Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು: ಎಸ್.ಸಿ. ಕೋಟಾರಗಸ್ತಿ

ಬೆಳಗಾವಿ: ಕೇವಲ ಒಂದು ದಿನದಂದು ಕರ್ನಾಟಕ ರಾಜ್ಯೋತ್ಸವ ಆಚರಿಸಿದರೆ ಸಾಲದು. ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಇತಿಹಾಸದ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಸದಾ ಉಳಿಸಿ ಬೆಳೆಸಬೇಕು ಎಂದು ನಿವೃತ್ತ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಹಾಗೂ ಸಾಹಿತಿ ಎಸ್.ಸಿ. ಕೋಟಾರಗಸ್ತಿ ಹೇಳಿದರು.
ನಗರದ ತಿಲಕವಾಡಿಯ ಮಂಡೊಳ್ಳಿ ರಸ್ತೆ ಶಾಂತಿನಗರದಲ್ಲಿರುವ ಆರ್ಷ ವಿದ್ಯಾ ಆಶ್ರಮದಲ್ಲಿ ಶನಿವಾರ ಕ್ರಾಂತಿ ಮಹಿಳಾ ಮಂಡಳ ಹಾಗೂ ಹಿಂದ್ವಾಡಿಯ ಉಮಾ ಸಂಗೀತ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ "ಕರ್ನಾಟಕ ರಾಜ್ಯೋತ್ಸವ" ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಪ್ರಥಮವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮತ್ತು ಆಸಕ್ತಿ ಮೂಡಿಸಬೇಕು. ಇದರೊಂದಿಗೆ ಇತರ ಭಾಷೆಗಳನ್ನು ಕಲಿಯುವುದರ ಜೊತೆಗೆ ಅವುಗಳನ್ನು ಪ್ರೀತಿಸುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಾಂತಿ ಮಹಿಳಾ ಮಂಡಳವು ಆರ್ಷ ವಿದ್ಯಾ ಆಶ್ರಮದ ಮಕ್ಕಳೊಂದಿಗೆ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸುತ್ತಿರುವುದು ಹಾಗೂ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಮತ್ತು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆರ್ಷ ವಿದ್ಯಾ ಆಶ್ರಮದ ಸ್ವಾಮೀಜಿ ಶ್ರೀ ಚಿತ್ ಪ್ರಕಾಶ ಆನಂದ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆ ಸಿಹಿ ಜೇನಿನಂತಿದ್ದು, ಅತ್ಯಂತ ಸರಳ ಹಾಗೂ ಸುಂದರ ಭಾಷೆಯಾಗಿದೆ. ನಮ್ಮ ದೇಹದ ಪ್ರತಿಯೊಂದು ಅಂಗವೂ ಹೇಗೆ ಮಹತ್ವ ಹೊಂದಿದೆಯೋ, ಅದೇ ರೀತಿ ಭಾರತಾಂಬೆಯ ಒಕ್ಕೂಟದಲ್ಲಿ ಪ್ರತಿಯೊಂದು ರಾಜ್ಯದ ಭಾಷೆಯೂ ತನ್ನದೇ ಆದ ಮಹತ್ವ ಹೊಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ನಾಲ್ಕು ಭಾಷೆಗಳನ್ನಾದರೂ ಮಾತನಾಡಲು ಕಲಿಯಬೇಕು ಎಂದು ಹೇಳಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು. ಉಳಿದ ಮಕ್ಕಳಿಗೂ ಮಕ್ಕಳ ದಿನಾಚರಣೆಯ ನಿಮಿತ್ತ ಉಡುಗೊರೆಗಳನ್ನು ನೀಡಲಾಯಿತು.
ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷೆ ಮಂಗಲಾ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಎಮ್ಮಿ, ರತ್ನಶ್ರೀ ಗುಡೆರ್ ಹಾಗೂ ಮಮತಾ ಆಂಟಿನ್ ಪ್ರಾರ್ಥನಾ ಗೀತೆ ಹಾಡಿದರು. ದೀಪ್ತಿ ಕಾಗವಾಡ ಅತಿಥಿಗಳನ್ನು ಪರಿಚಯಿಸಿದರು. ಪದ್ಮಾ ಚೌಗಲೆ ಹಾಗೂ ರೂಪಾಲಿ ಕಳ್ಳಿಮನಿ ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಸಪ್ನಾ ಚೌಗಲೆ ವಂದಿಸಿದರು.
ಆರ್ಷ ವಿದ್ಯಾ ಆಶ್ರಮದ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಆಶ್ರಮದ ಮಕ್ಕಳು ಹಾಗೂ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಂಡಾರದಲ್ಲಿ ಮಿಂದೆದ್ದ ಲಕ್ಷ್ಮೀದೇವಿ ಭಕ್ತರುರಜಪೂತ್ ಕುಟುಂಬಗಳ ಕೊಡುಗೆ ಮಾದರಿ: ಯತ್ನಾಳ ಮೆಚ್ಚುಗೆ ರಾಣಾ ಪ್ರತಾಪ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ-ಶಾಸಕ ಪಾಟೀಲರಾಣಾಪ್ರತಾಪ್ ಅವರ ದೇಶಪ್ರೇಮ, ಸ್ವಾಭಿಮಾನ ಆದರ್ಶವಾಗಲಿ-ಡಾ.ಅಜಯಸಿಂಗ್ಕೌಶಲ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ಶಹನಾಜ ಗಡೆಕಾಯಿ ಆಯ್ಕೆ,ಮಹಾರಾಣಾ ಪ್ರತಾಪ್ ತ್ಯಾಗ, ಶೌರ್ಯ, ರಾಷ್ಟ್ರಪ್ರೇಮದ ಪ್ರತೀಕ-ಠಾಕೂರ್*ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನರೇಗಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ*ನಗರದಲ್ಲಿ ಸಚಿವ ಮಧು ಬಂಗಾರಪ್ಪಗೆ ಸನ್ಮಾನಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು: ಎಸ್.ಸಿ. ಕೋಟಾರಗಸ್ತಿಸಾಂಸ್ಕೃತಿಕ ಲೋಕ ಸಂಕುಚಿತವಾಗುತ್ತಿರುವುದು ವಿಷಾದನೀಯ: ಡಾ. ಗುರುಪಾದ ಮರಿಗುದ್ದಿ