ಮೂಡಲಗಿ : ಪಟ್ಟಣದ ವಿದ್ಯಾನಗರದಲ್ಲಿರುವ ಶ್ರೀ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನ ೨೧ ವಸಂತಗಳ ಬಳಿಕ ಪುನರಾರಂಭವಾಗುತ್ತಿರುವ ಅಂಗವಾಗಿ ಇಂದು ರವಿವಾರ ದಿನಾಂಕ ೧೧ ರಂದು ಬೆಳಗ್ಗೆ ೯ ಗಂಟೆಗೆ ಕುಂಭ ಮೇಳ, ೧೧ ಗಂಟೆಗೆ ಕಳಸಾರೋಹಣ, ೧೧.೩೦ಕ್ಕೆ ಪೂಜಾ ಕಾರ್ಯಕ್ರಮ ಸಾಗಿ ಮಧ್ಯಾನ್ಹ ೧ ಗಂಟೆಗೆ ಅನ್ನಪ್ರಸಾದ ಜರಗುವುದು. ಸಾಯಂಕಾಲ ೬ ಗಂಟೆಗೆ ಘಟಸ್ಥಾಪನಾ ಕಾರ್ಯಕ್ರಮ ಇರುವುದು. ಆದಕಾರಣ ಸಮಸ್ತ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ದೇವಸ್ಥಾನ ಸಮಿತಿಯವರು ಪ್ರಕಟಣೆ ಮೂಲಕ ಕೋರಿದ್ದಾರೆ.