗಂದದ್ರವ್ಯ, ನಡೆತೋಪು ಗಿಡಗಳು ಹಾಗೂ ನರ್ಸರಿ ಗಿಡಗಳು, ವಿವಿಧ ಬಗೆಯ ಹಣ್ಣುಗಳ ಗಿಡಗಳು. ಅಲಂಕಾರಿಕ ಪಾಟ್‌ಗಳು ಜೈವಿಕ, ರಾಸಾಯನಿಕ ಗೊಬ್ಬರ ಖರೀದಿಗೆ ಉತ್ತಮ ಬೇಡಿಕೆ ಕಂಡುಬಂದಿತು.  
ತೋಟಗಾರಿಕೆ ತಜ್ಞರಿಂದ ಮಾಹಿತಿ
ಸಸ್ಯಗಳ ನಿರ್ವಹಣೆ, ನೀರಾವರಿ, ಗೊಬ್ಬರ ಬಳಕೆ, ಹಾಗೂ ಆರೈಕೆ ಕುರಿತು ತೋಟಗಾರಿಕೆ ತಜ್ಞರಾದ ಡಾ.ಆನಂದ ನಂಜಪ್ಪನವರ, ಡಾ.ವಸಂತ ಗಾಣಗೇರ ಹಾಗೂ ಇತರೆ ಸಿಬ್ಬಂದಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಪರಿಸರ ಸಂರಕ್ಷಣೆ ಮತ್ತು ಮನೆಮನೆಗಳಲ್ಲಿ ಹಸಿರು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಸಸ್ಯ ಸಂತೆಯಲ್ಲಿ ವಿದ್ಯಾರ್ಥಿಗಳು, ರೈತರು, ಮಹಿಳೆಯರು ಹಾಗೂ ಪ್ರಕೃತಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಸ್ಯ ಸಂತೆಯಲ್ಲಿ ಒಟ್ಟು ೭೦ ಮಳಿಗೆಗಳನ್ನು ಹಾಕಲಾಗಿದ್ದು, ಅದರಲ್ಲಿ ೧೦ ಮಹಿಳೆ ತೋವಿವಿಯಗಳದ್ದಾದರೆ, ಇನ್ನು ಉಳಿದ ೬೦ ಮಳಿಗೆಗಳು ಖಾಸಗಿ ಮಳಿಗೆಗಳಿದ್ದವು. ಇದರ ಜೊತೆಗೆ ೫ ಎಫ್‌ಪಿಓಗಳು ಸಹ ಇದ್ದವು.
ಸಸ್ಯ ಸಂತೆಗೆ ಅಮೇರಿಕ ಮೂಲದ ಜೈಸನ್ ರೈಸ್ ಭೇಟಿ
ಅಮೇರಿಕಾ ಮೂಲಕ ಬಾಗಲಕೋಟೆಯ ಅಳಿಯ ಜೈಸನ್ ರೈಸ್ ತಮ್ಮ ಪತ್ನಿ ಭಾಗ್ಯಶ್ರೀ ಅವರೊಂದಿಗೆ ಸಸ್ಯ ಸಂತೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಜೈಸನ್ ಅವರು ಬಾಗಲಕೋಟೆಯ ಖ್ಯಾತ ವೈದ್ಯರಾದ ಡಾ.ಶ್ರೀಕಾಂತ ತೇಲಸಂಗರ ಅಳಿಯನಾಗಿದ್ದಾನೆ. ಸಸ್ಯ ಸಂತೆಯಲ್ಲಿ ಮಾರಾಟಕ್ಕಿಡಲಾದ ಅಲಂಕಾರರಿಕ, ಹೂವಿನ, ಹಣ್ಣಿನ ಮತ್ತು ಔಷಧೀಯ ಸಸಿಗಳನ್ನು ಆಸಕ್ತಿಯಿಂದ ವೀಕ್ಷಿಸಿ ಸಸ್ಯಗಳ ವೈವಿದ್ಯತೆ ಮತ್ತು ಅಚ್ಚಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂತೆಯಲ್ಲಿ ಥೈವಾನ್ ಹಾಗೂ ಥೈಲ್ಯಾಂಡ್ ದೇಶದ ಹಲಸಿನ ತಳಿಯನ್ನು ಸಹ ಪ್ರದರ್ಶನ ಹಾಗೂ ಮಾರಟಕ್ಕೆ ಇಡಲಾಗಿತ್ತು. ಥೈವಾನ ತಳಿ ಎಡರೂವರೆ ವರ್ಷದಲ್ಲಿ ಫಲ ನೀಡುತ್ತಿದ್ದು, ವರ್ಷಕೆ ೩ ಬಾರಿ ಪೀಕ್ ತೆಗೆಯಬಹುದಾಗಿದೆ. ಈಗಾಗಲೇ ಜಿಲ್ಲೆಯ ವಡಗೇರಿ, ಹುನಗುಂದ, ಕೂಡಲಸಂಗಮ, ಶಿರೂರ, ಹೊನ್ನಾಕಟ್ಟಿ, ಬಾದಾಮಿ, ತುಂಬರಮಟ್ಟಿಯಲ್ಲಿ ಬೆಳೆಯಲು ಪ್ರಾರಂಭಿಸಿದ್ದಾರೆ ಎಂದು ಅಮರೇಶ ಪೂರದ ಹೆಳುತ್ತಾರೆ. ಅದೇ ರೀತಿ ಥೈಲ್ಯಾಂಡನ ನಿನ್ನಿತಾಯಿ ಹಲಸಿನ ತಳಿ ಒಂದೂವರೆ ವರ್ಷದಲ್ಲಿ ಫಲ ನೀಡುತ್ತಿದ್ದು, ವರ್ಷದಲ್ಲಿ ಇದು ಕೂಡಾ ೩ ಫಸಲನ್ನು ತೆಗೆಯಬಹುದಾಗಿದೆ. ಇದರಿಂದ ಒಂದು ಫಸಲಿಗೆ ೩ ರಿಂದ ೪ ಲಕ್ಷ ರೂ.ಗಳಷ್ಟಾಗುತ್ತದೆ. ಈ ಹಣ್ಣಿನ ಬಗ್ಗೆ ಜನರು ಮಾಹಿತಿ ಪಡೆದುಕೊಂಡರು. 
ಗಮನ ಸೆಳೆದ ತೆಂಗಿನ ವಿಶೇಷ ತಳಿ : ತೋವಿವಿಯ ಹಮ್ಮಿಕೊಂಡ ಸಸ್ಯ ಸಂತೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ಮುಕುಂದ ಬೋಜನ್ನವರ ಪ್ರದರ್ಶಿಸಿದ ಅಂಡಮಾನ್ ಎಂಬ ತೆಂಗಿನ ತಳಿಯು ಎಲ್ಲರ ಗಮನ ಸೆಳೆಯಿತು. ನೋಡಲು ದೊಡ್ಡ ಗ್ರಾತ್ರದಲ್ಲಿದ್ದು, ಮಾರಾಟಕ್ಕೆ ತಂದ ತಳಿಯ ಗಿಡಗಳನ್ನು ಜನರು ಖರಿದೀಸಿದರು. ಈ ತಳಿ ನೆಟ್ಟ ೫ ವರ್ಷದಲ್ಲಿ ಫಲ ಕೊಡುತ್ತಿದ್ದು, ಒಂದು ಗಿಡಕ್ಕೆ ೬೦ ರಿಂದ ೭೦ ಟೆಂಗಿನ ಕಾಯಿಗಳನ್ನು ಬಿಡುತ್ತದೆ. ಪರಿಣಿತ ತೆಂದು ಬೆಳೆಗಾರ ಮುಕುಂದ ಅವರು ಈ ತಳಿಯ ಬೆಳೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು ತೆಂಗು ತಳಿ ಸಂರಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವದ ಹಂಗು ತೊರೆದು ಸಮಾಜ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಸೇವೆ ಶ್ಲಾಘನೀಯ - ಶಾಸಕ ಜಗದೀಶ ಗುಡಗುಂಟಿತೆಲಂಗಾಣ ರಾಜ್ಯ ಸಲ‌ಹೆಗಾರ,   ಎಐಸಿಸಿ ಉಸ್ತುವಾರಿ   ಹರಕರ್ ವೇಣುಗೋಪಾಲ್ ರಾವ್     ಕಾಂಗ್ರೇಸ್ ಕಚೇರಿಗೆ ಭೇಟಿ .ದಾಖಲೆ ಮಟ್ಟದ ವಿವಿಧ ಬಗೆಯ ಸಸಿಗಳ ಮಾರಾಟ ಸೈನಿಕರ  ಕುಟುಂಬಗಳಿಗೆ ನಿರಂತರ ಗೌರವ ನೀಡಿ: ಕವಿತಾ ಮಿಶ್ರಾಶ್ರೀ ಸಾಯಿ ಕಾಲೇಜಿನ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳ ಸೇವೆ ಶ್ಲಾಘನೀಯ.:  ಶ್ರೀಮತಿ ಯಲ್ಲಮ್ಮ ಕೆ ವಚನ ಸಾಹಿತ್ಯದ ಉಳಿವಿಗೆ ಫ.ಗು. ಹಳಕಟ್ಟಿಯವರ ಕೊಡುಗೆ ಅನನ್ಯ: ಬಿ.ಸಿ. ಬಿದರಿವಚನ ಸಾಹಿತ್ಯದ ಉಳಿವಿಗೆ ಫ.ಗು. ಹಳಕಟ್ಟಿಯವರ ಕೊಡುಗೆ ಅನನ್ಯ: ಬಿ.ಸಿ. ಬಿದರಿಗೋಶಾಲೆಯ ಸ್ವಚ್ಛತೆ ಕೇವಲ ಸೇವೆಯಲ್ಲ, ನಮ್ಮ ಧರ್ಮದ ಜವಾಬ್ದಾರಿ : ರಾಘು ಕಪರಟ್ಟಿಶ್ರೀ ಖಾಸ್ಗತಮಠವು ಲಕ್ಷಾಂತರ ಭಕ್ತರ ಆರಾದ್ಯಮಠವಾಗಿದೆ-ಅಸ್ಕಿಪತ್ರಿಕೆಗಳು ನಿರ್ಭೀತ,ಸತ್ಯದ ಅರಿವಿನೊಂದಿಗೆ ಬೆಳೆಯಬೇಕು - ಶಾಸಕ ಪಾಟೀಲ್