ತಾಳಿಕೋಟೆ, ಪಾಲನೆ ಪೋಷಣೆ ಮಾಡುತ್ತಾ ಸಾಗಿಬಂದಿದ್ದ ತಾಯಿಯನ್ನು ಹಾಗೂ ಮಾರ್ಗದರ್ಶನ ನೀಡುತ್ತಾ ಸಾಗಿಬಂದ ತಂದೆಯನ್ನು ಒಮ್ಮೆ ಕಳೆದುಕೊಂಡರೆ ಅವರು ಪುಃನ ಸಿಗಲಾರರು ಕಾರಣ ಅನ್ಯರ ವಿಚಾರ ಆಡಿಕೊಳ್ಳದೇ ಮಾತನಾಡದೇ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬಧುಕು ಕಟ್ಟಿಕೊಂಡು ಸಾಗಿದರೆ ಸಾಕು ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಬುಧವಾರರಂದು ಸ್ಥಳೀಯ ಎಸ್.ಕೆ.ಪಧವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೮ ಮತ್ತು ೯ ಹಾಗೂ ೧೦ನೇ ತರಗತಿಯ ವಿದ್ಯಾರ್ಥಿಗಳ ಕುರಿತು ಕಾಲೇಜ್ ಸಭಾಭವನದಲ್ಲಿ ಏರ್ಪಡಿಸಲಾದ ೨೦೨೬-೨೭ನೇ ಸಾಲಿನ ಶಾಲಾ ಸಂಸತ್ತು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಶ್ರೀಗಳು ದೇವರೆಂಬುದನ್ನು ಅರ್ಥ ಮಾಡಿಕೊಳ್ಳಬೇಕು ಇದನ್ನು ಜೀವನವೇ ಹೇಳುತ್ತದೆ ಎಂದು ಹೇಳಿದ ಶ್ರೀಗಳು ತಾಯಿಯನ್ನು ಕಳೆದುಕೊಂಡ ಬಾಲಕಿಯೋರ್ವಳು ತಾಯಿಯು ಸಾವಿನ ದವಡೆಯಲ್ಲಿದ್ದಾಗ ಆಕೆ ಹೇಳಿದ ಮಾತನ್ನು ಕೇಳಿದ ಬಾಲಕಿ ಎಂ.ಎಸ್.ಐ.ದಲ್ಲಿ ಹೆಚ್ಚಿನ ಅಂಕ ಪಡೆದು ಕೈ ಇಲ್ಲದಿದ್ದರೂ ಕಾಲಿನಿಂದ ಬರೆದು ದೇಶಕ್ಕೆ ಪಧಕ ತಂದುಕೊಟ್ಟಂತಹ ಓಲಂಪಿಕ್ ಕ್ರೀಡಾ ಪಟು ಬಾಲಕಿಯ ಸಾಧನೆಗಳ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ ಶ್ರೀಗಳು ಇದೇ ದಿ.೧೯ ರಿಂದ ಪ್ರಾರಭಗೊಳ್ಳಲಿರುವ ಶ್ರೀ ಖಾಸ್ಗತೇಶ್ವರ ಜಾತ್ರೆಗೆ ತಪ್ಪದೇ ಆಗಮಿಸಿ ಪ್ರಸಾದ ಸೇವಿಸಿ ಪುನಿತರಾಗಿ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಿಂಗದಳ್ಳಿಯ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ಅಪ್ಪಾಸಾಹೇಬ ಮೂಲಿಮನಿ ಅವರು ಮಾತನಾಡಿ ಇಂದಿನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಶಾಲಾ ಸಂಸತ್ತ ರಚನೆ ಈ ಕಾರ್ಯಕ್ರಮವನ್ನು ನೊಡಿದಾಗ ತ್ರೀವೇಣಿ ಸಂಗಮ ಕಾರ್ಯಕ್ರಮ ಎಂದೆನಿಸದೇ ಇರಲಾರದು ವಿದ್ಯಾರ್ಥಿಗಳಿಗೆ ಮನಸ್ಸನ್ನು ತಿದ್ದುವ ಹಾಗೂ ಉಪದೇಶ ಮಾಡುವಂತಹ ಶಕ್ತಿ ಗುರುವಿನದ್ದಾಗಿದೆ ಮಾನವರಾದ ನಾವು ದೇಶ ವಿದೇಶಗಳಲ್ಲಿ ಹೋಲಿಸಿ ನೋಡಿದಾಗ ಒಬ್ಬರ ಬೆರಳುಗಳಲ್ಲಿಯ ಶಂಕ ಚಕ್ರಗಳು ಮತ್ತೊಬ್ಬರ ಬೆರಳುಗಳಲ್ಲಿ ಇರುವದಿಲ್ಲಾ ಇದಕ್ಕೆ ಅನನ್ಯವಾದುದ್ದೆನ್ನಲಾಗುತ್ತದೆ ಎಂದರು. ದೈಹಿಕ ಶಕ್ತಿ ಮಾನಸಿಕ ಶಕ್ತಿ ಆತ್ಮ ಶಕ್ತಿ ಎಂಬವಗಳ ಕುರಿತು ಬಿಡಿ ಬಿಡಿಯಾಗಿ ವಿವರಿಸಿದ ಶಿಕ್ಷಕ ಮೂಲಿಮನಿ ಅವರು ಮುಖ್ಯವಾಗಿ ಜನಭಲ, ನಾಮಭಲ, ದನಭಲ ಈ ಎಲ್ಲವನ್ನು ಪಡೆಯಬೇಕಾದರೆ ಮನುಷ್ಯ ಸಂಘ ಜೀವಿಯಾಗಬೇಕಾಗುತ್ತದೆ ಜನರ ಭಲವನ್ನು ಗೆಲ್ಲುವದರೊಂದಿಗೆ ನಾಮಭಲವನ್ನು ಪಡೆಯಬೇಕಾದರೆ ನೈತಿಕ ಮೌಲ್ಯ ಪಡೆಯಬೇಕಾಗುತ್ತದೆ ಎಂದು ನಿವೃತ್ತಿ ಹೊಂದಿದಂತಹ ಪ್ರಾಚಾರ್ಯ ಜೆ.ಎಸ್.ಕಟ್ಟಿಮನಿ ಅವರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದ್ದರ ಕುರಿತು ಮುಕ್ತ ಕಂಠದಿಂದ ಹೊಗಳಿದ ಮೂಲಿಮನಿ ಅವರು ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದರು.
ಇನ್ನೋರ್ವ ವೀ.ವಿ.ಸಂಘದ ಉಪಾಧ್ಯಕ್ಷರಾದ ಕಾಶಿನಾಥ ಮುರಾಳ ಅವರು ಮಾತನಾಡಿ ೧೯೭೪-೭೫ನೇ ಸಾಲಿನಲ್ಲಿ ಇದೇ ಶಾಲೆಯಲ್ಲಿ ಕಲಿತು ೮,೯,೧೦ ನೇ ತರಗತಿಯಲ್ಲಿ ಮುಂದುವರೆದೆ ಅಂದು ನಮಗೆ ಕಲಿಕೆ ನೀಡಿದಂತಹ ಶಿಕ್ಷಕರ ಪಾತ್ರ ಅವರ ಶಿಕ್ಷಣ ಮನದಟ್ಟುವಂತೆ ಇದುದ್ದರಿಂದಲೇ ನಾವು ಮಹತ್ವದ ಸ್ಥಾನಮಾನ ಪಡೆಯಲು ಅನುಕೂಲವಾಗಿದೆ ಅಂದಿನ ಶಿಕ್ಷಕರು ಮಾಡಿದ ಸೇವಾ ಕಾರ್ಯ ಗುಣಗಾನಮಯವಾಗಿತ್ತೆಂದು ಹೇಳಿದ ಮುರಾಳ ಅವರು ೧೯೪೫-೪೬ನೇ ಸಾಲಿನಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಶಿವಬಸವ ಮಹಾ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಈ ಶಾಲೆ ಪ್ರಾರಂಭಗೊಂಡಿತು ಈಗ ಈ ಶಾಲೆಯು ವಿದ್ಯಾದಾನ ಮಾಡುವಂತಹ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಶಿಕ್ಷಕ ಹಾಗೂ ಸಂಘದ ಸೇವಾ ಕಾರ್ಯಗಳ ಕುರಿತು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಉಪ ಪ್ರಾಚಾರ್ಯ ಆರ್.ಎಸ್.ಬೂದಿಹಾಳ ಅವರು ಮಾತನಾಡಿ ಸೋಮಾರಿತನವೆಂಬುದು ಇದ್ದರೆ ಅದು ಏನು ಮಾಡುತ್ತದೆ ಎಂಬುದರ ಕುರಿತು ತಿಮ್ಮನ ಕಥೆಯೊಂದನ್ನು ವಿದ್ಯಾರ್ಥಿಗಳ ಮುಂದೆ ಹೇಳಿ ಆದರ್ಶ ವಿದ್ಯಾರ್ಥಿಗಳಾಗಿ ಬಾಳಿರಿ ಎಂದರು.
ಶಾಲಾ ಸಂಸತ್ತ ಮಂತ್ರಿ ಮಂಡಲ ಪರಿಚಯವನ್ನು ಪ್ರಮಾಣವಚನ ಭೋದನೆಯನ್ನು ಶಿಕ್ಷಕ ಎನ್.ಎಸ್.ಕುಮಟಗಿ ಅವರು ಮಾಡಿದರು.
ಶಿಕ್ಷಕಿ ಮಹಾದೇವಿ ಕೂಡಗಿ ಅವರು ಸನ್ಮಾನ ಸಮಾರಂಭವನ್ನು ನಡೆಸಿಕೊಟ್ಟರು. ಇದೇ ಸಮಯದಲ್ಲಿ ಶ್ರೀಗಳಿಗೆ, ಅತಿಥಿ ಮಹೋದಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿವೃತ್ತ ಪ್ರಾಚಾರ್ಯ ಜೆ.ಎಸ್.ಕಟ್ಟಿಮನಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಿವೃತ್ತ ಶಿಕ್ಷಕ ಆರ್.ಬಿ.ದಾನಿ ಶಿಕ್ಷಕಿ ಮಹಾದೇವಿ ಕೂಡಗಿ, ಜ್ಯೋತಿ ಮಸೂತಿಮಠ ಹಾಗೂ ವಿದ್ಯಾರ್ಥಿಗಳಾದ ನಿಸರ್ಗಾ ರಾಠೋಡ, ಪರಶುರಾಮ ರಾಠೋಡ ಅವರು ಮಾತನಾಡಿದರು.
ವೇದಿಕೆಯ ಮೇಲೆ ವೀ.ವಿ.ಸಂಘದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ವೀ.ವಿ.ಸಂಘದ ರಾಚನಗೌಡ ಪಾಟೀಲ, ಎಸ್.ಕೆ.ಪ.ಪೂ.ಕಾಲೇಜ್ ಅಧ್ಯಕ್ಷ ಎಂ.ಆರ್.ಕತ್ತಿ, ಎಸ್.ಕೆ.ಪ್ರೌಢ ಶಾಲಾ ಅಧ್ಯಕ್ಷ ಎಂ.ಜಿ.ಕತ್ತಿ, ಎಸ್.ಕೆ.ಪ.ಪೂ.ಕಾಲೇಜ್ ಪ್ರಾಚಾರ್ಯ ಕೆ.ಕಿಶೋರಕುಮಾರ, ಅಶೋಕ ಪಾಟೀಲ, ಮಹಾಂತೇಶ ಸರಶೆಟ್ಟಿ, ಅಶೋಕ ಜಾಲವಾದಿ, ಆಯ್.ಬಿ.ಬಿಳೇಭಾವಿ, ನಿರ್ದೇಶಕ ಮಂಡಳಿಯವರು ಉಪಸ್ಥಿತರಿದ್ದರು.
ಅಕ್ಷತಾ ಬಿರಾದಾರ ಪ್ರಾರ್ಥಿಸಿದರು. ಶಿಕ್ಷಕ ಸುನೀಲ್ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಆರ್.ಜಿ.ರಾಠೋಡ ನಿರೂಪಿಸಿದರು. ಶಿಕ್ಷಕಿ ಶೃತಿ ಮೂಕೀಹಾಳ ವಂದಿಸಿದರು.