Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಕಾಯಕದಲ್ಲಿಯೇ ನಿಜ ಜೀವನದ ಸಾರ ಅಡಗಿದೆ"

ಹುನಗುಂದ: ಕಾಯಕದಲ್ಲಿಯೇ ನಿಜ ಜೀವನದ ಸಾರ ಅಡಗಿದೆ. ೧೨ನೇ ಶತಮಾನದ ಬಸವಾದಿ ಶರಣರು ನಡೆಸಿದ ಕಾಯಕ ಜೀವನ ಮತ್ತು ನಡೆ ನುಡಿಗಳು ಇಂದಿಗೂ ಪ್ರಸ್ತುತ, ಅವರಂತೆ ಆದರ್ಶ ಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದ ಲಿಂ.ಪ್ರೊ. ಕೆ ತಾರಾನಾಥ ದಂಪತಿಗಳು ಸದಾ ಸ್ಮರಣೆಗೆ ಪಾತ್ರರು, ಎಂದು ಇಳಕಲ್ಲ ಗುರು ಮಹಾಂತ ಶ್ರೀ ಹೇಳಿದರು.
ಪಟ್ಟಣದ ಪುರಸಭೆ ಮಂಗಲ ಮಂಟಪದಲ್ಲಿ ತಾಲೂಕ ಶರಣ ಸಾಹಿತ್ಯ ಪರಿ?ತ್ತು, ಕದಳಿ ವೇದಿಕೆ, ವಚನ ಸಾಹಿತ್ಯ ಪರಿ?ತ್ತು, ಜಿಲ್ಲಾ ಕರ್ನಾಟಕ ಲೇಖಕಿಯ ಸಂಘ, ಸಹಯೋಗದಲ್ಲಿ ಲಿಂ.ಪೊ. ಕೆ. ತಾರಾನಾಥ, ಲಿಂ. ಉಮಾದೇವಿ ತಾರಾನಾಥ ಶರಣ ದಂಪತಿಗಳ ೧೧ ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ, ೩೯ ನೇ ಮನೆ ಮನೆಗೆ ವಚನ ಸೌರಭ, ವಿಶ್ವ ಮಹಿಳಾ ದಿನಾಚರಣೆಯ ಮಹಿಳಾ ಕವಿಗೋಷ್ಠಿಯ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜನ್ಮ ಕೊಟ್ಟ ತಂದೆ ತಾಯಿಗಳ ಪುಣ್ಯ ಸ್ಮರಣೆ ಮಾಡುವುದು ಸಹಜ, ಆದರೆ ಸೊಸೆಯಂದಿರು ತಮ್ಮ ಅತ್ತೆ ಮಾವಂದಿರ ಸ್ಮರಣೆ ಮಾಡಿಕೊತ್ತಿರುವುದು ನೋಡಿದರೇ, ಅತ್ತೆ ಮಾವಂದಿರನ್ನು ತಮ್ಮ ಸ್ವಂತ ತಂದೆತಾಯಿಗಳಂತೆ ಅಂತಕರು ಅಂತ ಕರುಣ ತೋರಿಸಿದ್ದರ ದ್ಯೋತಕ ಎಂದರು.
ಡಾ.ಎಂ ಬಿ, ಒಂಟಿ ಉಪನ್ಯಾಸ ನೀಡಿ ಮಾತನಾಡಿ ಲಿ. ಪ್ರೊ. ಕೆ. ತಾರಾನಾಥರು ಪಂಚ ಭಾ?ಯ ಪಾಂಡಿತ್ರ ಹೊಂದಿದವರಾಗಿದ್ದರು. ಮತ್ತು ಶಿ?ರನ್ನು ಎತ್ತರಕ್ಕೆ ಬೆಳೆಸುವಲ್ಲಿ ಸದಾ ಮಾರ್ಗದರ್ಶನ ನೀಡುತ್ತಾ ಬಂದರು.
ಪಟ್ಟಣದ ಪುರಸಭೆ ಮಂಗಲ ಮಂಟಪದಲ್ಲಿ ಲಿಂ.ಪ್ರೊ. ಕೆ ದಂಪತಿಗಳ ೧೧ ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ, ದಿನಾಚರಣೆಯ ಮಹಿಳಾ ಕವಿಗೋಷ್ಠಿಯ ಸಮಾರಂಭದಲ್ಲಿ ಪರೋಪಕಾರ ಗುಣ, ಸನ್ನಡತೆ, ಸಮಯ ಪಾಲನೆ ಶಿಸ್ತು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದರು. ಸಾಹಿತ್ಯ ಕಲೆ ಸಂಗೀತದಲ್ಲಿಯೂ ಅವರಿಗೆ ಅಪಾರ ಒಲವಿತ್ತು, ಅವರ ಚುಟುಕಗಳನ್ನು ಮೆಚ್ಚಿ ದಿನಕರ ದೇಸಾಯಿ ಪ್ರಶಂಸಿದರು. ವಿದ್ವತ್ತಿನಿಂದಾಗಿ ಹೆಸರಾದರು. ಸಹಾಯ ಕೇಳಿ ಬಂದವರಿಗೆ ನಿರಂತರ ಸ್ಪಂದಿಸಿ ಎಲ್ಲರೊಂದಿಗೆ ಒಂದಾಗಿ ಇರುತ್ತಿದ್ದರು ಎಂದರು.
ನಿವೃತ್ತ ಪ್ರಾಚಾರ್ಯ ಎಸ್ ಕೆ ಕುಲಕರ್ಣಿ ಅವರು ತಾರಾನಾಥ ಅವರ ಸ್ನೇಹ, ಒಡನಾಟ ಮತ್ತು ಅವರ ಕಾರ್ಯಕಮತೆಯ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎ. ಎಸ್ ಪಾವಟೆಯವರು ಮಾತನಾಡಿದರು. ಆಲೂರ್, ಸವಿತಾ ಶಿವಪ್ಪಯ್ಯನಮಠ, ಮಲ್ಲಮ್ಮ ತೇಲಿ, ಈರಮ್ಮ ಹಂಪಿಹೊಳ, ಶೀಲಾ ಗೌಡರ, ಶಿವಲೀಲಾ ಸೊಂಬಣ್ಣವರೆ, ಗೀತಾ ತಾರಿವಾಳ, ನಿಂಗಮ್ಮ ಭಾವಿಕಟ್ಟಿ, ಚೆನ್ನವ್ವ ಕಬಾಡೆ ಅವರು ಕವನ ವಾಚನ ಮಾಡಿದರು. ಮಹಾಂತೇಶ ಮುದಗಲ್ ಇವರು ತಾರಾನಾಥರ ಬದುಕು ಬರಹ ಕುರಿತ ಕವನ ವಾಚಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷ ಲಲಿತಾ ಹೊಸಪ್ಯಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್ ಎನ್ ಹಾದಿಮನಿ ಸ್ವಾಗತಿಸಿದರು. ಗೀತಾ ತಾರಿವಾಳ ವಚನಗಾನ, ಸುಧೀಂದ್ರ ತಾಡಪತ್ರಿ ಪ್ರಾರ್ಥನೆ, ಪ್ರಭು ಮಾಲಗತ್ತಿ ನಿರೂಪಿಸಿದರು ಅಂದಯ್ಯ ವಸ್ತ್ರದ ವಂದಿಸಿದರು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸಿಟಿ ಸೈಕ್ಲಿಂಗ್ ಲೀಗ್ಯರಗಟ್ಟಿ: ಖಾಯಂ ನ್ಯಾಯಾಲಯಕ್ಕೆ ಚಾಲನೆ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಮುಖ್ಯ ಕಾರ್ಯದರ್ಶಿಗಳ  ಆದೇಶ: ನೌಕರರ ಸಂಘದ ಹೋರಾಟಕ್ಕೆ ಸಂದ ಜಯ ಮಹೇಶ ಹುಬ್ಬಳ್ಳಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅವಹೇಳನಕಾರಿ ಹೇಳಿಕೆ: ರಾಸಿಂಗೆ ಉಚ್ಛಾಟನೆಗೆ ದಲಿತ ಮುಖಂಡರ ಆಗ್ರಹಎಸ್.ಡಿ.ಎಂ.ಸಿ ಯ ನೂತನ ಅಧ್ಯಕ್ಷರಾಗಿ ಹನಮಂತ ಮಡಿವಾಳರ ಅವಿರೋಧ ಆಯ್ಕೆ*ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿ ಮಾತು ಉಳಿಸಿಕೊಳ್ಳಿ:  ಮಹಾಂತೇಶ ಬಾಡಗಿ ಆಗ್ರಹಘಟಪ್ರಭಾ ರೇಲ್ವೆ  ಇಲಾಖೆ ಆಯ್  ಜಿ ತಿರಿಪಾಲ  ಮತ್ತು ಮಲ್ಲಿಕಾರ್ಜುನ ಇಂಗಳೆ  ಅವರಿಗೆ ಬೀಳ್ಕೊಡುಗೆ ಸಮಾರಂಭ.ಬಸ್ ನಿಲ್ದಾಣದಲ್ಲಿ ಯರ್ರಾ ಬಿರ್ರಿ ಖಾಸಗಿ ವಾಹನ ನಿಲುಗಡೆ : ಪ್ರಯಾಣಿಕರ ಪರದಾಟನಮ್ಮದು ಭಯೋತ್ಪಾದಕರಿಗೆ ಬಿರಿಯಾನಿಕೊಟ್ಟು ಸಲಹುವ ಸರ್ಕಾರವಲ್ಲ: ಸಿ.ಟಿ.ರವಿ.ಸೂರ್ಯ ನ್ಯೂಸ್ ಕನ್ನಡ ವಾರ್ಷಿಕೋತ್ಸವದಲ್ಲಿ ಹೊನ್ನುರಸ್ವಾಮಿ ಕೆ.ಟಿ. ಅವರಿಗೆ “ನಿರ್ಭೀತ ವರದಿಗಾರ ರತ್ನ” ಪ್ರಶಸ್ತಿ ಪ್ರದಾನ