Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಮನವಿ

ಇಂಡಿ : ಇಂಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರೋಡಗಿ ಗ್ರಾಮದಲ್ಲಿ ಖೇಡಗಿ, ಮಿರಗಿ ಹಾಗೂ ಶಿವಪೂರ ಗ್ರಾಮಗಳ ನೂರಾರು ರೈತರು ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಶ್ರೀ ಶಿವಲಿಂಗೇಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಬಿ.ಡಿ. ಪಾಟೀಲ ಅವರು ರೈತರ ಪರವಾಗಿ ಮಾತನಾಡಿ, "ಬತ್ತಿರುವ ಭೀಮಾ ಮತ್ತೆ ಉಕ್ಕಿ ಹರಿಯಲಿ. ರೈತರ ಬದುಕು ಹಸನಾಗಲಿ. ಮೇಘರಾಜನ ಕೃಪೆ ಈ ಬರಪೀಡಿತ ನಾಡಿನ ಮೇಲೆ ಸುರಿದು ಸಮೃದ್ಧಿ ನೆಲೆಸಲಿ" ಎಂದು ಭೀಮಾ ನದಿಯ ದಡದಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಅವರು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ, ಬಳಗಾನೂರ ಕೆರೆಯಿಂದ ನವಲಿ ಹಳ್ಳದ ಮೂಲಕ ಭೀಮಾ ನದಿಗೆ ನೀರು ಹರಿಸುವ ವ್ಯವಸ್ಥೆಯನ್ನು ತಕ್ಷಣ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದರಿಂದ ಇಂಡಿ ತಾಲ್ಲೂಕಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ಅದೇ ರೀತಿ, ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ, ಭೀಮಾ ನದಿಗೆ ನೀರು ಹರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಇಂಡಿ ತಾಲ್ಲೂಕಿನ ರೈತರ ಪರವಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಿದಾನಂದ ಗಚ್ಚಿನಮಠ, ಶಂಕರಗೌಡ ಬಂಡಿ, ಮಂಜು ಶಾಹಾಬಾದಿ, ಡಾ. ಹಣಮಂತ ಮೋಸಲಗಿ, ಗಂಗಪ್ಪ ಬಡದಾಳ, ಶಿವಮೂರ್ತಿ ಮಾಲಗಿ, ಶರಣಗೌಡ ಪಾಟೀಲ, ಬಸುಸಾವಕಾರ ಕೋರೆ, ಹಣಮಂತ ಸೋನ್ನ, ವಿಠಲ ಪೂಜಾರಿ, ಸಲ್ಲು ನದಾಪ್ಪ, ಶ್ರೀಶೈಲ ಲಬ್ಬಾ, ಶಂಕರ ಮಡಗೋಂಡ, ಗಜಾನನ ಪಾಟೀಲ, ನಿಯಾಝ್ ಅಗರಖೇಡ, ದುಂಡು ಬಿರಾದಾರ, ಫಜಲು ಮುಲ್ಲಾ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ರೈತರು ಭೀಮಾ ನದಿಗೆ ಶೀಘ್ರ ನೀರು ಹರಿಸಿ ಬರಪೀಡಿತ ಪ್ರದೇಶದ ಕೃಷಿ ಹಾಗೂ ಜನಜೀವನವನ್ನು ಉಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

 

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಲ್ಯ ವಿವಾಹ ಸಾಮಾಜಿಕ ಅನಿಷ, ಎಲ್ಲಾ ಇಲಾಖೆ ಸಮುದಾಯದ ಸಹಕಾರದಿಂದ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಿಸಿಬೇಕಾಗಿದೆ: ಮಂಜುನಾಥ ನಾಯಕಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರೋತ್ಸವಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕೆಲಸವಾಗಬೇಕು: ಆರ್ ಆರ್ ಕುಲಕರ್ಣಿ ಜುಲೈ ೨೦ರಂದು ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ  ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮ ಶಿವಯೋಗದ ಮಹಾಪರ್ವತ ಶ್ರೀಮುರುಘೇಂದ್ರ ಶಿವಯೋಗಿಗಳು : ಡಾ.ಶಂಭುಲಿಂಗ ಹೆಗಡಾಳ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ನಿಯೋಗ ಮನವರಿಕೆ: 93 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಒಪ್ಪಿದ KHB ಅಧಿಕಾರಿಗಳು ಅಛಲ ನಿರ್ಧಾರ ದೊಂದಿಗೆ ಅಧ್ಯಯನ ಮಾಡಿದರೆ ಜೀವನದಲ್ಲಿ ಯಶಸ್ಸು : ಸಾಲಿಮಠಮಾದ್ಯಮರತ್ನ ರಾಜ್ಯ ಪ್ರಶಸ್ತಿಗೆ ಘೋರ್ಪಡೆ ಆಯ್ಕೆ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಮನವಿ