Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಸ್ವತಂತ್ರ ಪೂರ್ವದಲ್ಲಿ ಮತ್ತು ನಂತರದ  ಕನ್ನಡಿಗರು ಗುಲಾಮಗಿರಿಯ ರೀತಿಯಲ್ಲಿ ಜೀವನ ನಡೆಸುತ್ತಿದ್ದರು : ಸಿಜಿ ಹಂಪಣ್ಣ 

 ಬಳ್ಳಾರಿ ನವಂಬರ್ 15:: ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರು ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಬಳ್ಳಾರಿ ಮತ್ತು ಮಂಗಳೂರು ಪ್ರದೇಶಗಳನ್ನು ಮದ್ರಾಸ್ ಪ್ರಾಂತಕ್ಕೆ ಸೇರಿಸಿ ತಮ್ಮ ವರ್ಷದಲ್ಲಿ ಇಟ್ಟುಕೊಂಡಿದ್ದರು ಇದರಿಂದ ಬಳ್ಳಾರಿ ಕನ್ನಡಿಗರು ಬ್ರಿಟಿಷರ ಗುಲಾಮಗಿರಿ ರೀತಿಯಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ಏರ್ಪಟ್ಟಿತ್ತು ಎಂದು ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರಾದ ಸಿಜಿ ಹಂಪಣ್ಣ ಹೇಳಿದರು.
 ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ರಾಘವ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದ ಅವರು, 1947ರಲ್ಲಿ ಭಾರತ ಬ್ರಿಟಿಷರಿಂದ ಮುಕ್ತವಾಗಿ ದೇಶಕ್ಕೆ ಸ್ವತಂತ್ರ ಲಭಿಸಿತು ನಂತರ ಆಂಧ್ರಪ್ರದೇಶದ ಪಟ್ಟಿ ಶ್ರೀರಾಮುಲು ವಿಶಾಲ ಅಂದ್ರೆ ರಚನೆಗೆ ಒತ್ತಾಯಿಸಿದ್ದರಿಂದ ಭಾಷಾವಾರು ಪ್ರಾಂತಕ್ಕೆ ಒತ್ತುಕೊಟ್ಟು ಆಂಧ್ರಪ್ರದೇಶ ಪ್ರತ್ಯೇಕ ರಾಜ್ಯವನ್ನಾಗಿ ರಚಿಸಬೇಕೆಂದು ಉಪವಾಸ ಸತ್ಯಾಗ್ರಹ ಮಾಡಿ ಮೃತಪಟ್ಟಿದ್ದರು ಇದರಿಂದ ಆಂಧ್ರಪ್ರದೇಶದಲ್ಲಿ ತೀವ್ರವಾದ ಹೋರಾಟ ಆರಂಭಗೊಂಡು ಪ್ರತ್ಯೇಕ ರಾಜ್ಯ ಆಂಧ್ರಪ್ರದೇಶವೆಂದು ಘೋಷಿಸಲಾಯಿತು.
 ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಪ್ರತ್ಯೇಕ ಭಾಷಾವಾರು ಕರ್ನಾಟಕ ರಾಜ್ಯಕ್ಕಾಗಿ ಹೋರಾಟಗಳು ಆರಂಭಗೊಂಡವು. ಈ ಹೋರಾಟದಲ್ಲಿ ಕೋಣನ ಚನ್ನಬಸಪ್ಪ ಟಿ ಹೆಚ್ ಎಂ ಸದಾಶಿವಯ್ಯ ರಾಹು ಬಹದ್ದೂರ್ ವೈ ಮಹಾಬಲೇಶ್ವರಪ್ಪ ಟೇಕೂರು ಸುಬ್ರಹ್ಮಣ್ಯ ಬಾಚಿಗೊಂಡನಹಳ್ಳಿ ಚನ್ನಬಸವನಗೌಡ ಅಲ್ಲಂ ಕರಿಬಸಪ್ಪ ಅಲ್ಲಂ ಸುಮಂಗಳಮ್ಮ ಯಜಮಾನ ಶಾಂತರಪ್ಪ ಪಟ್ಟಣ ಮಹಾದೇವಪ್ಪ ಪಟ್ಟಣ ವೀರಭದ್ರಪ್ಪ ಬಿ ಎಂ ರೇವಣಸಿದ್ದಯ್ಯ ಬಿಎಂ ಮರುಳು ಸಿದ್ದಯ್ಯ ಸೇರಿದಂತೆ ನೂರಾರು ಜನ ಮುಖಂಡರು ಮುಂಚೂಣಿಯಲ್ಲಿದ್ದು ಹೋರಾಟವನ್ನು ನಡೆಸಿದ ಫಲವಾಗಿ 1956 ರಲ್ಲಿ ಕರ್ನಾಟಕ ರಾಜ್ಯ ಎಂದು ಘೋಷಿಸಲ್ಪಟ್ಟಿತು. ನಂತರ ಎರಡನೇ ಏಕೀಕರಣ ಸಮ್ಮೇಳನ ನಡೆದು ಬಳ್ಳಾರಿ ಜಿಲ್ಲೆಯ ಕನ್ನಡಿಗರು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಆರಂಭಿಸಿದ್ದರಿಂದ ಆಂಧ್ರದ ಪಾಲಾಗುತ್ತಿದ್ದ ಹೊಸಪೇಟೆ ಸಿರುಗುಪ್ಪ ತಾಲೂಕುಗಳನ್ನು ಆಂಧ್ರಕ್ಕೆ ಸೇರಿಸುವ ಹುನ್ನಾರವನ್ನು ತಡೆಯಲಾಯಿತು ಹಲೋ, ಮಹಾನೀಯರ ಚಳುವಳಿಯಿಂದಾಗಿ ಬಳ್ಳಾರಿ ಕರ್ನಾಟಕದಲ್ಲಿ ಸೇರಿಸಬೇಕೆಂದು ಕೇಳ್ಕರ್ ಸಮಿತಿ ವರದಿಯನ್ನು ನೀಡಿತು.
 ಆದರೂ ಸಹ ಕೆಲವೊಂದು ಪಟ್ಟ ಭದ್ರ ಹಿತಾಸಕ್ತರು ಅಂದಿನ ಪ್ರಧಾನಿ ನೆಹರು ಅವರ ಮೇಲೆ ಒತ್ತಡ ಹೇರಿ ಬಳ್ಳಾರಿ ಜಿಲ್ಲೆಯಲ್ಲಿ ಇದ್ದ ಆದವಾಣಿ ಆಲೂರು ರಾಯದುರ್ಗ ತಾಲೂಕುಗಳನ್ನು ಆಂಧ್ರಕ್ಕೆ ಸೇರಿಸಲು ಸಂಸತ್ತಿನಲ್ಲಿ ವಿಷಯ ಮಂಡಿಸಿ ವಿದೇಕವನ್ನು ಅಂಗೀಕರಿಸಿದ್ದರಿಂದ ಈ ಮೂರು ಕನ್ನಡ ತಾಲೂಕುಗಳು ಆಂಧ್ರದ ಪಾಲಾಗಿವೆ, ಇದರಿಂದ ಕೆರಳಿ, ಕೆಂಡ  ಮಂಡಲರಾದ ಕನ್ನಡಿಗರು ಹೋರಾಟವನ್ನು ಇನ್ನೆಷ್ಟು ತೀರಗೊಳಿಸಿದರು. ಇದರ ಪ್ರತಿಫಲವಾಗಿ ಬಳ್ಳಾರಿ ಆಂಧ್ರಕ್ಕೆ ಸೇರಿಬೇಕು ಅಥವಾ ಕರ್ನಾಟಕಕ್ಕೆ ಸೇರಬೇಕು ಎಂಬ ಶೀತಲ ಸಮರದಲ್ಲಿ ತೆಲುಗು ಕುಟುಂಬ ಮತ್ತು ಕನ್ನಡ ಕುಟುಂಬದ ಮಧ್ಯೆ ಚುನಾವಣೆ ನಡೆದು ಹೊರಗಿನ ದೋಣಿ ಚನ್ನಬಸವನಗೌಡ ಅವರು ಸುಮಾರು ಏಳು ಸಾವಿರ ಮತಗಳಿಂದ ಮಂಗಳೂರು ಗಂಗಪ್ಪನವರನ್ನು ಸೋಲಿಸಿ ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸಲು ಕಾರಣೀ ಭೂತರಾದರೂ  ಎಂದರು.
 1972ರ ನಂತರ ಕರ್ನಾಟಕ ಏಕೀಕರಣಗೊಂಡು ರಾಜ್ಯದ ಕನ್ನಡಿಗರು ಸ್ವತಂತ್ರವಾಗಿ ಕರ್ನಾಟಕ ರಾಜ್ಯವನ್ನು ನಿರ್ಮಿಸಿದರು. ಈ ಏಕೀಕರಣಕ್ಕಾಗಿ ಬಳ್ಳಾರಿ ಜಿಲ್ಲೆಯ ಟಿಗೂರು ಸುಬ್ರಮಣ್ಯ ಅಬ್ದುಲ್ ರಜಾಕ್ ಮತ್ತಿಹಳ್ಳಿ ರಾಘವೇಂದ್ರರಾವ್ ಅಲ್ಲಮ್ ಕರಿಬಸಪ್ಪ ಮತ್ತು ಇತರರು ತೀವ್ರವಾದ ಹೋರಾಟವನ್ನು ನಡೆಸಿದ್ದರು ಎಂದರು.
 ಇದಕ್ಕೂ ಮುಂಚೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ ಇಂದು ಶತಮಾನವನ್ನು ದಾಟಿ ಮುನ್ನಡೆಯುತ್ತಿದೆ ಇಂದು ಬಳ್ಳಾರಿ ಜಿಲ್ಲೆಯ 23ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಇಂಥ ಕಾರ್ಯಕ್ರಮಗಳು ಕನ್ನಡಿಗರ ಆಸ್ಮಿತೆಯ ಹಬ್ಬವಾಗಿದೆ ಈ ಜಿಲ್ಲಾ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಭಾರಿಯಾಗಿದ್ದೇನೆ ಎಂದರು.
 ಪ್ರೇಕ್ಷಕರಿಲ್ಲದೆ ಬಣಗುಟ್ಟಿದ ಕವಿಗೋಷ್ಠಿ ವಿಚಾರಗೋಷ್ಠಿ    ವೇದಿಕೆಯ ಉದ್ಘಾಟನಾ  ಕಾರ್ಯಕ್ರಮ ನಂತರ ಆರಂಭಗೊಂಡ ವಿಚಾರಗೋಷ್ಠಿ ಮತ್ತು ಕವಿಘೋಷ್ಠಿಗಳಲ್ಲಿ ಪ್ರೇಕ್ಷಕರಿಲ್ಲದೆ ಖಾಲಿ ಕುರ್ಚಿಗಳು ಬಣಗುಟ್ಟಿದವು, ರಾಘವ ಕಲಮಂದಿರದಲ್ಲಿರುವ ಕೇವಲ ಐದು ಆರುನೂರು ಕುರ್ಚಿಗಳಲ್ಲಿ ಕೆಲವೇ ಕೆಲವು ಜನ ಘೋಷ್ಠಿಯಲ್ಲಿ ಹೆಸರು ಇರುವವರು ಮಾತ್ರ ಮುಂದಿನ ಸಾಲಿನ ಕುರ್ಚಿಗಳಲ್ಲಿ ಕುಳಿತಿದ್ದು ಕಂಡುಬಂದಿತು. ಒಟ್ಟಿನಲ್ಲಿ ಸಮ್ಮೇಳನ ನೀರಸ ವಾಗಿದ್ದರು ತಾಯಿ ಭುವನೇಶ್ವರಿ ಭಾವಚಿತ್ರ ಮತ್ತು ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಅತ್ಯಂತ ಯಶಸ್ವಿಯಾಗಿ ಜರುಗಿತು.
 ಕನ್ನಡ ಕಾರ್ಯಕ್ರಮದಲ್ಲಿ ಸಂಸ್ಕೃತ ಪ್ರಾರ್ಥನೆ  ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆಯನ್ನು ಹಾಡಿದ ಲಕ್ಷ್ಮಿ ಪವನ್ ಕುಮಾರ್ ಕನ್ನಡ ಸಾಹಿತ್ಯ ಪರಿಷತ್ತಿನ 23ನೇ ಸಮ್ಮೇಳನ ಕಾರ್ಯಕ್ರಮ ಎನ್ನುವುದನ್ನು ಮರೆತು ಸಂಸ್ಕೃತ ಶ್ಲೋಕವನ್ನು  ಹಾಡಿ   ಕನ್ನಡಕ್ಕೆ ಅಪಮಾನ ಗೈದರು ಎಂದು ಪ್ರೇಕ್ಷಕರು ಬೇಸರ ಪಟ್ಟುಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
 ಬೆರಳೆಣಿಕೆ ಸಂಖ್ಯೆಯಲ್ಲಿ ಪುಸ್ತಕ ಮಳಿಗೆ  ಸಮ್ಮೇಳನದಲ್ಲಿ ಕೆಲವೇ ಕೆಲವು ಬೆರಳಿಕೆ ಎಷ್ಟು ಪುಸ್ತಕ ಮಳಿಗೆಗಳು ಇದ್ದು ಅಲಿಯು ಸಹ ಯಾವುದೇ ಖರೀದಿದ್ದಾರರ ಸಂಖ್ಯೆ ಅತ್ಯಂತ ಕಡಿಮೆ ಇತ್ತು.   ಈ ಸಮ್ಮೇಳನಕ್ಕೆ ಮುಖ್ಯವಾಗಿ ಪ್ರೇಕ್ಷಕರ ಕೊರತೆ ಎದುರಾಗಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟಕರು ಸಮ್ಮೇಳನವನ್ನು ಸಂಘಟನೆಗೊಳಿಸುವಲ್ಲಿ ವಿಫಲರಾಗಿದ್ದಾರೆ  ಎಂಬ  ಕನ್ನಡ ಆಸಕ್ತರಾ  ಗೊಣಗಾಟ  ಕೇಳಿ ಬರುತ್ತಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಂಡಾರದಲ್ಲಿ ಮಿಂದೆದ್ದ ಲಕ್ಷ್ಮೀದೇವಿ ಭಕ್ತರುರಜಪೂತ್ ಕುಟುಂಬಗಳ ಕೊಡುಗೆ ಮಾದರಿ: ಯತ್ನಾಳ ಮೆಚ್ಚುಗೆ ರಾಣಾ ಪ್ರತಾಪ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ-ಶಾಸಕ ಪಾಟೀಲರಾಣಾಪ್ರತಾಪ್ ಅವರ ದೇಶಪ್ರೇಮ, ಸ್ವಾಭಿಮಾನ ಆದರ್ಶವಾಗಲಿ-ಡಾ.ಅಜಯಸಿಂಗ್ಕೌಶಲ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ಶಹನಾಜ ಗಡೆಕಾಯಿ ಆಯ್ಕೆ,ಮಹಾರಾಣಾ ಪ್ರತಾಪ್ ತ್ಯಾಗ, ಶೌರ್ಯ, ರಾಷ್ಟ್ರಪ್ರೇಮದ ಪ್ರತೀಕ-ಠಾಕೂರ್*ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನರೇಗಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ*ನಗರದಲ್ಲಿ ಸಚಿವ ಮಧು ಬಂಗಾರಪ್ಪಗೆ ಸನ್ಮಾನಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು: ಎಸ್.ಸಿ. ಕೋಟಾರಗಸ್ತಿಸಾಂಸ್ಕೃತಿಕ ಲೋಕ ಸಂಕುಚಿತವಾಗುತ್ತಿರುವುದು ವಿಷಾದನೀಯ: ಡಾ. ಗುರುಪಾದ ಮರಿಗುದ್ದಿ