Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ರಾಣಾ ಪ್ರತಾಪ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ-ಶಾಸಕ ಪಾಟೀಲ

ತಾಳಿಕೋಟೆ, ದೇಶಕ್ಕಾಗಿ ತಮ್ಮದೇ ಆದ ಅಪಾರ ಕೊಡುಗೆ ನೀಡಿದ ಮಹನೀಯರನ್ನು ಜಾತಿ, ಧರ್ಮದ ಬೇಧವಿಲ್ಲದೆ ಸ್ಮರಿಸುವ ಪರಂಪರೆ ಕರ್ನಾಟಕದಲ್ಲಿದೆ. ಮಹಾರಾಣಾ ಪ್ರತಾಪ್ ಅವರು ದೇಶದ ಸ್ವಾಭಿಮಾನ, ಶೌರ್ಯ ಮತ್ತು ದೇಶಪ್ರೇಮದ ಪ್ರತೀಕವಾಗಿದ್ದು, ಅವರ ಆದರ್ಶಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಎಂದು ಮಾಜಿ ಸಚೀವ ಹಾಲಿ ಶಾಸಕ ಶಿವಾನಂದ ಪಾಟೀಲ ಅವರು ಹೇಳಿದರು.
      ನಗರದಲ್ಲಿ ಭಾನುವಾರ ನಡೆದ ಮಹಾರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಮೂರ್ತಿ ಅನಾವರಣದ ನಂತರ ಎಸ್.ಕೆ.ಕಾಲೇಜ್ ಮೈಧಾನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಎಲ್ಲ ಮಹನೀಯರಿಗೂ ಗೌರವ ಸಲ್ಲಿಸುತ್ತಿದೆ. ರಾಜಪೂತ ಸಮಾಜದ ಜನಸಂಖ್ಯೆ ಕಡಿಮೆ ಇದ್ದರೂ ಆ ಸಮಾಜದ ಮಹಾನ್ ವೀರರನ್ನು ನೆನಪಿಸಿಕೊಂಡು ಗೌರವಿಸುವ ರಾಜ್ಯ ಯಾವುದಾದರೂ ಇದ್ದರೆ ಅದು ಕರ್ನಾಟಕ ಎಂಬುದನ್ನು ಹೆಮ್ಮೆಯಿಂದ ಹೇಳಬೇಕಾಗುತ್ತದೆ ಎಂದ ಅವರು ಸರ್ಕಾರದ ಯಾವುದೇ ಅನುದಾನ ಪಡೆಯದೆ ಸ್ವಂತ ಸಂಪನ್ಮೂಲಗಳಿಂದ ಮಹಾರಾಣಾ ಪ್ರತಾಪ್ ಅವರ ಭವ್ಯ ಕಂಚಿನ ಮೂರ್ತಿಯನ್ನು ನಿರ್ಮಿಸಿ ಅನಾವರಣಗೊಳಿಸಿರುವ ತಾಳಿಕೋಟೆ ರಜಪೂತ ಸಮಾಜ ಬಂದುಗಳ ಕಾರ್ಯ ಅತ್ಯಂತ ಶ್ಲಾಘನೀಯ ವಿಜಯಪುರದಲ್ಲಿ ಮೊಟ್ಟಮೊದಲ ಬಾರಿಗೆ ಮಹಾರಾಣಾ ಪ್ರತಾಪ್ ಅವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಕಾರ್ಯ ನಡೆದಿತ್ತು. ಆದರೆ ಇಂದು ಅದಕ್ಕಿಂತಲೂ ವಿಜೃಂಭಣೆಯಿಂದ ಮಹಾರಾಣಾ ಪ್ರತಾಪ್ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗೌರವ ಸಲ್ಲಿಸಿರುವ ತಾಳಿಕೋಟೆ ನಗರವನ್ನು ಅಭಿನಂದಿಸಲೇಬೇಕು. ಮಹಾರಾಣಾ ಪ್ರತಾಪ್ ಅವರ ೫೬ ವರ್ಷಗಳ ಜೀವನ ಹಾಗೂ ಅವರು ನಡೆಸಿದ ಹೋರಾಟವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ೧೫ನೇ ಶತಮಾನದಲ್ಲಿ ಮಹಾರಾಣಾ ಪ್ರತಾಪ್, ೧೭ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದೇಶದ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಗಳು ಭಾರತೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿವೆ. ಇಂತಹ ವೀರ ಯೋಧರ ತ್ಯಾಗ, ಹೋರಾಟಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿವೆ ಎಂದು ಹೇಳಿದರು.
       ದೇಶದ ಏಕತೆ ಮತ್ತು ಅಖಂಡತೆಯನ್ನು ಉಳಿಸುವಲ್ಲಿ ಇಂತಹ ಮಹಾನ್ ವ್ಯಕ್ತಿಗಳ ಕೊಡುಗೆ ಅಪಾರವಾಗಿದೆ. ಅವರ ತ್ಯಾಗ, ಬಲಿದಾನಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ರಾಜಪೂತ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಶಾಸಕ ಡಾ. ಅಜಯಸಿಂಗ್ ಅವರು ಪ್ರಸ್ತಾಪಿಸಿದ್ದಾರೆ. ಈ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಅವರೊಂದಿಗೆ ಧ್ವನಿಗೂಡಿಸಿ ಮುಖ್ಯಮಂತ್ರಿಗಳ ಮನವೊಲಿಸುವ ಮೂಲಕ ರಾಜಪೂತ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
      ಮಾಜಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ರಾಜಪೂತ ಸಮಾಜದವರಾಗಿರುವುದರಿಂದ ಮಾತ್ರವಲ್ಲದೆ, ದೇಶದ ಇತಿಹಾಸ ಮತ್ತು ಮಹಾರಾಣಾ ಪ್ರತಾಪ್ ಅವರ ಆದರ್ಶಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ದೂರದ ಹಿಮಾಚಲ ಪ್ರದೇಶದಿಂದ ವಿಜಯಪುರ ಜಿಲ್ಲೆಯ ಸಣ್ಣ ಪಟ್ಟಣವಾದ ತಾಳಿಕೋಟೆಗೆ ಆಗಮಿಸಿ ಮೂರ್ತಿಯನ್ನು ಅನಾವರಣಗೊಳಿಸಿರುವುದು ಸಂತಸದ ಸಂಗತಿ. ಅವರಿಗೂ ಜಿಲ್ಲೆಯ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇನ್ನೋರ್ವ ಅತಿಥಿ ಬೀದರನ ರಾಜಕೀಯ ಧುರಿಣ ಈಶ್ವರಸಿಂಗ್ ಠಾಕೂರ ಅವರು ಮಾತನಾಡಿ ಹಲ್ದಿಘಾಟಿ ಯುದ್ಧವು ಕೇವಲ ಭಾರತದ ಇತಿಹಾಸಕ್ಕಷ್ಟೇ ಸೀಮಿತವಾಗದೆ ಜಗತ್ತಿನಾದ್ಯಂತ ಶೌರ್ಯ ಮತ್ತು ಧೈರ್ಯಕ್ಕೆ ಪ್ರೇರಣೆಯಾಗಿದೆ. ಮಹಾರಾಣಾ ಪ್ರತಾಪ್ ಮತ್ತು ಅವರ ಪ್ರೀತಿಯ ಚೇತಕ್ ಕುದುರೆಯ ನಡುವಿನ ಬಾಂಧವ್ಯ, ನಿಷ್ಠೆ ಹಾಗೂ ಸಾಹಸ ಇಂದಿಗೂ ಎಲ್ಲರಿಗೂ ಮಾದರಿಯಾಗಿದೆ. ಇಂತಹ ಮಹಾನ್ ವೀರನನ್ನು ಸ್ಮರಿಸುವ ಅವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಮಹಾರಣಾಪ್ರತಾಪಸಿಂಹ ಅವರ ಇತಿಹಾಸವನ್ನು ವಿವರಿಸಿದರು. 
      ವೇದಿಕೆಯಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಗುಂಡಕನಾಳ ಹಿರೇಮಠದ ಶ್ರೀ ಗುರಲಿಂಗ ಶಿವಾಚಾರ್ಯರು, ಬಾಲತಪಸ್ವಿ ಶ್ರೀ ಸೋಮಲಿಂಗ ಮಹಾಸ್ವಾಮೀಜಿ, ವೇ. ಭೀಮಶಂಕರ ಜೋಶಿ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಸಚೀವ ಅಜಯಸಿಂಗ್ ಧರ್ಮಸಿಂಗ್, ಶಾಸಕ ರಾಜುಗೌಡ ಪಾಟೀಲ, ರಾಜ್ಯಸಭಾ ಸದಸ್ಯ ನಾರಾಯಣ ಬಾಂಡ್ಗೆ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ), ಆರ್.ಎಸ್.ಪಾಟೀಲ(ಕೂಚಬಾಳ), ಮಾಜಿ ಶಾಸಕ ರಾಜುಗೌಡ ನರಸಿಂಹನಾಯಕ, ಸೋಮನಗೌಡ ಪಾಟೀಲ(ಸಾಸನೂರ), ಎ.ಎಸ್. ಪಾಟೀಲ, ಈಶ್ವರಸಿಂಗ್ ಠಾಕೂರ, ಡಾ.ಬಿ.ವೆಂಕಟಸಿಂಗ್, ಆರ್.ಬಾಲಾಜಿಸಿಂಗ್, ಸುಭಾಸಸಿಂಗ್ ಜಮಾದಾರ, ಶ್ರೀಮತಿ ಸಂದ್ಯಾತಾಯಿ ರಜಪೂತ, ಸೇರಿದಂತೆ ಹಲವು ಗಣ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಂಡಾರದಲ್ಲಿ ಮಿಂದೆದ್ದ ಲಕ್ಷ್ಮೀದೇವಿ ಭಕ್ತರುರಜಪೂತ್ ಕುಟುಂಬಗಳ ಕೊಡುಗೆ ಮಾದರಿ: ಯತ್ನಾಳ ಮೆಚ್ಚುಗೆ ರಾಣಾ ಪ್ರತಾಪ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ-ಶಾಸಕ ಪಾಟೀಲರಾಣಾಪ್ರತಾಪ್ ಅವರ ದೇಶಪ್ರೇಮ, ಸ್ವಾಭಿಮಾನ ಆದರ್ಶವಾಗಲಿ-ಡಾ.ಅಜಯಸಿಂಗ್ಕೌಶಲ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ಶಹನಾಜ ಗಡೆಕಾಯಿ ಆಯ್ಕೆ,ಮಹಾರಾಣಾ ಪ್ರತಾಪ್ ತ್ಯಾಗ, ಶೌರ್ಯ, ರಾಷ್ಟ್ರಪ್ರೇಮದ ಪ್ರತೀಕ-ಠಾಕೂರ್*ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನರೇಗಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ*ನಗರದಲ್ಲಿ ಸಚಿವ ಮಧು ಬಂಗಾರಪ್ಪಗೆ ಸನ್ಮಾನಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು: ಎಸ್.ಸಿ. ಕೋಟಾರಗಸ್ತಿಸಾಂಸ್ಕೃತಿಕ ಲೋಕ ಸಂಕುಚಿತವಾಗುತ್ತಿರುವುದು ವಿಷಾದನೀಯ: ಡಾ. ಗುರುಪಾದ ಮರಿಗುದ್ದಿ