Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೌಡಿಶೀಟರ್ ನೀಲಕಂಠ ಮನವಾಡಕರ ಗಡಿಪಾರು ಮಾಡಿ ಆದೇಶ

ಯರಗಟ್ಟಿ: ಸಮೀಪದ  ನುಗ್ಗಾನಟ್ಟಿ ಗ್ರಾಮದ ರೌಡಿಶೀಟರ್ ನೀಲಕಂಠ ಮುದಕಪ್ಪ ಮನವಾಡಕರ (೨೬) ಎಂಬಾತನನ್ನು ೬ ತಿಂಗಳ ಕಾಲ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಮಾನ್ಯ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಮತ್ತು ವಿಶೇ? ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಬೆಳಗಾವಿ ಆದೇಶ ಹೊರಡಿಸಿದ್ದಾರೆ.

 ಆರೋಪಿತನು ಮಾಡಮಗೇರಿ ಗ್ರಾಮದ ಒಬ್ಬ ಮುಗ್ಧ ದಲಿತ ಮಹಿಳೆಗೆ ಹೆದರಿಸಿ ಜಮೀನು ಕಬಳಿಸಲು ಯತ್ನ, ನುಗ್ಗಾನಟ್ಟಿ ಗ್ರಾಮದ ಅಮಾಯಕ ಯುವಕ ರಾಜು ಮುದ್ದನ್ನವರನನ್ನು ರೌಡಿ ಸಹಚರರೊಂದಿಗೆ ಸೇರಿ ಕೊಲೆ ಮಾಡಿದ ಪ್ರಕರಣ ಮತ್ತು ಯರಝರ್ವಿ ಗ್ರಾಮದ ನಡು ರಸ್ತೆಯಲ್ಲಿ ಕುಟರನಟ್ಟಿ ಗ್ರಾಮದ ವ್ಯಕ್ತಿಯ ಮೇಲೆ ಹಲ್ಲೆ ಸೇರಿದಂತೆ ಅನೇಕರು ಕೃತ್ಯಗಳು ಆದರಿಸಿ ಇತನ್ನು ಆರು ತಿಂಗಳು ವರೆಗೆ ಜಿಲ್ಲೆಯಿಂದ ಗಡಿಪಾರು ಮಾಡಿದ್ದಾರೆ.

ಈತನ ದೌರ್ಜನ್ಯದಿಂದ ನುಗ್ಗಾನಟ್ಟಿ, ಯರಗಟ್ಟಿ, ಬೂದಿಗೊಪ್ಪ, ಯರಝರ್ವಿ, ಕುಟರನಟ್ಟಿ, ಮಾಡಮಗೇರಿ, ಗೋಕಾಕ, ಖನಗಾಂವ, ಬೆಣಚಿನಮರಡಿ ಮತ್ತು ಗುಧಟ್ಟಿ ಗ್ರಾಮಸ್ಥರು ನೆಮ್ಮದಿಯಿಂದ ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈತನ ಉಪಟಳ, ಸಾಮಾಜಿಕ ಜಾಲತಾಣದಲ್ಲಿ ಫೋಟೋ-ವಿಡಿಯೋ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ.

ಸಾಕ್ಷಿದಾರರಿಗೂ ಬೆದರಿಕೆ ಹಾಕುತ್ತಿದ್ದ  ಪೊಲೀಸ್ ಇನ್ಸ್ಪೆಕ್ಟರ್ ಮುರಗೋಡ ರವರ ವರದಿ ಅದರಸಿ  ಮಾನ್ಯ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಮತ್ತು ವಿಶೇ? ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಬೆಳಗಾವಿ ರವರು ಈತನನ್ನು ೬ ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿದ್ದಾರೆ. ಮುರಗೋಡ ಪೊಲೀಸರು ಆರೋಪಿಯನ್ನು ಧಾರವಾಡ ಜಿಲ್ಲೆಗೆ ಕರೆದೊಯ್ದು ಹಾಜರುಪಡಿಸಿದ್ದಾರೆ
ರೌಡಿ ವ್ಯಕ್ತಿ ಗಡಿಪಾರು ಆದೇಶ ಎಲ್ಲಾ ರೌಡಿಗಳಿಗೆ ಎಚ್ಚರಿಕೆ ಘಂಟೆ ಪೋಲಿಸ್ ಇಲಾಖೆ ದಿಟ್ಟ ಹೆಜ್ಜೆ ರೌಡಿ ಶೀಟರ್ ಗಳಿಗೆ ನಡುಕ ಹುಟ್ಟಿಸಿದ ಪೊಲೀಸರ ನಡೆ 
ಸಾರ್ವಜನಿಕರ ನೆಮ್ಮದಿಗೆ ದಿಟ್ಟ ಹೆಜ್ಜೆ ಇಟ್ಟ ಪೋಲಿಸ್ ಇಲಾಖೆಗೆ ಸಾರ್ವಜನಿಕರಿಂದ ಪ್ರಶಂಸೆಗೆ ಸುರಿಮಳೆ ಸುರಿಸಿದರು.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST