ಜಮಖಂಡಿ;ಸರ್ಕಾರಿ ಸೌಮ್ಯದ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವನ್ನು ಖಾಸಗಿ ಕರಣ ಗೊಳಿಸುವ ಹುನ್ನಾರವನ್ನು ಖಂಡಿಸಿ ರೈತಸಂಘ, ಕೆಇಬಿ ಗುತ್ತಿಗೆದಾರರ ಸಂಘ, ನಿವೃತ್ತ ನೌಕರರ ಸಂಘ,ಹಾಗೂ ಸಿಬ್ಬಂದಿಗಳು ಗುರುವಾರ ಕಇಬಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಉಚಿತ ವಿದ್ಯುತ್ ಯೋಜನೆಗಳ ತಡೆ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಡಿತ ಗೊಳಿಸಿ ರೈತರು ಹಾಗೂ ಸಾರ್ವಜನಿಕರಿಗೆ ಹೊರೆ ಉಂಟು ಮಾಡುವ ಉದ್ದೇಶ ದಿಂದ ,ಟಾಟಾ ಪವರಗೆ ಕಂಪನಿಗೆ ವಹಿಸಲು ಹುನ್ನಾರ ನಡೆದಿರುವದನ್ನು ವಿಫಲ ಗೊಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಸಲ್ಲಿಸಲಾಯಿತು. ಕೆಇಆರ್‌ಸಿಗೆ ಆಕ್ಷೆಪಣೆಗಳನ್ನು ಸಲ್ಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಸರ್ಕಾರಿ ಕಂಪನಿಗಳಿದ್ದರೂ ಟಾಟಾ ಪವರ ಪರವಾಗಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆ ರದ್ದು ಗೊಳಿಸಲು ಸಂಚು ನಡೆದಿದ್ದು ಎಲ್ಲ ರೈತರು 23.6.26 ರ ಒಳಗಾಗಿ ಆಕ್ಷೆಪಣೆಗಳನ್ನು ಸಲ್ಲಿಸುವಂತೆ ಮನವಿ ಸಲ್ಲಿಸಲಾಯಿತು. ಕೆಇಬಿಯ ಕಾರ್ಯಪಾಲಕ ಅಭಿಯಂತರ ಎಂ.ಎನ್ ಚನಗೊಂಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಿ.ಕೆ.ಹಿಪ್ಪರಗಿ, ಕಾರ್ಯಪಾಲಕ ಅಭಿಯಂತರ ವಿಶಾಲ ದರೆಪ್ಪಗೋಳ, ಎಸ್.ಜಿ.ಆಳಬಾಳ ಪ್ರಭು ದೇಸಾಯಿ, ಕಾರ್ಮಿಕ ಸಂಘದ ನಾಯಕ ಎಸ್.ಎಸ್.ಗಡ್ಡಿ, ಮಳಿಯಪ್ಪ ಸೊನ್ನದ, ಚಂದ್ರಗುಒ್ತ ಬೆಳಗಲಿ, ರೈತ ಸಂಘದ ಶ್ರೀಶೈಲ ಭೂಮಾರ, ಸಿದ್ಧನಗೌಡ ಪಾಟೀಲ, ರಾಜು ಆಲಗೂರ, ಬಾಹುಬಲಿ ನ್ಯಾಮಗೌಡ, ಧರೆಪ್ಪ ದಾನಗೌಡ, ಸುರೇಶ ಹಂಚಿನಾಳ, ಶ್ರೀಶೈಲ ಮೈಗೂರ ಸಿದ್ದರಾಯ ಚವರಿ ಮುಂತಾದವರಿದ್ದರು.
