ಜನಮನ ಸೆಳೆದ ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ
ಬಳ್ಳಾರಿ ಮಾ. 10..: ನೃತ್ಯ, ನಾಟಕ,ಮತ್ತು ಸಂಗೀತ ಮನುಷ್ಯನ ಭಾವನೆಗಳಿಗೆ ಜೀವ ತುಂಬುವ ಶಕ್ತಿ ಕಲೆಗಳಾಗಿವೆ ವಿದ್ಯಾರ್ಥಿಗಳಿಗೆ ಆಲೋಚಿಸುವಂತೆ ಮಾಡಿ ಅವರ ಸಾಧನೆಗೆ ದಾರಿ ತೋರುವ ಶಕ್ತಿ ಈ ನೆಲದ ಕಲೆ ಸಂಸ್ಕೃತಿಯಲ್ಲಿ ಮಾತ್ರ ಇರುವುದು ವಿಶೇಷ, ಮನುಷ್ಯ ಶವ ಆಗುವುದರೊಳಗಾಗಿ ಶಿವನನ್ನು ಕಾಣಬೇಕು ಆಗ ಮಾತ್ರ ಮನುಷ್ಯನ ಬದುಕಿಗೆ ಸಾರ್ಥಕ ಆಗುತ್ತದೆ ಇಂತಹ ಕೆಲಸ ಇವತ್ತು ನೇತ್ರಕಲಾ ಸಂಘ ಮಾಡುತ್ತಿದೆ ನೇತ್ರ ಎಂದರೆ ಕಣ್ಣು ನೇತ್ರ ಎಂದರೆ ಸತ್ಯ ಸತ್ಯವನ್ನು ಹುಡುಕುವುದು ಸತ್ಯವನ್ನು ಕಾಣುವುದು ಸತ್ಯದ ಜೊತೆಗೆ ಬದುಕುವುದು ಎಂದರ್ಥ ಕಲಾಸಂಘವನ್ನು ಸ್ಥಾಪಿಸಿ 15 ವರ್ಷಗಳ ನಿರಂತರ ಸಾಂಸ್ಕೃತಿಕ ಸಾಮಾಜಿಕ ಬೀದಿ ನಾಟಕಗಳ ಮೂಲಕ ಜನಜಾಗೃತಿ ಸೇವೆಯನ್ನು ಮಾಡುತ್ತಾ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ ಸುಮಾರು 86 ಜನ ಸಾಧಕರನ್ನು ಗುರುತಿಸಿ ಗೌರವಿಸುವುದು ಸಾಮಾನ್ಯ ಸಂಗತಿಯಲ್ಲ ನೇತ್ರ ಕಲಾ ಸಂಘದ ಪ್ರಯತ್ನ ಬಹುದೊಡ್ಡ ಸಾಧನೆ
ಇಂತಹ ಸಾರ್ಥಕ ಕೆಲಸಗಳು ಮಾಡುವ ಸಂಘ ಸಂಸ್ಥೆಗಳಿಗೆ ಸಮಾಜದ ಸಹಾಯ ಸಹಕಾರ ಸದಾ ಇರಬೇಕೆಂದು ಯುವ ಉದ್ಯಮಿ ಚಂದ್ರಶೇಖರ್ ಗೌಡ ತಿಳಿಸಿದರು.
ಅವರು ದೊಡ್ಡನಗೌಡ ರಂಗಮಂದಿರದಲ್ಲಿ
ನೇತ್ರಕಲಾ ಸಂಘ (ರಿ) ಸಿರುಗುಪ್ಪ
ವತಿಯಿಂದ ಆಯೋಜಿಸಲಾಗಿದ್ದ
15ನೇ ವಾರ್ಷಿಕೋತ್ಸವದ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 2026 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ,
ಕಲಾವಿದರನ್ನು ಸನ್ಮಾನಿಸಿದರೆ ಕಲೆಯನ್ನೆ ಗೌರವಿಸಿದಂತೆ ವೇದಿಕೆಯು ಪ್ರತಿಯೊಬ್ಬ ಕಲಾವಿದರಿಗೂ ಬದುಕುವ ಶಕ್ತಿ ನೀಡುತ್ತದೆ
ಇಂತಹ ಕಲಾವಿದರನ್ನು ಗೌರವಿಸುವುದು ಸಂಘ ಸಂಸ್ಥೆಗಳ ಕೆಲಸ ಮಾಡಬೇಕೆಂದು ಹೇಳಿದರು
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮೇಯರ್ ಪಿ. ಗಾದೆಪ್ಪ ಮಾತನಾಡಿದರು
ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಶಕ್ತಿ ಕಲಾವಿದರಿಗೆ ಇದೆ ವ್ಯಕ್ತಿಯ ಜೀವನವನ್ನು ರೂಪಿಸಲು ಕಲೆ ಮುಖ್ಯ ಕಾರಣವಾಗುತ್ತದೆ ಉದಾಹರಣೆಗೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ದೇವಸ್ಥಾನದ ಅರ್ಚಕನಾಗಿ ಒಂದು ಯುವಕ ಸಂಘವನ್ನು ಕಟ್ಟಿ ಅದರ ಮೂಲಕ ಸಾಮಾಜಿಕ ಸೇವೆಯನ್ನು ಮಾಡಿ ಇಂದು ಈ ಒಂದು ಸ್ಥಾನವನ್ನು ಅಲಂಕರಿಸಿದ್ದೇನೆ ಕಾರಣ ಈ ಒಂದು ಸಾಮಾಜಿಕ ಸೇವೆ ಮತ್ತು ಕಲೆ ಅಂತ ಶಕ್ತಿ ಕಲೆಗೆ ಮಾತ್ರ ಇದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿಕ್ಕುಂತಿ ಮಹಾಮಠದ ಬಸವಲಿಂಗ ಮಹತ್ವಗಳು ಮತ್ತು ಶಿವಮೂರ್ತಿ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ ನಾಗರಾಜ್ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎ ಮಾನಯ್ಯ ಹಿರಿಯ ಸಾಹಿತಿ ಗಂಗಾಧರ್ ಪತ್ತಾರ ಕಲಾ ಸಂಘದ ಅಧ್ಯಕ್ಷ ದಳವಾಯಿ ಈರಣ್ಣ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಎಲ್ಲನಗೌಡ ಶಂಕರ ಬಂಡೆ ರಂಗ ತೋರಣದ ಪ್ರಭುದೇವ್ ಕಪ್ಪಗಲ್ ಕಲಾಸಂಘದ ಕಾರ್ಯದರ್ಶಿ ವೀರೇಶ್ ದಳವಾಯಿ ತಿಪ್ಪೇಸ್ವಾಮಿ ಮುದ್ದಟನೂರು ಸುಂಕಪ್ಪ ಎರಗುಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಜಾನಪದ ನೃತ್ಯ ಶಾಸ್ತ್ರೀಯ ನೃತ್ಯ ಹಾಗೂ ಭರತನಾಟ್ಯ ನೃತ್ಯಗಳು ಪ್ರೇಕ್ಷಕರ ಹಾಗೂ ಸಭಿಕರ ಜನಮನ ರಂಜಿಸಿದವು.
ಕಾರ್ಯಕ್ರಮದ ನಿರೂಪಣೆ ಸೌಮ್ಯ ಮತ್ತು ಎರ್ರಿಸ್ವಾಮಿ ನಡೆಸಿಕೊಟ್ಟರು ಹನುಮಯ್ಯ ತಂಡದವರಿಂದ ನಾಡಗೀತೆ ಹಾಗೂ ರೈತ ಗೀತೆ ನಡೆಸಿಕೊಟ್ಟರು
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಂಗೀತ ಬೈಲಾಟ ರಂಗಭೂಮಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ವಿಶೇಷವಾಗಿ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.


