ಇಂಡಿ : ದೈನಂದಿನ ಜೀವನದಲ್ಲಿ ಪ್ರಾಣಾಯಾಮ ಮಾಡುವುದರಿಂದ ದೇಹ ಮತ್ತು ಮನಸ್ಸು ಆರೋಗ್ಯವಾಗಿ ಹಾಗೂ ಪ್ರಶಾಂತವಾಗಿರುತ್ತದೆ ಎಂದು ಲೋಣಿ ಬಿಕೆ ಎಲ್ಲಿ ನಡೆದ ೯ನೇ ದಿನದ ಅಧ್ಯಾತ್ಮ ಪ್ರವಚನದಲ್ಲಿ ಅಮೃತಾಂನಂದ ಮಹಾಸ್ವಾಮಿಗಳು ಪ್ರಾಣಾಯಾಮದ ಮಹತ್ವ ವಿವರಿಸಿದರು.
ಪ್ರಾಣಾಯಾಮದ ಪ್ರಮುಖ ಪ್ರಯೋಜನಗಳು,
ರಕ್ತ ಸಂಚಾರ ದೇಹದಲ್ಲಿ ರಕ್ತ ಸಂಚಾರ ಹಾಗೂ ಆಮ್ಲಜನಕದ ಮಟ್ಟ ಹೆಚ್ಚಾಗುತ್ತದೆ, ಶ್ವಾಸಕೋಶ ಬಲ ಹೃದಯ ಮತ್ತು ಶ್ವಾಸಕೋಶದ ಕಾರ್ಯಕ್ಷಮತೆ ಸುಧಾರಿಸುತ್ತದೆ, ಒತ್ತಡ ನಿವಾರಣೆ ಮಾನಸಿಕ ಒತ್ತಡ, ಆತಂಕ ಹಾಗೂ ಖಿನ್ನತೆ ಕಡಿಮೆಯಾಗುತ್ತದೆ, ಏಕಾಗ್ರತೆ: ಮನಸ್ಸಿನ ಏಕಾಗ್ರತೆ ಮತ್ತು ಸ್ಮರಣಶಕ್ತಿ ವೃದ್ಧಿಯಾಗುತ್ತದೆ, ನಿದ್ರೆ ನಿದ್ರೆಯ ಗುಣಮಟ್ಟ ಉತ್ತಮಗೊಳ್ಳುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.
ರೋಗ ನಿಯಂತ್ರಣ ಅಧಿಕ ರಕ್ತದೊತ್ತಡ ಮತ್ತು ಅಸ್ತಮಾ ತೊಂದರೆಗಳು ನಿಯಂತ್ರಣಕ್ಕೆ ಬರುತ್ತವೆ.
ಮನಸ್ಸು ಎಂಬ ಮಂಗ್ಯಾ, ಅಹಂಕಾರ ಎಂಬ ಭೂತ, ಅಸೆ ಇವುಗಳೆಲ್ಲ ಕುಡಿದಾಗ ಜೀವನಕ್ಕೆ ಅರ್ಥ ಇರೋದಿಲ್ಲ, ಸಿಟ್ಟು ಬಂದಾಗ ಅದನ್ನು ಹಿಡಿತದಲ್ಲಿ ಇಡೋದಕ್ಕೆ ದೇವರ ನಾಮಸ್ಮರಣೆ, ಶಾಂತತೆ ಬಹಳ ಮುಖ್ಯ ಇದನ್ನು ಅರಿತವನೆ ಜೀವನ ಗೆಲ್ಲಲು ಸಾಧ್ಯ ಎಂದರು.
೧೧ ರಂದು ರವಿವಾರ ಬೆಳಿಗ್ಗೆ ಊಟಗಿ ಮಲ್ಟಿ ಸ್ಪೆ?ಲ್ ಆಸ್ಪತ್ರೆ ಇವರಿಂದ ಉಚಿತ ಆರೋಗ್ಯ ತಪಾಸಣೆ ಇದ್ದು ತಾವೆಲ್ಲರೂ ಅದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಫೋಟೊ ಕ್ಯಾಪ್ಸನ್ ೧೦ ಇಂಡಿ ೦೨ : ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ನಡೆದ ೯ನೇ ದಿನದ ಅಧ್ಯಾತ್ಮ ಪ್ರವಚನದಲ್ಲಿ ಅಮೃತಾಂನಂದ ಮಹಾಸ್ವಾಮಿಗಳು ಪ್ರಾಣಾಯಾಮದ ಮಹತ್ವ ವಿವರಿಸಿದರು.