ತಾಳಿಕೋಟೆ, ಪಟ್ಟಣದ ಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರೋತ್ಸವ ಅಂಗವಾಗಿ ದಿ. ೧೯ ರವಿವಾರರಂದು ಸಾಯಂಕಾಲ ೬ ಗಂಟೆಗೆ ಧರ್ಮಸಭೆ ಆಯೋಜಿಸಲಾಗಿದೆ.
ಈ ಧರ್ಮಸಭೆಯ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಬೀಸರಳ್ಳಿಯ ಶ್ರೀ ಗವಿಸಿದ್ದೇಶ್ವರ ಶಾಖಾ ಮಠದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ವಹಿಸುವರು.
ಮುಖ್ಯ ಅತಿಥಿಗಳಾಗಿ ಕೆಎಸ್‌ಡಿಎಲ್ ಅಧ್ಯಕ್ಷರು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ.ಎಸ್.ನಾಡಗೌಡ(ಅಪ್ಪಾಜಿ), ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಆಗಮಿಸುವರು.
ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ ಅವರು ವಹಿಸುವರೆಂದು ಪ್ರಕಟನೆ ತಿಳಿಸಿದೆ.
ರಾಜ್ಯಮಟ್ಟದ ಕಬ್ಬಡ್ಡಿ-ರಸಮಂಜರಿ
ರವಿವಾರರಂದು ಬೆಳಿಗ್ಗೆ ೧೦ ಗಂಟೆಗೆ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಜರುಗಲಿದೆ ವಿಜೇತ ತಂಡಕ್ಕೆ ಪ್ರಥಮ ಭಹುಮಾನ ೩೦ ಸಾವಿರ, ದ್ವಿತೀಯ ಭಹುಮಾನ ೨೦ ಸಾವಿರ, ತೃತೀಯ ಭಹುಮಾನ ೧೫ ಸಾವಿರ, ನಾಲ್ಕನೇ ಭಹುಮಾನ ೧೦ ಸಾವಿರ ನೀಡಲಾಗುತ್ತಿದೆ. ಸಾಯಂಕಾಲ ೬-೩೦ ಗಂಟೆಗೆ ಶ್ರೀ ಮದಾನಾಗುಂದಿ ಸಂಸ್ಥಾನ ಸರಸ್ವತಿ ಪೀಠ ವಿಶ್ವಕರ್ಮ ಏಕದಂಡಿಮಠ ಶಾಹಾಪೂರ ಇವರಿಂದ ಹಾಸ್ಯದೊಂದಿಗೆ ನೀತಿ ಪ್ರವಚನ, ಕನಸಿನ ಭೂತ ದೇವಿ ಪುರಾಣ ಜರುಗುವದು. ಅಂದೇ ರಾತ್ರಿ ೯-೩೦ ಗಂಟೆಗೆ ಝೀ ಕನ್ನಡ ವಾಹಿನಿ ಉತ್ತರ ಕರ್ನಾಟಕ ಕಾಮಿಡಿ ಕಿಲಾಡಿ ವಿನ್ನರ್ ಮಹಾಂತೇಶ ತಾಳಿಕೋಟಿ ಇವರಿಂದ ಉತ್ತರ ಕರ್ನಾಟಕದ ಜಾನಪದ ಹಾಗೂ ಹಾಸ್ಯ ಸಂಭ್ರಮ ಶಬ್ಬೀರ ಢಾಂಗೆ, ರಮೇಶ ಕುರುಬಗಟ್ಟಿ ಒಳಗೊಂಡು ಅನೇಕ ಹಾಸ್ಯ ಕಲಾವಿದರಿಂದ ಮೀಮಿಕ್ರಿ ಹಾಗೂ ಭರ್ಜರಿ ಹಾಸ್ಯ ಭರಿತ ಮನರಂಜನೆ ಕಾರ್ಯಕ್ರಮ ಜರುಗಲಿದೆ.