Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಗ್ರಾಮದೇವತೆ ಜಾತ್ರೋತ್ಸವದ ಪೋಸ್ಟರ್ ಬಿಡುಗಡೆ

ತಾಳಿಕೋಟೆ,   ಪಟ್ಟಣದ ಜನರ ಆರಾದ್ಯ ದೇವತೆಯಾದ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ)ಯ ಜಾತ್ರೋತ್ಸವ ಇದೇ ದಿ. ೧೭ ರಿಂದ ಪ್ರಾರಂಭಗೊಳ್ಳಲಿದ್ದು ಅದರ ಅಂಗವಾಗಿ ನಡೆಯಲಿರುವ ಅನೇಕ ಧಾರ್ಮಿಕ ಮತ್ತು ಆದ್ಯಾತ್ಮೀಕ ಅಲ್ಲದೇ ಮನರಂಜನೆ ಒಳಗೊಂಡ ಪೋಸ್ಟರ್‌ಗಳನ್ನು ಮಂಗಳವಾರರಂದು ಶ್ರೀ ಶಿವಭವಾನಿ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಮಯದಲ್ಲಿ ಮುಖಂಡರಾದ ಬಾಪುಗೌಡ ಪಾಟೀಲ ಅವರು ಮಾತನಾಡಿ ಈ ಭಾಗದ ಆದ್ಯಾತ್ಮೀಕ ಮತ್ತು ಶಕ್ತಿಪೀಠದ ಪರಂಪರೆಗೆ ಒಳಪಡಲಿರುವ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರೋತ್ಸವವು ಪ್ರತಿ ೩ ವರ್ಷಕ್ಕೊಮ್ಮೆ ನಡೆಸುತ್ತಾ ಬರಲಾಗಿದೆ ಪ್ರತಿವರ್ಷವೂ ಈ ಜಾತ್ರೋತ್ಸವಕ್ಕೆ ಸಕಲ ಜನರ ಸಹಕಾರದಿಂದ ವೈಭವಪೂರಿತವಾಗಿ ಆಚರಿಸಿಕೊಂಡು ಬರಲಾಗಿದೆ ಇದೇ ದಿ.೧೭ ರಂದು ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಸಕಲವಾದ್ಯ ವೈಭವಗಳೊಂದಿಗೆ ಭವ್ಯ ರಥೋತ್ಸವದಲ್ಲಿ ಶ್ರೀ ದ್ಯಾಮವ್ವದೇವಿಯ ಮೂರ್ತಿಯನ್ನು ಕೂಡ್ರಿ ಮೇರವಣಿಗೆಯ ಮೂಲಕ ರಾಜವಾಡೆಯಲ್ಲಿರುವ ಪಾದಗಟ್ಟೆಗೆ ಬಂದು ತಲುಪಲಿದೆ ಅಂದಿನಿಂದ ೫ ದಿನಗಳವೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ೧೮, ೧೯, ೨೦ ಈ ಮೂರುದಿನಗಳ ಕಾಲ ಧರ್ಮ ಸಭೆ ಜರುಗಲಿದೆ ಪ್ರತಿದಿನ ವಿವಿಧ ಕ್ರೀಡಾ ಉತ್ಸವಗಳು, ಮನರಂಜನೆ, ಗೀಗಿ ಪದ ಒಳಗೊಂಡಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಇನ್ನೋರ್ವ ಮುಖಂಡರಾದ ಮಲ್ಲಿಕಾರ್ಜುನ ಹಿಪ್ಪರಗಿ ಅವರು ಮಾತನಾಡಿ ಆದ್ಯಾತ್ಮೀಕ ನೆಲೆಬೀಡಾಗಿರುವ ಕೋಟೆ ನಗರಿ ತಾಳಿಕೋಟೆಯಲ್ಲಿ ಶ್ರೀ ದ್ಯಾಮವ್ವದೇವಿಗೆ ವಿಶಿಷ್ಠವಾಗಿ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಕಾದರೂ ಶ್ರೀದೇವಿಗೆ ಮೊದಲು ಪೂಜೆ ಸಲ್ಲಿಸಿ ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಅಂತಹ ಶಕ್ತಿದೇವತೆ ಶ್ರೀ ದ್ಯಾಮವ್ವದೇವಿಯ ಜಾತ್ರಾ ಉತ್ಸವವನ್ನು ಅತ್ಯಂತ ವೈಭವಪೂರಿತವಾಗಿ ಆಚರಿಸಲಾಗುತ್ತಿದೆ. ದಿ. ೧೯ ರಂದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳು ಭಾಗವಹಿಸಲಿದ್ದಾರೆ ಅಂದು ಸಾಯಂಕಾಲ ೬ ಗಂಟೆಗೆ ಸಹಸ್ರಾರು ಭಕ್ತಾಧಿಗಳಿಗೆ ತಮ್ಮ ಪ್ರವಚನವನ್ನು ಉಣಬಿಡಿಸಲಿದ್ದಾರೆಂದರು. ಈ ಜಾತ್ರೋತ್ಸವದ ಯಶಸ್ವಿಗೆ ಈಗಾಗಲೇ ಸಮಿತಿಗಳನ್ನು ರಚಿಸಲಾಗಿದೆ ಆಯಾ ಸಮಿತಿಯ ಸದಸ್ಯರುಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ ಈ ೫ ದಿನಗಳ ಕಾಲ ನಡೆಯಲಿರುವ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರಾ ಉತ್ಸವದ ಸಂಪೂರ್ಣ ಮಾಹಿತಿಯೊಳಗೊಂಡ ಪೊಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಗಿದೆ ಪಟ್ಟಣದ ಸಾರ್ವಜನಿಕರ ಮಾಹಿತಿಗಾಗಿ ಮತ್ತು ಗ್ರಾಮೀಣ ಜನರ ಭಕ್ತಾಧಿಗಳಿಗಾಗಿ ಎಲ್ಲ ಹಳ್ಳಿಗಳಿಗೆ ಉಖ್ಯಸ್ಥಳಗಳಲ್ಲಿ ಅಂಟಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಈ ಸಮಯದಲ್ಲಿ ಮುಖಂಡರಾದ ಅಣ್ಣಾಜಿ ಜಗತಾಪ, ಭೀಮನಗೌಡ ಪಾಟೀಲ, ಡಿ.ವ್ಹಿ.ಪಾಟೀಲ, ಶಶಿಧರ ಡಿಸಲೆ, ಸಜ್ಜನಸಾಹುಕಾರ ಬ್ಯಾಲ್ಯಾಳ, ಸಿದ್ದನಗೌಡ ಪಾಟೀಲ, ಬಸ್ಸು ಕಶೆಟ್ಟಿ, ಬಸನಗೌಡ ಪಾಟೀಲ, ರಮೇಶ ಮೂಕೀಹಾಳ, ಶರಣಗೌಡ ಬಿರಾದಾರ, ಮುತ್ತು ಕಶೆಟ್ಟಿ, ಎಂ.ಎಂ.ಪಾಟೀಲ, ಮಲ್ಲು ಕೋರಿ, ಪ್ರಕಾಶ ಸಾಸಾಬಾಳ, ಮಾರುತಿ ಕದಂ, ಶಿವಪ್ಪ ಬೊಮ್ಮಗೋಡ, ಶಂಕರಗೌಡ ಪಾಟೀಲ, ಬಸವರಾಜ ಚೌದ್ರಿ, ಮೊದಲಾದವರು ಇದ್ದರು.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದ್ರಿಯ ಆರೋಗ್ಯ ಸಪ್ತಾಹದ ಸಮಾರೋಪ ಸಮಾರಂಭ ಯಶಸ್ವಿನೂತನ ಡಿಎಸ್ ಎಸ್ ಮಹಿಳಾ ಪದಾಧಿಕಾರಿಗಳ ಆಯ್ಕೆ ಪೋಷಿಸಿದ ತಂದೆ-ತಾಯಿಯನ್ನು ಮರೆಯದಿರಿ-ಸಿದ್ದಲಿಂಗಶ್ರೀ"ಹೈನುಗಾರಿಕೆ ಕೇವಲ ವ್ಯಾಪಾರವಲ್ಲ ಇದು ನಮ್ಮ್ ಸಂಪ್ರದಾಯ ಕೃಷಿ" "ಕಲಾವಿದರನ್ನು ಗೌರವಿಸುವ ಸಂಸ್ಕೃತಿ ಸಮಾಜದಲ್ಲಿ ಮತ್ತಷ್ಟು ಬೆಳೆಯಬೇಕಿದೆ"ಮೇವಿ ಟೆಕ್ನಾಲಜೀಸ್ ಎಲ್‌ಎಲ್‌ಪಿ-ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಸಂಸ್ಥೆ ನಡುವೆ MoUಬೂದಿಹಾಳ-ಫೀರಾಪೂರ ನೀರಾವರಿ ಯೋಜನೆ ಪೂರ್ಣಗೊಳಿಸಲು ಹಾಗೂ ಬರಪೀಡಿತ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ಇಂದು ರೈತ ಸಂಘದಿಂದ ಬೃಹತ್ ಪ್ರತಿಭಟನೆಕಾಲುವೆಗಳಿಗೆ ನೀರು ಹರಿಸಿ ವಿ. ಪ ಶಾಸಕ ಎಚ್.ಆರ್. ನಿರಾಣಿಮೌಲಾನಾ ಆಜಾದ್ ಪಬ್ಲಿಕ್ ಶಾಲೆಯಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ257ನೇ ದಿನದ ಬಲ್ಡೋಟ ಹಟಾವೋ, ಮಾಲಿನ್ಯ ತೊಲಗಿಸಿ ಧರಣಿ ಯಶಸ್ವಿ;