LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮೇವಿ ಟೆಕ್ನಾಲಜೀಸ್ ಎಲ್‌ಎಲ್‌ಪಿ-ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಸಂಸ್ಥೆ ನಡುವೆ MoU

ಹಸಿರು ಕ್ರಾಂತಿ ವರದಿ ಬೆಳಗಾವಿ
ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಸಂಸ್ಥೆ (KLS GIT) ಬೆಳಗಾವಿ ಮತ್ತು ಮೇವಿ ಟೆಕ್ನಾಲಜೀಸ್ ಎಲ್‌ಎಲ್‌ಪಿ ಬೆಂಗಳೂರು ನಡುವೆ ಉದ್ಯಮ-ಶೈಕ್ಷಣಿಕ ಸಹಭಾಗಿತ್ವ ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಒಪ್ಪಂದ ಪತ್ರ (MoU) ಸಹಿ ಮಾಡಲಾಯಿತು.

ಈ MoU ಅನ್ನು ಸಂಸ್ಥೆಯ ಪರವಾಗಿ ಕೆಎಲ್‌ಎಸ್‌ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾವ್ಕರ್ ಸಹಿ ಮಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ವಿಜಯ ಅಥವಲೆ ಹಾಗೂ ಆಡಳಿತ ಡೀನ್ ಪ್ರೊ.ಡಿ.ಎ.ಕುಲಕರ್ಣಿ ಉಪಸ್ಥಿತರಿದ್ದರು. ಮೇವಿ ಟೆಕ್ನಾಲಜೀಸ್ ಎಲ್‌ಎಲ್‌ಪಿ ಪರವಾಗಿ ಸಿಇಒ ಮತ್ತು ಸಹಸ್ಥಾಪಕ ವಿಜಯ ಬಿ.ಆರ್ ಸಹಿ ಮಾಡಿದರು. ಸಿಟಿಒ ಮತ್ತು ಸಹಸ್ಥಾಪಕಿ ಮೇಘಾ ಬಿ.ಎಸ್ ಉಪಸ್ಥಿತರಿದ್ದರು. 

ಉದ್ಯಮ ಇಂಟರ್ನ್‌ಶಿಪ್‌ಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ತಜ್ಞರ ಉಪನ್ಯಾಸಗಳು, ಕೌಶಲ್ಯಾಭಿವೃದ್ಧಿ ಮತ್ತು ಪ್ರಮಾಣಪತ್ರ ಕಾರ್ಯಕ್ರಮಗಳು, ಸಂಯುಕ್ತ ಸಂಶೋಧನೆ ಮತ್ತು ನವೀನತೆ, ಪಠ್ಯಕ್ರಮ ಸಮೃದ್ಧೀಕರಣ, ಇಂಟರ್ನ್‌ಶಿಪ್ ಮತ್ತು ನೇಮಕಾತಿ ಬೆಂಬಲ ಸೇರಿದಂತೆ ಇತರ ಅಂಶಗಳು ಸಹಭಾಗಿತ್ವದ ಪ್ರಮುಖ ಉದ್ದೇಶಗಳಾಗಿದ್ದವು.

ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನೀಯರಿಂಗ್ ವಿಭಾಗದ ವಿಭಾಗಾಧ್ಯಕ್ಷ ಡಾ.ಆರ್.ಎಸ್.ಪಾಟೀಲ, ಡಾ.ಕವಿತಾ ಡಿ.ಹನಬರಟ್ಟಿ, ಡಾ.ಆರತಿ ಶಾಹಾಪುರಕರ ಹಾಗೂ ಪ್ರೊ.ಸುಧಾ ವಿ.ಸಲಾಕೆ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ