ಕನ್ನಡ  ರಕ್ಷಣಾ ವೇದಿಕೆ ಮತ್ತು ಕನ್ನಡ ಸೇನೆ ಸಂಘಟನೆಯಿಂದ ಆಹಾರ ಕಿಟ್,ಬಟ್ಟೆ ವಿತರಣೆ

A B
By A B
 ಕನ್ನಡ  ರಕ್ಷಣಾ ವೇದಿಕೆ ಮತ್ತು ಕನ್ನಡ ಸೇನೆ ಸಂಘಟನೆಯಿಂದ ಆಹಾರ ಕಿಟ್,ಬಟ್ಟೆ ವಿತರಣೆ
WhatsApp Group Join Now
Telegram Group Join Now
ಘಟಪ್ರಭಾ. ಸಮೀಪದ  ಬಡಿಗವಾಡ ಗ್ರಾಮದ ರೈತ ರಂಗಪ್ಪ ಮಾಳಪ್ಪ ಚೂಡಪ್ಪಗೋಳ ಹಾಗೂ ಪತ್ನಿ,ನಾಲ್ಕು ಜನ ಮಕ್ಕಳು ಸೇರಿ ಮನೆಯಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ  ಶನಿವಾರರಂದು ಬೆಳಗ್ಗೆ 10.30 ರ ಸುಮಾರಿಗೆ ಮನೆಯಲ್ಲಿ ಗ್ಯಾಸ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿತ್ತು ಮನೆಯಲ್ಲಿ ಚಿನ್ನಾಭರಣ,ಲಕ್ಷಾಂತರ ನಗದು ಹಣ,ಎರಡು ಎಮ್ಮೆ,ಒಂದು ಆಕಳು,ಗೃಹಬಳಕೆಯ ವಸ್ತುಗಳು,ದವಸ ಧಾನ್ಯಗಳು,ಬಟ್ಟೆ ಬರೆಗಳು,ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿರುವದರಿಂದ ಹನಿಗೋಳಗಾದ ಕುಟುಂಬಸ್ಥರಿಗೆ  ಕನ್ನಡ ರಕ್ಷಣಾ ವೇದಿಕೆ ಸಂಘಟನೆ  ಮತ್ತು ಕನ್ನಡ ಸೇನೆ ಕರ್ನಾಟಕ ಜಂಟಿಯಾಗಿ  ಆಹಾರ ಧಾನ್ಯದ ಕಿಟ್ಟಗಳನ್ನು ಹಾಗೂ ಬಟ್ಟೆಗಳನ್ನು ಸಂಘಟನೆಯ ಪದಾಧಿಕಾರಿಗಳು ಗ್ರಾಮಸ್ಥರು ಸೇರಿ  ಸೋಮವಾರಂದು ವಿತರಿಸಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ಮಾತನಾಡಿ ನೊಂದ ಕುಟುಂಬಗಳಿಗೆ ಸಹಾಯ ಸಹಕಾರ ಮಾಡುವುದು ಸಂಘಟನೆಗಳ ಉದ್ದೇಶ ಹಾಗೂ ವಿವಿಧ ಸಂಘಟನೆಯವರು ಇಂಥ ಕುಟುಂಬಗಳಿಗೆ ಸಹಾಯ ಸಹಕಾರ ಮಾಡಬೇಕು,ಸಂಘ ಸಂಸ್ಥೆಗಳು,ಧಾನಿಗಳು ಮುಂದೆ ಬಂದು ನೊಂದ ಕುಟುಂಬಕ್ಕೆ ಸಹಾಯ ಸಹಕಾರ ಸಲ್ಲಿಸಬೇಕು,ಮತ್ತು
ಸಂಬಂಧಿಸಿದ ಅಧಿಕಾರಿಗಳು,ಸ್ಥಳೀಯ ಜನಪ್ರತಿನಿಧಿಗಳು ಶಾಸಕರು,ಸಚಿವರು,ಈ ಕಡೆ ಗಮನ ಹರಿಸಿ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು,ಎಂದು ಕರವೇ ರಾಜ್ಯಾಧ್ಯಕ್ಷರು ವಿನಂತಿಯಿಂದ ಅಗ್ರಹ ಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಗೋಕಾಕ್ ತಾಲೂಕ ಅಧ್ಯಕ್ಷರಾದ ಅಪ್ಪಾಸಾಬ ಮುಲ್ಲಾ,ಕರವೇ ಮುಖಂಡರಾದ ತಮ್ಮಣ್ಣಾ ಅರಭಾವಿ,ಕರವೇ ಮೂಡಲಗಿ ತಾಲೂಕ ಉಪಾಧ್ಯಕ್ಷರಾದ ಸುರೇಶ ಚಿಗಡೊಳ್ಳಿ, ಕರವೇ ಗೋಕಾಕ ತಾಲೂಕ ಸಂಚಾಲಕರಾದ ಸಿದ್ದಪ್ಪ ತಳಗೇರಿ, ಕರವೇ ಮೂಡಲಗಿ ತಾಲೂಕ ಕಾರ್ಯದರ್ಶಿಯಾದ ಮಲ್ಲೇಶ ಚೌಕಶಿ,ಕರವೇ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ ಚೌಕಶಿ,ರಮೇಶ ಮಲ್ಲಾಪುರೆ, ಸಿದ್ದಪ್ಪ ನಲ್ಲಾನಟ್ಟಿ,ಸಿದ್ದರಾಮ ನಲ್ಲಾನಟ್ಟಿ,ಪುಂಡಲೀಕ ನಂದಗಾವಿ,ಶಂಕರ ಜೋಗಿ,ವಿಠ್ಠಲ ಜಾಗನೂರ,ಯೇಸು ರಾಣ್ಣಪ್ಪಗೋಳ,ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ವಿಠ್ಠಲ್  ಚೂಡಪ್ಪಗೊಳ,ಬಸಪ್ಪ ಚೂಡಪ್ಪಗೊಳ,ಹಾಗೂ ಅನೇಕ ಸಂಘಟನೆ ಕಾರ್ಯಕರ್ತರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article