ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸಿವಂತೆ ವಿದ್ಯುತ್ ಗುತ್ತಿಗೆದಾರ ಸಂಘದಿಂದ ಮನವಿ 

A B
By A B
ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸಿವಂತೆ ವಿದ್ಯುತ್ ಗುತ್ತಿಗೆದಾರ ಸಂಘದಿಂದ ಮನವಿ 
WhatsApp Group Join Now
Telegram Group Join Now
ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸಿವಂತೆ ವಿದ್ಯುತ್ ಗುತ್ತಿಗೆದಾರ ಸಂಘದಿಂದ ಮನವಿ
ಬಳ್ಳಾರಿ. ಮಾ. 10. : ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಗೃಹಬಳಕೆ ಹಾಗೂ ವಾಣಿಜ್ಯ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರು ಸ್ವಾಧೀನ ಅನುಭವ ಪತ್ರ ಸಲ್ಲಿಸಬೇಕು ಎಂದು ನಿಯಮವಿದ್ದರೂ, ಬಳ್ಳಾರಿ ಜಿಲ್ಲೆಯ ಕೆಲವು ವಿದ್ಯುತ್ ಉಪವಿಭಾಗಗಳಲ್ಲಿ ಒಂದೇ ರೀತಿಯ ನಿಯಮ ಪಾಲನೆ ಮಾಡುತ್ತಿಲ್ಲ  ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಜಗನ್ ಆರೋಪಿಸಿದ್ದಾರೆ.
ಅವರು ಇಂದು ಗುತ್ತಿಗೆದಾರರ ಸಂಘದ ವತಿಯಿಂದ ಜೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ  ಬಳ್ಳಾರಿ ನಗರ ಮತ್ತು ಜಿಲ್ಲೆಯಲ್ಲಿ
ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು  ಹಿರಿಯ ಅಧಿಕಾರಿಗಳ ಗಮನ ಸೆಳೆದು
 ಕೆಲವೆಡೆ ಉದ್ದಿಮೆ ಪರವಾನಿಗೆ ಇದ್ದರೂ ಸಹ ಸ್ವಾಧೀನ ಅನುಭವ ಪತ್ರವನ್ನು ಕೇಳಲಾಗುತ್ತಿದೆ ಎಂದು ತಿಳಿಸಿದೆ.
ಸಣ್ಣ ಕೈಗಾರಿಕೆಗಳಿಗೆ (LT-5) ವಿದ್ಯುತ್ ಸಂಪರ್ಕ ನೀಡಲು ಸ್ಥಳೀಯ ಸಂಸ್ಥೆಗಳಿಂದ ಉದ್ದಿಮೆ ಪರವಾನಿಗೆ ಕಡ್ಡಾಯವಾಗಿದ್ದರೂ, ಅಧಿಕಾರಿಗಳು ಹೆಚ್ಚುವರಿ ದಾಖಲೆಗಳನ್ನು ಕೇಳಿ ಗ್ರಾಹಕರಿಗೆ ತೊಂದರೆ ನೀಡುತ್ತಿದ್ದಾರೆ ಹಿರಿಯ ಅಧಿಕಾರಿಗಳು ಈ ಕುರಿತು ದಾಖಲೆ ಪಡೆಯುವ ವಿಷಯದಲ್ಲಿ  ಗಮನಹರಿಸಿ ಕನಿಷ್ಠ ದಾಖಲೆಗಳನ್ನು ಪಡೆದು ಸಂಪರ್ಕ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿ ಹೇಳಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ .
 ಸರ್ಕಾರದಿಂದ 30×40 ನಿವೇಶನಗಳಲ್ಲಿ 1200 ಚದರ ಅಡಿ ವರೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಸ್ವಾಧೀನ ಅನುಭವ ಪತ್ರದಿಂದ ವಿನಾಯಿತಿ ನೀಡಿದ್ದರೂ ಸಹ ಸಂಪರ್ಕ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ ಅವರು
ಕಲ್ಯಾಣ ಕರ್ನಾಟಕ ಪ್ರದೇಶ ಹಿಂದುಳಿದ ಭಾಗವಾಗಿರುವುದರಿಂದ ಇಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ವಿನಾಯಿತಿ ನೀಡಬೇಕು ಎಂದು ಸಂಘದವತಿಯಿಂದ ಒತ್ತಾಯಿಸಿ,  ಪಕ್ಕದ ರಾಜ್ಯಗಳಲ್ಲಿ ಮೀಟರ್ ದರ ಕಡಿಮೆ ಇದ್ದು, ಕರ್ನಾಟಕದಲ್ಲಿ ಕಂಪನಿಗಳು ಮೂರು ಪಟ್ಟು ಹೆಚ್ಚು ದರ ವಸೂಲಿ ಮಾಡುತ್ತಿವೆ  ಈ ಕುರಿತು ತಾವುಗಳು  ಹೆಚ್ಚು ದರ ವಸೂಲಿ ಮಾಡಿದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಕೆಇಆರ್‌ಸಿ ನಿಯಮದ ಪ್ರಕಾರ ಮೀಟರ್ ಅನ್ನು ವಿದ್ಯುತ್ ಕಂಪನಿಗಳೇ ಒದಗಿಸಬೇಕು. ಆದರೆ ಇಲ್ಲಿನ ಅಧಿಕಾರಿಗಳು ಗ್ರಾಹಕರೇ ಮೀಟರ್ ಖರೀದಿಸಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ದೂರಲಾಗಿದೆ.
ಇದೇ ವೇಳೆ 2023–24ರ ಜಂಗಲ್ ಕಟ್ಟಿಂಗ್ ಕೆಲಸಗಳ ಬಿಲ್ಲುಗಳನ್ನು ಅಧಿಕಾರಿಗಳು ಪಾಸ್ ಮಾಡದೆ ತಡೆಹಿಡಿದಿದ್ದಾರೆ, ಜೆಸ್ಕಾಂ ಲೆಕ್ಕಾಧಿಕಾರಿಗಳು  ಬಿಲ್ ಪಾಸ್ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಸಂಘ ದೂರಿದ ಅವರು
ಈ ಎಲ್ಲಾ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇ ಎಲ್ಲಾ  ಸಮಸ್ಯೆಗಳು ಪರಿಹಾರವಾಗದಿದ್ದರೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಸಂಘ ಎಚ್ಚರಿಕೆಯಾಕೆಯನ್ನು  ನೀಡಿದೆ.
 ಈ ಸಂದರ್ಭದಲ್ಲಿ  ಜಾವಿದ್ ಅಹ್ಮದ್, ಕೆಎಂ  ವೀರೇಶ್, ರೆಹಮಾತುಲ್ಲಾ, ದಾದಾಪೀರ್, ಸುಭಾಷ್ ಇದ್ದರು.
WhatsApp Group Join Now
Telegram Group Join Now
Share This Article