LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ವನ್ಯಜೀವಿಗಳಿಗೂ ಮಾನವರಂತೆ ಮನಸ್ಸಿದೆ, ಅವುಗಳನ್ನು ಪ್ರೀತಿಸೋಣ: ಡಿಎಫ್‌ಒ ಮಲ್ಲಿನಾಥ ಕುಸನಾಳ

ಇಂಡಿ : ಪ್ರಾಣಿ, ಪಕ್ಷಿಗಳು, ಅರಣ್ಯದಲ್ಲಿ ಜೀವಿಸುವ ಪ್ರತಿಯೊಂದಕ್ಕು ಮಾನವರಂತೆ ಜೀವವಿದೆ, ಅವುಗಳಿಗೂ ಅಸೆ, ಆಕಾಂಕ್ಷೆ ಇರೋದು ಸಹಜ, ಅವುಗಳಿಗೂ ಬಂಧು ಬಳಗದ ಅರಿವಿದೆ, ಸಂತೋ?ದಿಂದ ಬಾಳುವ ಆಸೆಯಿದೆ, ನಮ್ಮಂತೆ ಮೃದುವಾದ ಮನಸ್ಸಿದೆ, ಆದ್ದರಿಂದ ನಾವುಗಳು ಅವುಗಳಿಗೆ ಪ್ರೀತಿಸೋಣ, ನಯ ವಿನಯದಿಂದ ಅವುಗಳೊಂದಿಗೆ ಇರೋಣ ಎಂದು ಪ್ರಾದೇಶಿಕ ಉಪ ವಿಭಾಗಾಧಿಕಾರಿ ವಿಜಯಪುರ (ಡಿಎಪೋ) ಮಲ್ಲಿನಾಥ ಕುಸನಾಳ ಮಾತನಾಡಿದರು.
         ಝಳಕಿ ಗ್ರಾಮದ ಪಾಲಿಟೆಕ್ನಿಕ ಕಾಲೇಜಿನ ಸಭಾಂಗಣದಲ್ಲಿ ೭೨ನೇ ವನ್ಯ ಜೀವಿಗಳ ಸಪ್ತಾಹ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
          ಪ್ರಾದೇಶಿಕ ಉಪ ವಿಭಾಗಾಧಿಕಾರಿ ವಿಜಯಪುರ(ಎಸಿಎಫ್) ಸೆಲ್ವಾರಜಿ ನಾಯಕರ ಮಾತನಾಡಿ ಪ್ರಾಣಿಯಾಗಿರಲಿ, ಪಕ್ಷಿಯಾಗಿರಲಿ ಅಥವಾ ಮಾನವನಾಗಲಿ ಎಲ್ಲರೂ ದೇವರು ಕರುಣಿಸಿದ ಕೃಪಾಶೀರ್ವಾದ, ಆದ್ದರಿಂದ ಪ್ರಾಣಿಗಳನ್ನು ಪ್ರಿತಿಸಿ, ಅವುಗಳ ವಧೆ ಮಾಡೊದು, ಬೆಟೆ ಆಡುವದು, ಅಹಾರಕ್ಕಾಗಿ ಬಳಸೊದು, ಹಬ್ಬ ಹರಿದಿನಗಳ ನೆಪದಲ್ಲಿ ಅವುಗಳನ್ನು ಕೊಲ್ಲೊದು ಅಕ್ಷಮ್ಯ ಅಪರಾಧ, ಇಂತಹ ಕೃತ್ಯಗಳು ಕಂಡು ಬಂದಲ್ಲಿ ಕುಡಲೆ ಅಧಿಕಾರಿಗಳ ಗಮನಕ್ಕೆ ತನ್ನಿ, ತಾವುಗಳು ಯವುದೆ ರಿತಿಯ ತಪ್ಪು ಮಾಡದಿರಿ, ಒಂದು ವೇಳೆ ಪ್ರಾಣಿಗಳ, ಪಕ್ಷಿಗಳ ಬೆಟೆ ಆಡಿದಲ್ಲಿ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವದು ಎಂದರು.
ಆರ್.ಎಪ್.ಓ ಎಸ್. ಜಿ. ಸಂಗಾಲಿಕ ಮಾತನಾಡಿ ಕೇವಲ ಪ್ರಾಣಿ, ಪಕ್ಷಿಗಳಲ್ಲ ನಮ್ಮ ಕಾಲೇಜಿನ, ಗ್ರಾಮದ ವಾತಾವರಣ ಶುದ್ಧವಾಗಿರಲು ನಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆಯಿಂದರಲಿ, ಮರಗಳನ್ನು ಬೆಳೆಸುವ ಹವ್ಯಾಸಬೆಳೆಸಿಕೊಳ್ಳಿ, ನಾವು ಬದುಕಲು ಸ್ವಚ್ಛತೆಯ ವಾತಾವರಣ ಬೇಕು, ಸುತ್ತಲು ಪಕ್ಷಿಗಳ ಚಿಲಿಪಿಲಿ ಶಬ್ದದಿಂದ, ಗೀಡ ಮರಗಳ ಹಸಿರಿನ ನೊಟ ನಮ್ಮ ದೇಹಕ್ಕೆ, ಮನಸ್ಸಿಗೆ ವಳ್ಳೆಯ ರಕ್ಷಣೆ ಕೊಡುತ್ತದೆ ಎಂದರು.
ಈ ಸಂದರ್ಬದಲ್ಲಿ ಕಾಲೇಜಿನ ವಿದ್ಯಾಥಿಗಳಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎಂಬ ಎರಡು ತಂಡಗಳಾಗಿ ವಿಂಗಡಿಸಿ, ಸಂವಾದ ಕಾರ್ಯಕ್ರಮ ಎರ್ಪಡಿಸಲಾಗಿ ಈ ಸ್ಪರ್ದೆಯಲ್ಲಿ ಪರಿಸರ ಸಂರಕ್ಷಣೆ ತಂಡ ವಿಜೆತರಾಗಿ ಮೊದಲೆನೆ ಬಹುಮಾನ ಗಿಟ್ಟಿಸಿಕೊಂಡರು, , ಆರ್.ಎಪ್.ಓ ಮಂಜುನಾಥ ಧೂಳೆ ಮಾತನಾಡಿ ವನ್ಯ ಜಿವಿಗಳ ಸಪ್ತಾಹದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. 
 ಕಾಲೇಜಿನ ಪ್ರಾಂಶುಪಾಲರು ಶಹನಾಜ ನಾಡದಾಳ, ರಾಜೇಶ್ವರಿ ತಿವಾರಿ, ಮಾಲತಿ ಸಜ್ಜನ, ರಾಜಶಖರ ಸಜ್ಜನ, ಪ್ರವಿಣ ಹೆಬ್ಬಾಳಕರ, ಅರಣ್ಯ ಅಧಿಕಾರಿ ಎಚ್.ಕೆ.ಮಳ್ಲಿ, ಹಣಮಂತ ಲೋಣಿ, ಯಲ್ಲಪ್ಪ ಸಿನಖೆಡ, ಗೌಡಪ್ಪ ಸೊನಕನಳ್ಳಿ, ಪಿ.ಎಚ್.ಹೆಬ್ಬಳಕರ, ಅನಿಲ ಚಾಟ, ಪಿಂಟು ಪವಾರ, ಹಾಗೂ ಕಾಲೆಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವನ್ಯಜೀವಿಗಳಿಗೂ ಮಾನವರಂತೆ ಮನಸ್ಸಿದೆ, ಅವುಗಳನ್ನು ಪ್ರೀತಿಸೋಣ: ಡಿಎಫ್‌ಒ ಮಲ್ಲಿನಾಥ ಕುಸನಾಳದೈನಂದಿನ ಜೀವನದಲ್ಲಿ ಪ್ರಾಣಾಯಾಮದಿಂದ ಆರೋಗ್ಯ ಮತ್ತು ಮನಃಶಾಂತಿ: ಅಮೃತಾಂನಂದ ಮಹಾಸ್ವಾಮಿಗಳ ಬೋಧನೆಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ಅವರ 59ನೇ ಜನ್ಮದಿನದ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರಕೊಪ್ಪಳದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಸಾಮೂಹಿಕ ಪಿಂಡ ಪ್ರದಾನ ಹಾಗೂ ಪಿತೃ ತರ್ಪಣಬಳ್ಳಾರಿಯ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ  11ನೇ ವರ್ಷದ ಶರನ್ನವರಾತ್ರಿ ಉತ್ಸವ ಇಂದು ಹನುಮಾನ್ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಮೂಳೆಯ ಗುಣಮಟ್ಟ ಕಡಿಮೆ ಇರುವ ರೋಗಿಗಳಲ್ಲಿ ಆಂಕರ್‌ರಹಿತ ರಿಪೇರ್‌ಗೆ ನೆರವಾಗುವ ಸಾಧನ ಅಭಿವೃದ್ಧಿಹೊಸಪೇಟೆಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆಗ್ರಾಮೀಣ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ: ಶಾಸಕ ವಿಶ್ವಾಸ ವೈದ್ಯಸಮಾಜದ ಓರೆಕೋರೆಗಳನ್ನು ತಿದ್ದುವ ವರದಿಗಾರರು ಶ್ರೇ?ರು: ಧರೆಪ್ಪ ಸಾಂಗ್ಲೀಕರ